Bank Holidays: ಬ್ಯಾಂಕ್‌ ಗ್ರಾಹಕರೇ ಗಮನಿಸಿ, ಮಾರ್ಚ್ ತಿಂಗಳ ಬ್ಯಾಂಕ್‌ ರಜಾ ಪಟ್ಟಿ ಬಿಡುಗಡೆ ! ಇಲ್ಲಿದೆ ಪಟ್ಟಿ

Bank Holiday list : ಬ್ಯಾಂಕಿಂಗ್ ಸೇವೆಗಳು ಎಲ್ಲರಿಗೂ ಅತೀ ಮುಖ್ಯವಾದುದು. ಪ್ರತಿಯೊಂದು ವ್ಯವಹಾರಗಳು ಬ್ಯಾಂಕಿಂಗ್ ಸೇವೆಗಳಿಂದಲೇ ಆರಂಭವಾಗುವುದು ನಮಗೆ ಗೊತ್ತೇ ಇದೆ. ಸದ್ಯ ಫೆಬ್ರವರಿಯಲ್ಲಿ 10 ದಿನಗಳಷ್ಟು ರಜೆ ಇದ್ದ ಬ್ಯಾಂಕುಗಳಿಗೆ ಮುಂದಿನ ತಿಂಗಳು ಅಂದರೆ ಮಾರ್ಚ್​ನಲ್ಲಿ (March 2023) 12 ದಿನಗಳ ರಜೆ ಇದೆ ಎಂಬ ಮಾಹಿತಿ ದೊರೆತಿದೆ.

ಸದ್ಯ ಮಾರ್ಚ್ ತಿಂಗಳ 12ದಿನಗಳ ರಜೆಯಲ್ಲಿ ಭಾನುವಾರದ ರಜೆಗಳು ಮತ್ತು 2ನೇ ಮತ್ತು 4ನೇ ಶನಿವಾರದ ರಜೆಗಳೂ (2nd and 4th Saturday) ಒಳಗೊಂಡಿವೆ. ಈ ನಿಯಮಿತ ರಜೆಗಳ ಜೊತೆಗೆ ಸಾರ್ವತ್ರಿಕ ರಜಾ ದಿನದಂದು ಬ್ಯಾಂಕುಗಳು ಮುಚ್ಚಿರುತ್ತದೆ. ಪ್ರಾದೇಶಿಕ ರಜೆಗಳು ಆಯಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ. ಈ ಪ್ರಾದೇಶಿಕ ರಜೆಗಳನ್ನು ಆರ್​ಬಿಐ ಬದಲು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಮಾರ್ಚ್ ತಿಂಗಳಲ್ಲಿ ಪ್ರಾದೇಶಿಕ ರಜೆಗಳು ಹಲವಿವೆ. ಕರ್ನಾಟಕದಲ್ಲಿ ಯುಗಾದಿ, ಶ್ರೀರಾಮನವಮಿ ಹಬ್ಬಕ್ಕೆ ರಜೆ ಇದೆ. ಹಾಗೆಯೇ ಬಿಹಾರ, ಮಣಿಪುರಕ್ಕೆ ಅನ್ವಯವಾಗುವ ಹಬ್ಬಗಳೂ ಇವೆ.

ಮುಖ್ಯವಾಗಿ ಬ್ಯಾಂಕುಗಳು ಮುಚ್ಚಿದ್ದರೂ ಆನ್​ಲೈನ್ ಬ್ಯಾಂಕಿಂಗ್ ಸದಾ ಲಭ್ಯ ಇರುತ್ತದೆ. ಬಹುತೇಕ ಎಟಿಎಂಗಳು 24 ಗಂಟೆ ಕಾರ್ಯನಿರ್ವಹಿಸುತ್ತಿರುತ್ತವೆ. ಬ್ಯಾಂಕ್ ಕಚೇರಿಗೆ ಹೋಗಿಯೇ ಮಾಡಬೇಕಾದ ಕೆಲಸಗಳಿಗೆ ಮಾತ್ರ ತೊಂದರೆ ಆಗುತ್ತದೆ ಆದ್ದರಿಂದ ಅಂತಹ ವ್ಯವಹಾರ ಮಾಡುವ ಜನರಿಗೆ ಈ ಬ್ಯಾಂಕ್ ರಜಾದಿನದ ಪಟ್ಟಿ ಅನುಕೂಲವಾಗುತ್ತದೆ.

ಮಾರ್ಚ್ ತಿಂಗಳು ಬ್ಯಾಂಕುಗಳಿಗೆ ರಜಾ ದಿನಗಳು:
• ಮಾರ್ಚ್ 3, ಶುಕ್ರವಾರ: ಚಾಪಚರ್ ಕುಟ್ (ಮಣಿಪುರದಲ್ಲಿನ ಬ್ಯಾಂಕುಗಳಿಗೆ ರಜೆ)

• ಮಾರ್ಚ್ 5, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 7, ಮಂಗಳವಾರ: ಹೋಳಿ ಹಬ್ಬ (ಹಲವು ರಾಜ್ಯಗಳಿಗೆ ಅನ್ವಯ)

• ಮಾರ್ಚ್ 8, ಬುಧವಾರ: ಹೋಳಿ ಎರಡನೇ ದಿನ (ಕೆಲ ರಾಜ್ಯಗಳಲ್ಲಿ)

• ಮಾರ್ಚ್ 9, ಗುರುವಾರ: ಹೋಳಿ ಹಬ್ಬ (ಬಿಹಾರ ರಾಜ್ಯದಲ್ಲಿ)

• ಮಾರ್ಚ್ 11, ಶನಿವಾರ: ತಿಂಗಳ 2ನೇ ಶನಿವಾರ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 12, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 19, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 22, ಬುಧವಾರ: ಯುಗಾದಿ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ)

• ಮಾರ್ಚ್ 25, ಶನಿವಾರ: 4ನೇ ಶನಿವಾರದ ರಜೆ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 26, ಭಾನುವಾರ: ವಾರಾಂತ್ಯದ ರಜೆ (ಎಲ್ಲಾ ಬ್ಯಾಂಕುಗಳು)

• ಮಾರ್ಚ್ 30, ಗುರುವಾರ: ಶ್ರೀರಾಮನವಿ ಹಬ್ಬ (ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)

ಕರ್ನಾಟಕದಲ್ಲಿ ನಾಲ್ಕು ಭಾನುವಾರ, ಎರಡು ಶನಿವಾರ ಮತ್ತು ಎರಡು ಹಬ್ಬ ಸೇರಿ ಒಟ್ಟು 8 ದಿನಗಳ ಕಾಲ ಬ್ಯಾಂಕುಗಳು ಮಾರ್ಚ್ ತಿಂಗಳಲ್ಲಿ ಬಂದ್ ಆಗಿರುತ್ತವೆ. ಇದಲ್ಲದೇ ಬ್ಯಾಂಕ್ ನೌಕರರ ಮುಷ್ಕರದಂತಹ ಅನಿರೀಕ್ಷಿತವಾಗಿ ಒದಗಿಬರುವ ಬೆಳವಣಿಗೆಯೂ ಬ್ಯಾಂಕ್ ರಜೆಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.