PF ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ !
EPFO Interest Credit : ಈಗಾಗಲೇ 1995 ರಲ್ಲಿ ಹೊಸ ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.
ಇದೀಗ ಉದ್ಯೋಗಾಕಾಂಕ್ಷಿಗಳು ಇಪಿಎಫ್ಒದ ಬಡ್ಡಿ ( EPFO Interest Credit )ಕಾಯುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ. ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2021-22ನೇ ಹಣಕಾಸು ವರ್ಷದ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಹಣವನ್ನು (ಇಪಿಎಫ್ಒ ಬಡ್ಡಿ 2021-22) ಇನ್ನೂ ವರ್ಗಾಯಿಸಿಲ್ಲ. ಹಣಕಾಸು ವರ್ಷದ ಬಡ್ಡಿಯನ್ನು (ಇಪಿಎಫ್ಒ ಬಡ್ಡಿ) ಕಳೆದ ವರ್ಷ ಜೂನ್ನಲ್ಲಿ ಮಾತ್ರ ಅನುಮೋದಿಸಲಾಗಿದೆ.
ಈಗಾಗಲೇ ಮಾರ್ಚ್ 2022 ರಲ್ಲಿ, ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ಇಪಿಎಫ್ಒನ CBT 2021-22 ಕ್ಕೆ ಶೇಕಡಾ 8.1 ರಷ್ಟು ಬಡ್ಡಿಯನ್ನು ಅನುಮೋದಿಸಿತು. ಇದು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ದರ ಆಗಿದೆ.
ಇಪಿಎಫ್ಒ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 2022 ರಲ್ಲಿ, ಸದಸ್ಯರ ಸಂಖ್ಯೆ 14.93 ಲಕ್ಷಗಳಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್ 2022 ರಲ್ಲಿ, ಸದಸ್ಯರ ಸಂಖ್ಯೆಯು ಕಳೆದ ವರ್ಷ ಇದೇ ತಿಂಗಳಿಗಿಂತ 32,635 ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ. ಅದಲ್ಲದೆ ಕಾರ್ಮಿಕ ಸಚಿವಾಲಯವು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ESIC) ವೇತನದಾರರ ಡೇಟಾವನ್ನು ಸಹ ಬಿಡುಗಡೆ ಮಾಡಿದೆ. ಡಿಸೆಂಬರ್ 2022 ರಲ್ಲಿ, 18.03 ಲಕ್ಷ ಹೊಸ ಉದ್ಯೋಗಿಗಳು ESIC ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಈ ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಗರಿಷ್ಠ ಸಂಖ್ಯೆಯ 2.39 ಲಕ್ಷ ಸದಸ್ಯರು 18 ರಿಂದ 21 ವರ್ಷ ವಯಸ್ಸಿನವರಾಗಿದ್ದು 22 ರಿಂದ 25 ವರ್ಷದೊಳಗಿನ 2.08 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಒಟ್ಟು ಹೊಸ ಸದಸ್ಯರಲ್ಲಿ ಶೇ.55.64ರಷ್ಟು ಮಂದಿ 18ರಿಂದ 25 ವರ್ಷದೊಳಗಿನವರು ಆಗಿದ್ದಾರೆ.
ಒಟ್ಟಿನಲ್ಲಿ ವಾರ್ಷಿಕ ಆಧಾರದ ಮೇಲೆ ಹೋಲಿಸಿದರೆ, ಡಿಸೆಂಬರ್ 2021 ಕ್ಕೆ ಹೋಲಿಸಿದರೆ 2022 ರ ಡಿಸೆಂಬರ್ನಲ್ಲಿ ಇಎಸ್ಐ ಯೋಜನೆಗೆ ಕೊಡುಗೆ ನೀಡುವ ಉದ್ಯೋಗಿಗಳ ಸಂಖ್ಯೆ 14.52 ಲಕ್ಷ ಹೆಚ್ಚಾಗಿದೆ. ಡಿಸೆಂಬರ್ 2022 ರಲ್ಲಿ ಇಪಿಎಫ್ಒ ಸೇರಿಸಿದ 14.93 ಲಕ್ಷ ಹೊಸ ಸದಸ್ಯರಲ್ಲಿ 8.02 ಲಕ್ಷ ಮಂದಿ ಮೊದಲ ಬಾರಿಗೆ ಈ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಇರುವುದಾಗಿ ಮಾಹಿತಿ ತಿಳಿಸಲಾಗಿದೆ.
ಅಲ್ಲದೆ ಶೀಘ್ರದಲ್ಲೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2021-22ನೇ ಹಣಕಾಸು ವರ್ಷದ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಹಣವನ್ನು ಹಣ ಜಮಾ ಆಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.