WhatsApp: ಬಳಕೆದಾರ ಫುಲ್ ಖುಷ್, ವಾಟ್ಸ್​ಆ್ಯಪ್​ ಅಪ್ಡೇಟ್ ಈಗಲೇ ಮಾಡಿ!

ಮೆಟಾ ಒಡೆತನದ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ವಾಟ್ಸಪ್ ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡ ಈ ಆ್ಯಪ್ ಇದೀಗ ಬಳಕೆದಾರರ ಮೆಚ್ಚುಗೆ ಪಡೆದ ಅಪ್ಲಿಕೇಷನ್ ಆಗಿಬಿಟ್ಟಿದೆ. ಇದೀಗ ಅನೇಕ ಹೊಸ ಹೊಸ ಫೀಚರ್​ಗಳ ಮೇಲೆ ಕಣ್ಣಿಟ್ಟಿರುವ ವಾಟ್ಸಪ್ (WhatsApp) ಒಂದೊಂದು ಅಪ್ಡೇಟ್ ಪರಿಯಿಸುತ್ತಿದೆ. ಇದರ ನಡುವೆ ಅನೇಕ ಆಯ್ಕೆಗಳು ಬೇಟಾ ವರ್ಷನ್​ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಇದರ ನಡುವೆ ವಾಟ್ಸ್​ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ (Android) ಬಳಕೆದಾರರಿಗೆ ವಿಶೇಷ ಫೀಚರ್​ವೊಂದನ್ನು ಬಿಡುಗಡೆ ಮಾಡಿದೆ. ವಾಟ್ಸ್​ಆ್ಯಪ್​ನಲ್ಲಿ ಫೋಟೋ ಕಳುಹಿಸುವವರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ.

ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಇನ್ನು ಮುಂದೆ ನೂತನ ಅಪ್ಡೇಟ್​ನಲ್ಲಿ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಇದರ ಜೊತೆಗೆ ಮತ್ತೊಂದು ಆಯ್ಕೆ ಕೂಡ ನೀಡಿದ್ದು, ಇದರ ಮೂಲಕ ವಾಟ್ಸ್​ಆ್ಯಪ್​ನಲ್ಲಿ ನೀವು ಡಾಕ್ಯುಮೆಂಟ್‌ ಫೈಲ್​ಗಳನ್ನು ಕಳುಹಿಸುವಾಗ ಶೀರ್ಷಿಕೆಗಳನ್ನು ಸೇರಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ಫೋಟೋಗಳಿಗೆ ಮತ್ತು ವಿಡಿಯೋಗಳಿಗೆ ಮಾತ್ರ ಕ್ಯಾಪ್ಷನ್ ಆಯ್ಕೆ ನೀಡಲಾಗಿತ್ತು. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಐಒಎಸ್ ಬಳಕೆದಾರರಿಗೂ ಸಿಗಲಿದೆಯಂತೆ.

ಅದಲ್ಲದೆ ವಾಟ್ಸ್​ಆ್ಯಪ್ ಕರೆಯನ್ನು ಶೆಡ್ಯುಲ್‌ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ. ಹೌದು, ಯಾವುದೇ ಸ್ಮಾರ್ಟ್​ಫೋನ್​ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್​ಆ್ಯಪ್ ಇದೇ ಮೊದಲ ಬಾರಿಗೆ ತನ್ನ ಕರೆಗಳನ್ನು ಶೆಡ್ಯುಲ್‌ ಮಾಡುವ ಆಯ್ಕೆ ನೀಡುತ್ತಿದೆ. ಅಂದರೆ ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರು ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಸಮಯಕ್ಕೆ ಮಾಡಬಹುದಾಗಿದೆ. ಈ ಮೂಲಕ ಪ್ರಮುಖ ಸಂಭಾಷಣೆಯನ್ನು ಯಾರೂ ಸಹ ಮಿಸ್‌ ಮಾಡಿಕೊಳ್ಳುವ ಸಂಭವ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ಮಾಡಬೇಕು ಎಂದಿದ್ದರೆ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯುಲ್‌ ಮಾಡಬಹುದು.

ಇನ್ನು ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪ್ಡೇಟ್​ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೆ ನೂತನ ಪೀಚರ್​ವೊಂದನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವೆಬ್​ನಲ್ಲಿ ಫೋಟೋ ಸೆಂಡ್‌ (send )ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ. ಈ ಆಯ್ಕೆ ಸದ್ಯದಲ್ಲೇ ವಾಟ್ಸ್​ಆ್ಯಪ್ ತನ್ನ ವೆಬ್​ ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಅಥವಾ ಫೈಲ್‌ಗಳನ್ನು ಅದೇ ಗುಣಮಟ್ಟದಲ್ಲಿ ಇನ್ನೊಬ್ಬರಿಗೆ ಸೆಂಡ್‌ ಮಾಡಬಹುದು. ಈಗಾಗಲೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಈ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಈ ರೀತಿಯಾಗಿ ವಾಟ್ಸಪ್ ಮೂಲಕ ನೀವು ಉತ್ತಮ ಪ್ರಯೋಜನ ಪಡೆಯಬಹುದಾಗಿದೆ.

Leave A Reply

Your email address will not be published.