Arun Singh: ರಾಜ್ಯಕ್ಕೆ ಆಗಮಿಸಿದ್ದ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಂಗಳೂರು ಆಸ್ಪತ್ರೆಗೆ ದಾಖಲು!

Share the Article

Arun singh: ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ನಿನ್ನೆ ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ ಎದೆ ನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ (Arun Singh) ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆ ನೋವು ಕಾಣಿಸಿ ಕೊಂಡ ಹಿನ್ನೆಲೆ ಅರುಣ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ ಸಿಂಗ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಎ ಜೆ ಆಸ್ಪತ್ರೆಯಲ್ಲಿ ಅರುಣ್ ಸಿಂಗ್​ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಜೆಪಿ ತಿಳಿಸಿದೆ.

ನೆನ್ನೆ ರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ( J P Nadda) ಹಾಗೂ ಅರುಣ್ ಸಿಂಗ್ ಅವರು ಬಂದು ಇಳಿದಿದ್ದರು. ನೆನ್ನೆ ರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನ ಅಡ್ಡ ಹಾಗೂ ಅರುಣ್ ಸಿಂಗ್ ಅವರು ಬಂದು ಇಳಿದಿದ್ದರು. 10.30ಕ್ಕೆ ಸುಮಾರಿಗೆ ಬಂದಿಳಿದ ಅವರು ಮಂಗಳೂರಿನ ಓಷ್ಯನ್ ಪಾರ್ಲ್ ಹೋಟೇಲಿನಲ್ಲಿ ವಾಸ್ತವ್ಯ ಹೂಡಿದ್ದರು.

ಸದ್ಯ ಆಸ್ಪತ್ರೆಯಲ್ಲಿ ಇಸೀಜಿ(ECG) ನಡೆಸಿದ ಹೃದಯದಲ್ಲಿ ಅರುಣ್ ಸಿಂಗ್ ಅವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಇಲ್ಲ ಎಂದು ಹೇಳಿದ್ದಾರೆ. ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ಬಳಿ ಕರುಣಿಸಿಂಗ್ ಉಡುಪಿಗೆ ತೆರಳಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು(Udupi and Chikkamagalure) ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಇರುವುದರಿಂದ ಇಂದು ಇಬ್ಬರು ಬಿಜೆಪಿ ನಾಯಕರು ಶೃಂಗೇರಿ(Shringeri)ಯಲ್ಲಿ ವಾಸ್ತವ್ಯ ಹೂಡಲ್ಲಿದ್ದಾರೆ.

Leave A Reply