Government Job : ಸರಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಸಿಹಿ ಸುದ್ದಿ !ಮಾಸಿಕ ವೇತನ ರೂ.50ಸಾವಿರ, ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Share the Article

Bengaluru Urban Zilla Panchayat Recruitment : ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಅದರಲ್ಲೂ ಸರಕಾರಿ ಉದ್ಯೋಗವೇ (Government Job) ಬೇಕು ಎಂದು ಹಲವರು ಹರಸಾಹಸ ಪಡುತ್ತಿರುತ್ತಾರೆ. ಅಂತವರಿಗೆ ಇದು ಸಿಹಿಸುದ್ದಿಯೇ ಸರಿ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ (Bengaluru Urban Zilla Panchayat Recruitment) ನ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ : ಜಲ ಸಂಜೀವಿನಿ ಜಿಲ್ಲಾ ಸಂಯೋಜಕ (Jal Sanjeevini District Coordinator)

ಪ್ರಮುಖ ದಿನಾಂಕಗಳು :
ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-02-2023
ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-o2-2023

ವಿದ್ಯಾರ್ಹತೆ : ಅಭ್ಯರ್ಥಿಗಳು B.Sc (ಕೃಷಿ) ಮತ್ತು B.Tech (ಕೃಷಿ ಎಂಜಿನಿಯರಿಂಗ್) ಪೂರ್ಣಗೊಳಿಸಿರಬೇಕು. ಜೊತೆಗೆ ಕನಿಷ್ಠ 1 ವರ್ಷದ ಕೆಲಸದ ಅನುಭವ ಹೊಂದಿರಬೇಕು.

ಅರ್ಜಿದಾರರಿಗೆ ವಯೋಮಿತಿ ಗರಿಷ್ಠ 65 ವರ್ಷ ಆಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.50000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ
ಕಳುಹಿಸಿ.

ವಿಳಾಸ: ಬೆಂಗಳೂರು ನಗರ ಜಿಲ್ಲಾ ಪಂಚಾಯತ್
ಬನಶಂಕರಿ ದೇವಸ್ಥಾನದ ಹತ್ತಿರ
ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು

Leave A Reply