Cheapest Gold : ಅಚ್ಚರಿಯ ವಿಷಯ, ಈ ಸ್ಥಳಗಳಲ್ಲಿ ನಿಮಗೆ ದೊರೆಯಲಿದೆ ಅತಿ ಕಡಿಮೆ ದರದಲ್ಲಿ ಚಿನ್ನ!

Cheapest Gold : ಇತ್ತೀಚಿಗೆ ಚಿನ್ನದ ಬೇಡಿಕೆ ಹೆಚ್ಚುತ್ತಿದೆ ಇದು ನಮಗೆ ಗೊತ್ತಿರುವ ವಿಚಾರ. ಸದ್ಯ ನಾನಾ ವಿಧದ ಲೋಹಗಳಿದ್ದರೂ ಸಹ ಚಿನ್ನದ (gold )ಲೋಹವು ಬಹಳ ಬೆಲೆ ಬಾಳುವ ಲೋಹ ಆಗಿದ್ದು, ಜನರು ಈ ಲೋಹದ ಸಂಗ್ರಹಣೆ ಮಾಡುವ ಕಡೆ ಹೆಚ್ಚಿನ ಒಲವು ತೋರಿಸುತ್ತಾರೆ. ಭಾರತದಲ್ಲಿ ದಿನೇ ದಿನೇ ಚಿನ್ನದ ಬೆಲೆ ಹೆಚ್ಚುತ್ತಿದ್ದರೂ ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಇಂದಿಗೂ ಸಹ ಕಾಯ್ದುಕೊಂಡಿದೆ. ಆಪತ್ತಿನ ಕಾಲದಲ್ಲಿ ಚಿನ್ನವು ಸಹಾಯಕ್ಕೆ ಬರುತ್ತದೆ ಮತ್ತು ಒಂದು ರೀತಿಯ ಹೂಡಿಕೆಯ ಮಾರ್ಗ ಚಿನ್ನ ಸಂಗ್ರಹ ಆಗಿದೆ.

ಇನ್ನು ಭಾರತೀಯರಿಗೆ(india )ಚಿನ್ನದ ಮೇಲಿನ ಒಲವು ಅಪಾರ ಜೊತೆಗೆ ಚಿನ್ನದ ಬೆಲೆ ಕೂಡ ಅಪಾರ. ಆದರೆ ಭಾರತಕ್ಕಿಂತ ಚಿನ್ನವು ಅಗ್ಗವಾಗಿ ಸಿಗುವ ವಿಶ್ವದ ಕೆಲವು ದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ.

• ಅಗ್ಗದ ಮತ್ತು ಗುಣಮಟ್ಟದ ಚಿನ್ನವನ್ನು ಖರೀದಿಯ ವಿಚಾರ ಬಂದಾಗ ದುಬೈ ಹೆಸರು ನೆನಪಾಗುತ್ತದೆ. ದುಬೈನ ಚಿನ್ನದ ಶುದ್ಧತೆ ಹೆಚ್ಚು ಎಂದು ಪರಿಗಣಿಸಲಾಗಿದೆ. ದುಬೈ ನಲ್ಲಿ ಡೇರಾ ಎಂಬ ಹೆಸರಿನ ಸ್ಥಳವಿದೆ. ಈ ಸ್ಥಳವನ್ನು ಗೋಲ್ಡ್ ಸೌಕ್ ಪ್ರದೇಶ ಎಂದು ಕರೆಯಲಾಗುತ್ತದೆ. ಅಂದರೆ ಚಿನ್ನದ ಖರೀದಿಯ ಕೇಂದ್ರವಾಗಿದೆ. ಅಲ್ಲಿಂದ ನೀವು ಉತ್ತಮ ಮತ್ತು ಅಗ್ಗದ ಚಿನ್ನವನ್ನು (Cheapest Gold) ಖರೀದಿಸಬಹುದಾಗಿದೆ.

• ದುಬೈ ನಂತರ ಥೈಲ್ಯಾಂಡ್‌ನಲ್ಲಿ ಅಗ್ಗದ ಬೆಲೆಗೆ ಚಿನ್ನವನ್ನು ಪಡೆಯಬಹುದು. ಹೌದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಚಿನ್ನವನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಥೈಲ್ಯಾಂಡ್‌ನ ಚೈನಾಟೌನ್‌ನಲ್ಲಿರುವ ಯಾವೋರತ್ ರಸ್ತೆ ಇರುವ ಕಡೆಯಲ್ಲಿ ಚಿನ್ನವನ್ನು ಖರೀದಿಸಬಹುದಾಗಿದೆ.

• ಹಾಂಗ್ ಕಾಂಗ್‌ನಲ್ಲಿಯೂ ಚಿನ್ನ ಖರೀದಿದಾರರಿಗೆ ಹೆಚ್ಚಿನ ಸಂಖ್ಯೆಯ ಚಿನ್ನದ ಅಂಗಡಿಗಳು ಲಭ್ಯವಿರುತ್ತವೆ. ಈ ನಗರವು ವಿಶ್ವದ ಅತ್ಯಂತ ಸಕ್ರಿಯವಾದ ಚಿನ್ನದ ವ್ಯಾಪಾರ ಮಾರುಕಟ್ಟೆಯಾಗಿದೆ. ಶಾಪಿಂಗ್ ಹಬ್ ಸ್ವಭಾವಕ್ಕೆ ಹೆಸರುವಾಸಿಯಾದ ಹಾಂಗ್ ಕಾಂಗ್‌ನಲ್ಲಿ ಚಿನ್ನವು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.

• ಸ್ವಿಜರ್ಲೆಂಡ್‌ನ ಚಿನ್ನದ ವಿನ್ಯಾಸಗಳು ಬಹಳ ಪ್ರಸಿದ್ಧವಾಗಿವೆ. ಸ್ವಿಜರ್ಲೆಂಡ್‌ನ ಜ್ಯೂರಿಚ್ ನಗರದಲ್ಲಿ ಜನರು ಉತ್ತಮವಾದ ಚಿನ್ನವನ್ನು ಪಡೆಯಬಹುದು. ಇಲ್ಲಿ ನೀವು ಕೈಯಿಂದ ಮಾಡಿದ ಡಿಸೈನರ್ ಆಭರಣಗಳೊಂದಿಗೆ ಸಾಕಷ್ಟು ವೈವಿಧ್ಯತೆಯನ್ನು ಪಡೆಯಬಹುದು.

ಈ ಮೇಲಿನ ದೇಶಗಳಲ್ಲಿ ಭಾರತಕ್ಕಿಂತ ಚಿನ್ನವು ಅಗ್ಗವಾಗಿ ಸಿಗುತ್ತವೆ. ಅಷ್ಟೇ ಅಲ್ಲ ಉತ್ತಮ ವಿನ್ಯಾಸ ಮತ್ತು ಹೆಚ್ಚಿನ ಶುದ್ಧತೆಯನ್ನು ಸಹ ಒಳಗೊಂಡಿದೆ.

Leave A Reply

Your email address will not be published.