Home Education CBSE Exam 2023 Guidelines : 10th,12th ವಿದ್ಯಾರ್ಥಿಗಳೇ ಗಮನಿಸಿ, ಪರೀಕ್ಷಾ ಮಾರ್ಗಸೂಚಿ ಬಿಡುಗಡೆ!

CBSE Exam 2023 Guidelines : 10th,12th ವಿದ್ಯಾರ್ಥಿಗಳೇ ಗಮನಿಸಿ, ಪರೀಕ್ಷಾ ಮಾರ್ಗಸೂಚಿ ಬಿಡುಗಡೆ!

Hindu neighbor gifts plot of land

Hindu neighbour gifts land to Muslim journalist

CBSE Exam 2023 Guidelines :10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು (CBSE Exam 2023 Guidelines), ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು (Board exams) ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಎಲ್ಲಾ ಶಾಲೆಗಳು ಉತ್ತರ ಪುಸ್ತಕಗಳನ್ನು ಅಂಚೆ ಸೇವೆಗಳ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಕಳುಹಿಸುತ್ತಿದ್ದು, ಇನ್ನು ಮುಂದೆ ಆ ಎಲ್ಲಾ ಉತ್ತರ ಪುಸ್ತಕಗಳನ್ನು (Answer Book) ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಕಳುಹಿಸಬೇಕು ಎಂದು ಹೇಳಲಾಗಿದೆ . ಆದರೆ, ಈ ಉತ್ತರ ಪುಸ್ತಕಗಳನ್ನು ವೈಯಕ್ತಿಕವಾಗಿ ಅಥವಾ ನಗರ ಸಂಯೋಜಕರ ಸಹಾಯದಿಂದ ಪ್ರಾದೇಶಿಕ ಕಚೇರಿಗೆ ತಲುಪಿಸಿದರೆ, ಆಗ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಕಳುಹಿಸುವ ಅಗತ್ಯವಿಲ್ಲ ಎನ್ನಲಾಗಿದೆ.

ಹಾಗೆಯೇ ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ವಾಟ್ಸಾಪ್ ಸಂದೇಶವನ್ನು ಕಳುಹಿಸಬಾರದು ಎಂದು ಮಂಡಳಿ ಆದೇಶಿಸಿದೆ. ಸಿಬಿಎಸ್‌ಇ ಅಥವಾ ಬೋರ್ಡ್ ಪರೀಕ್ಷೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಬೇರೆ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಮಾಡಬಾರದು, ಸಂಪರ್ಕ ನಿಷೇಧಿಸಿದೆ. ಅಲ್ಲದೆ, ಬೋರ್ಡ್ ಪರೀಕ್ಷೆಯ ಬಗ್ಗೆ ಏನಾದರೂ ಅನುಮಾನಗಳಿದ್ದಲ್ಲಿ ಸಿಬಿಎಸ್‌ಇ ನೀಡಿರುವ ಅಧಿಕೃತ ಲಿಂಕ್ parikshasangam.cbse.gov.in ಇದನ್ನು ಬಳಸಿ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಬೇಕು ಎಂದು ಮಂಡಳಿ ಸೂಚನೆ ನೀಡಿದೆ.

CBSE 10 ಮತ್ತು 12 ನೇ ತರಗತಿಯ ಪರೀಕ್ಷೆಗಳು ಈಗಾಗಲೇ ಆರಂಭವಾಗಿದ್ದು, ಫೆಬ್ರವರಿ 15 ರಿಂದ ಪ್ರಾರಂಭವಾಗಿದೆ. ಹಾಗೆಯೇ 10 ನೇ ತರಗತಿಯ ಪರೀಕ್ಷೆ ಮಾರ್ಚ್ 21 ರಂದು ಮತ್ತು 12 ನೇ ತರಗತಿಯ ಪರೀಕ್ಷೆ ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿದೆ ಎನ್ನಲಾಗಿದ್ದು, ಈ ವರ್ಷ CBSE ಬೋರ್ಡ್ ಪರೀಕ್ಷೆಗೆ ಸುಮಾರು 38 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದು, 12 ನೇ ಬೋರ್ಡ್ ಪರೀಕ್ಷೆಗಳಿಗೆ 16.9 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದು ತಿಳಿದುಬಂದಿದೆ.