Gold Investment Tips: ಮಹಿಳೆಯರೇ ನಿಮಗೊಂದು ಉಪಯುಕ್ತ ಮಾಹಿತಿ, ನೀವು ತಿಳಿದುಕೊಳ್ಳಲೇಬೇಕಾದ ಚಿನ್ನದ ಹೂಡಿಕೆಗಳ ಲಿಸ್ಟ್‌ ಇಲ್ಲಿದೆ!

Gold Investment Tips: ಹೂಡಿಕೆ ಮಾಡಲು ಸಾಕಷ್ಟು ಯೋಜನೆಗಳಿವೆ. ಹಾಗೆಯೇ ಚಿನ್ನದ ಹೂಡಿಕೆಗಳೂ(Gold Investment) ಇವೆ. ಸದ್ಯ ಉತ್ತಮ ಚಿನ್ನದ ಹೂಡಿಕೆಯ ಯೋಜನೆ, ಹೂಡಿಕೆ ಮಾಡಬಹುದಾದ ವ್ಯವಸ್ಥೆಯ ಬಗ್ಗೆ ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ಸಿಎ ಅನಾಮಿಕಾ ರಾಣಾ ಹೇಳಿದ್ದಾರೆ. ಇನ್ನು, ಚಿನ್ನದ ಹೂಡಿಕೆಯ ಸಲಹೆಗಳು (Gold Investment Tips) ಇಲ್ಲಿವೆ.

ಸಾವರಿನ್ ಗೋಲ್ಡ್ ಬಾಂಡ್‌ಗಳು (Sovereign Gold Bond) :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾವರಿನ್ ಗೋಲ್ಡ್ ಬಾಂಡ್‌ ಯೋಜನೆಯು, ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ವಾರ್ಷಿಕ 2.5% ರಷ್ಟು ನಿಗದಿತ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಸರ್ಕಾರ ಈ ಯೋಜನೆಯನ್ನು ಚಿನ್ನದ ನಗದೀಕರಣಕ್ಕಾಗಿ ಜಾರಿಗೆ ತಂದಿದ್ದು, ಇದು ಗ್ರಾಂ ಚಿನ್ನದಲ್ಲಿ ಪ್ರಾಬಲ್ಯ ಹೊಂದಿರುವ ಸರ್ಕಾರಿ ಭದ್ರತೆಗಳಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತ ಸರ್ಕಾರದ ಪರವಾಗಿ ಇದನ್ನು ನೀಡುತ್ತದೆ.

ಭೌತಿಕ ಚಿನ್ನ :
ಇದು ದೇಶದಲ್ಲಿ ಚಿನ್ನವನ್ನು ಖರೀದಿಸುವ ಅಥವಾ ಸಂಗ್ರಹಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ಭೌತಿಕ ಚಿನ್ನವನ್ನು ಆಭರಣಗಳು, ನಾಣ್ಯಗಳ ರೂಪದಲ್ಲಿ ಖರೀದಿಸಬಹುದು. ಆಭರಣವನ್ನು ಖರೀದಿಸಿದಾಗ, ಒಟ್ಟಾರೆ ವೆಚ್ಚಕ್ಕೆ ಮೇಕಿಂಗ್ ಶುಲ್ಕವನ್ನು ಸೇರಿಸಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಭೌತಿಕ ಚಿನ್ನದ ಮೇಲಿನ ಆದಾಯ ಬದಲಾಗುತ್ತಿರುತ್ತದೆ.

ಚಿನ್ನದ ಇಟಿಎಫ್‌ಗಳು :
ಚಿನ್ನದ ವಿನಿಮಯ-ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ಹೂಡಿಕೆದಾರರಲ್ಲಿ ಜನಪ್ರಿಯವಾಗಿವೆ. ಚಿನ್ನದ ಇಟಿಎಫ್ ಅಂದ್ರೆ, ಚಿನ್ನದ ಮೇಲೆ ಹೂಡಿಕೆ ಮಾಡುವ ಸಾಧನ. ಇದನ್ನು ಪ್ರಮುಖ ಸ್ಟಾಕ್ ಎಕ್ಸ್ಚೇಂಜ್​​​ಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಚಿನ್ನದ ಇಟಿಎಫ್​​ಗಳು ಚಿನ್ನದ, ಬೆಳ್ಳಿಯ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುತ್ತವೆ. ಅಂದ್ರೆ, ಚಿನ್ನದ ಬೆಲೆ ಹೆಚ್ಚಾದಾಗ, ವಿನಿಮಯ-ವಹಿವಾಟು ನಿಧಿಯ ಬೆಲೆಯೂ ಹೆಚ್ಚಳವಾಗುತ್ತದೆ. ಹಾಗೆಯೇ ಚಿನ್ನದ ಬೆಲೆ ಕಡಿಮೆಯಾದಾಗ, ಇಟಿಎಫ್ ಬೆಲೆಯೂ ಕಡಿಮೆಯಾಗುತ್ತದೆ.

ಗೋಲ್ಡ್ ಮ್ಯೂಚುಯಲ್ ಫಂಡ್‌ (Gold mutual funds) :
ಈ ಯೋಜನೆಯು ಮುಕ್ತ ಯೋಜನೆಯಾಗಿದ್ದು, ಇದರ ಮೂಲಕ ಜನರು ಭೌತಿಕ ಚಿನ್ನ ಅಥವಾ ಇಟಿಎಫ್ ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಆರ್ಥಿಕ ಬಿಕ್ಕಟ್ಟಿಲ್ಲದೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಇವುಗಳು ಉತ್ತಮ ಯೋಜನೆಗಳಾಗಿವೆ. ಮಹಿಳೆಯರಿಗೆ ಚಿನ್ನದಿಂದ ಇಷ್ಟೆಲ್ಲಾ ಉಪಯೋಗ ಆಗಲಿದೆ. ಈ ಯೋಜನೆಗಳ ಹೂಡಿಕೆಯ ಆಯ್ಕೆ ಉತ್ತಮ.

Leave A Reply

Your email address will not be published.