KPSC RDWSD AE Exam : ಕೆಪಿಎಸ್‌ಸಿ ಆರ್‌ಡಿಡಬ್ಲುಎಸ್‌ಡಿ ಎಇ ಪರೀಕ್ಷೆ ಸಮಯ ಬದಲಾವಣೆ !
ಕರ್ನಾಟಕ ಲೋಕಸೇವಾ ಆಯೋಗವು(KPSC) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ(RDWSD) ಸಹಾಯಕ ಅಭಿಯಂತರರು ಗ್ರೇಡ್-1(GRADE-1) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. RDWSD ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ಗ್ರೇಡ್-1 ಹುದ್ದೆಯ ಪರೀಕ್ಷೆಗೆ ಸಂಬಂಧಪಟ್ಟಂತೆ ಕಡ್ಡಾಯ ಕನ್ನಡ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡಿ KPSC ಪ್ರಕಟಣೆ ಹೊರಡಿಸಲಾಗಿದೆ.
ಸದ್ಯ, ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಈ ಮೊದಲೇ ಪ್ರಕಟಿಸಿರುವಂತೆ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೂ ಒಂದೇ ಬಾರಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 25-02-2023 ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದೀಗ, ಕಾರಣಾಂತರಗಳಿಂದ ಪರೀಕ್ಷೆಯ ಅವಧಿಯನ್ನು ಬದಲಾವಣೆ ಮಾಡಲಾಗಿದೆ. ಕೆಪಿಎಸ್‌ಸಿ ಈ ಪರೀಕ್ಷೆಗಳಿಗೆ ಮುಂಚಿತವಾಗಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ / ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ನೀಡಿ ಲಾಗಿನ್ ಮಾಡಿಕೊಳ್ಳುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ದಿನಾಂಕ 21-02-2022 ರಂದು ಕೆಪಿಎಸ್‌ಸಿ’ಯು ಆರ್‌ಡಿಡಬ್ಲ್ಯೂಎಸ್‌ಡಿ ಯ ಸಹಾಯಕ ಇಂಜಿನಿಯರ್ ಗ್ರೇಡ್-1 ಹುದ್ದೆಗಳಿಗೆ ನೇಮಕ ಅಧಿಸೂಚನೆ ಪ್ರಕಟಿಸಲಾಗಿದ್ದು, ಈ ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 25-02-2023 ರಂದು ಬೆಳಿಗ್ಗೆ 10-00 ಗಂಟೆಯಿಂದ 11-30 ಗಂಟೆಯ ಬದಲಾಗಿ AE ಗ್ರೇಡ್-1 ಹುದ್ದೆಗಳಿಗೆ ಮಧ್ಯಾಹ್ನ 03 ಗಂಟೆಯಿಂದ 05 ಗಂಟೆವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಬದಲಾವಣೆಯನ್ನು ಹೊರತುಪಡಿಸಿ,ದಿನಾಂಕ 26-02-2023 ರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.