ಪ್ರತಿದಿನ 2ಜಿಬಿ ಡೇಟಾ, ಅನ್‌ಲಿಮಿಟೆಡ್‌ ಕರೆ ನೀಡುವ JIO ಪ್ಲ್ಯಾನ್‌ ಬೆಲೆ ಎಷ್ಟು ಗೊತ್ತೇ?

Cheapest JIO Recharge Plan : ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (Reliance Jio) ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಸದ್ಯ ಜಿಯೋ (Jio) ಹೊಸದಾಗಿ ತನ್ನ ಹಳೆಯ ಜಿಯೋ ರೂ.719 ಯೋಜನೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ. ಇದು 84 ದಿನಗಳ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುವ ಉತ್ತಮ ರೀಚಾರ್ಜ್ ಯೋಜನೆಯಾಗಿದೆ (Jio 84 Days Plan).

ಜಿಯೋದ ಈ ಯೋಜನೆ, ಜಿಯೋದ ಪೋಸ್ಟ್ ಪೇಯ್ಡ್(jio postpaid) ಬಳಕೆದಾರರಿಗೆ ಲಭ್ಯವಾಗುವುದಿಲ್ಲ. ಇದು ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್(Cheapest JIO Recharge Plan ) ಆಗಿದೆ. ಹಾಗೇ ಬಳಕೆದಾರರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಪ್ರತಿದಿನ ಉಚಿತ 2GB ಹೈ ಸ್ಪೀಡ್ ಡೇಟಾದೊಂದಿಗೆ 168GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

ರೂ.719 ರೀಚಾರ್ಜ್ ಪ್ಲ್ಯಾನ್ :
ಈ ಯೋಜನೆ 3 ತಿಂಗಳು ಅಥವಾ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಲ್ಲದೆ, 168 ಜಿಬಿ ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಈ ಡೇಟಾವು ದೈನಂದಿನ ಡೇಟಾ ಕ್ಯಾಪ್ನೊಂದಿಗೆ ಬರುತ್ತದೆ. ಅಂದ್ರೆ, ಜಿಯೋದ 719 ರೀಚಾರ್ಜ್ ಯೋಜನೆಯಲ್ಲಿ ನೀವು ಪ್ರತಿದಿನ 2 ಜಿಬಿ ಡೇಟಾವನ್ನು ಪಡೆಯಬಹುದು. ದೈನಂದಿನ 2 ಜಿಬಿ ಡೇಟಾ ಮಿತಿ ಮುಗಿದರೆ, ಇಂಟರ್ನೆಟ್ ವೇಗವನ್ನು 64 ಕೆಬಿಪಿಎಸ್ಗೆ ಇಳಿಸಲಾಗುತ್ತದೆ.

ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ ಸೇವೆಗಳನ್ನು ಪಡೆಯುತ್ತಾರೆ. ಇದಿಷ್ಟೇ ಆಲ್ಲದೆ, ಈ ಯೋಜನೆಯಲ್ಲಿ ಹಲವು ಉಚಿತ ಅಪ್ಲಿಕೇಶನ್ ಗಳ ಚಂದಾದಾರಿಕೆಯನ್ನೂ ನೀಡಲಾಗುತ್ತದೆ. ಜಿಯೋದ ಅಪ್ಲಿಕೇಶನ್ ಗಳಾದ ಜಿಯೊಟ್ವಿ, ಜಿಯೋಸಿನೆಮಾ, ಜಿಯೋ ಕ್ಲೌಡ್ ಮತ್ತು ಜಿಯೋಸೆಕ್ಯೂರಿಟಿಗೆ ಚಂದಾದಾರಿಕೆಯೂ ಇದರಲ್ಲಿ ಒಳಗೊಂಡಿದೆ. ಸದ್ಯ ಈ ರೀಚಾರ್ಜ್ ಪ್ಲ್ಯಾನ್ ಜಿಯೋ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ.

Leave A Reply

Your email address will not be published.