Home Breaking Entertainment News Kannada Suzuki Hayabusa ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ, ಪಠಾಣ್ ಚಿತ್ರದ ಯಶಸ್ಸಿನ ಬಳಿಕ ರಸ್ತೆಗಿಳಿದ...

Suzuki Hayabusa ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ, ಪಠಾಣ್ ಚಿತ್ರದ ಯಶಸ್ಸಿನ ಬಳಿಕ ರಸ್ತೆಗಿಳಿದ Super Bike !

bike suzuki hatabusa

Hindu neighbor gifts plot of land

Hindu neighbour gifts land to Muslim journalist

ಹೆಚ್ಚಿನ ಬಾಲಿವುಡ್ ನಟ ನಟಿಯರಂತೆ ಬಾಲಿವುಡ್ ನ ಜನಪ್ರಿಯ ನಟ ಜಾನ್ ಅಬ್ರಹಾಂಗೆ ಕೂಡ ಕಾರು ಮತ್ತು ಬೈಕುಗಳ (Car & Bike) ಮೇಲೆ ತೀವ್ರ ಇಷ್ಟ. ಅವರ ಬಳಿ ಹಲವಾರು ಐಷಾರಾಮಿ ಕಾರುಗಳು ಮತ್ತು ಸೂಪರ್ ಮಾಡೆಲ್ ಸ್ಪೀಡಿಂಗ್ ಬೈಕುಗಳ ಕಲೆಕ್ಷನ್ ಇದೆ. ಸೌಂದರ್ಯದ ಮೂಲಕ ಮಾತ್ರವಲ್ಲದೇ ತನ್ನ ಎತ್ತರದ ಕಟ್ಟಿ ಬೆಳೆಸಿದ ಬಾಡಿ ಪ್ರದರ್ಶನದ ಮೂಲಕ ಕೂಡ ಬಾಲಿವುಡ್‌ನಲ್ಲಿ ಮಿಂಚಿದ ತಾರೆ John Abraham ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರು.ಮೂಲತಃ ಮಾಡೆಲಿಂಗ್ ನಿಂದ ಬಂದ ಈ ನಟನಿಗೆ ಕೇವಲ ಸಿನಿಮಾದ ಮೇಲೆ ಮಾತ್ರ ಆಸಕ್ತಿಯಲ್ಲದೆ ಕಾರು, ಬೈಕು ಇತ್ಯಾದಿ ವಾಹನಗಾಲ ಮೇಲೆ ಕೂಡಾ ವ್ಯಾಮೋಹ ಜಾಸ್ತಿ. ಅದಕ್ಕಾಗೇ ಅವರು ಇಷ್ಟದ ಕಾರು ಮತ್ತು ಬೈಕುಗಳ ನ್ನು ಕಲೆ ಹಾಕುವುದರಲ್ಲೂ ಕೂಡ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ತಮಗಿಷ್ಟವಾದ ಹೊಸ ಐಷಾರಾಮಿ ಕಾರು ಮತ್ತು ಬೈಕ್ ಗಳನ್ನು ಅವರು ಖರೀದಿಸುತ್ತಾ ಇರುತ್ತಾರೆ.

ಜಾನ್ ಅಬ್ರಹಾಂ ತಾವು ನಟಿಸಿದ ಇತ್ತೀಚಿನ “Patan ” ಚಿತ್ರದ ಯಶಸ್ಸಿನ ನಂತರ ಒಂದು ಹೊಸ ಬೈಕ್ ಖರೀದಿಸಿದ್ದಾರೆ. ಜಾನ್ ಅಬ್ರಹಾಂ ಅವರ ಧೂಮ್” ಚಿತ್ರದ ಬಳಿಕ ಸುಜುಕಿ ಹಯಾಬುಸಾ ಬೈಕ್ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಜಾನ್ ಅಬ್ರಹಾಂ ಅವರು 2023ರ suzuki hayabusa ಬೈಕ್ ಅನ್ನು ಖರೀದಿಸಿದ್ದಾರೆ. ಅಲ್ಲದೆ ತಮ್ಮ ಸಿನಿಮಾದಲ್ಲಿ ತಮ್ಮದೇ ಬೈಕ್ ಬಳಸಿದ್ದಾರೆ ಎನ್ನಲಾಗುತ್ತಿದೆ. 2023ರ ಸುಜುಕಿ ಹಯಾಬುಸಾದ ಇತ್ತೀಚಿನ ಮಾದರಿಯನ್ನು ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ 2023ರ suzuki hayabusa ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. ಆದರೆ ಅಷ್ಟರ ಒಳಗೆ ಅದು ಅಬ್ರಹಾಂ ನ ಕಲೆಕ್ಷನ್ ಅನ್ನು ಸೇರಿಕೊಂಡಿದೆ. ಅದರ ಬೆಲೆ ಭಾರತದಲ್ಲಿ ಸುಮಾರು 19.5 ಲಕ್ಷಗಳು.

ಇನ್ನು ಸುಜುಕಿ ಹಯಾಬುಸಾದ ಬೈಕ್ ನ ಟಾಪ್ ಸ್ಪೀಡ್ ಹತ್ತತ್ತಿರ 300 ಕಿ.ಮೀ. ಇನ್ನು ಈ ಬೈಕ್ ತೂಕದಲ್ಲಿ ಮರಿ ಆನೆಗೆ ಸಮ. ಬರೋಬ್ಬರಿ 265 ಕೆಜಿ ತೂಕವನ್ನು ಇದು ಹೊಂದಿದ್ದು, ಇದು 20 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸುಜುಕಿ ಹಯಾಬುಸಾ ಬೈಕ್ ಗ್ಲೋಸ್ ಸ್ಪಾರ್ಕ್ಲಿ ಬ್ಲ್ಯಾಕ್- ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್ – ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್- ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಹಲವು ಕಣ್ಣು ಸೂರೆಗೊಳ್ಳಬಲ್ಲ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

ಸುಜುಕಿ ಹಯಾಬುಸಾ ಬೈಕ್ ನಿಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲ ಬೈಕು. ಈಗಿನ ವಿನ್ಯಾಸವು ತನ್ನ ಬೈಕ್ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದ್ದರೂ ಒಟ್ಟಾರೆ, ಈ ಹಯಾಬುಸಾ ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ರಸ್ತೆಗೆ ಇಳಿದಿದೆ. ಅದು ತನ್ನ ವ್ಯಗ್ರ ಗುರುಗುಡುವ ಲೈನೋಟದೊಂದಿಗೆ ಇತರರಿಗೆ ಎಚ್ಚರಿಕೆ ನೀಡುತ್ತಲೇ ಆಕರ್ಷಣೆ ಮೂಡಿಸುತ್ತಿದೆ. ಈ ಬೈಕ್ ನ ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ.

ಈ ಸೂಪರ್ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಹಯಾಬುಸಾ ಸೂಪರ್‌ಬೈಕ್ ಕೇವಲ 3.2 ಸೆಕೆಂಡುಗಳಲ್ಲಿ 100 ಕಿಲೋ ಮೀಟರ್ ನ ವೇಗವನ್ನು ಪಡೆದುಕೊಳ್ಳುತ್ತದೆ. ಹೊಸ ಹಯಾಬುಸಾದಲ್ಲಿ ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಲಾಂಚ್ ಕಂಟ್ರೋಲ್, ಮೂರು ಪವರ್ ಮೋಡ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿವೆ. ಜತೆಗೆ ಆಕ್ಟಿವ್ ಸ್ಪೀಡ್ ಲಿಮಿಟರ್, ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಲೋ ಆರ್ಪಿಎಂ ಅಸಿಸ್ಟ್, ಹೊಸ ಸಿಕ್ಸ್-ಆಕ್ಸಿಸ್ ಐಎಂಯು, ಕಂಬೈನ್ಡ್ ಬ್ರೇಕ್ ಸಿಸ್ಟಂ, ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತಹಾ ಹಲವು ವಿವಿಧ ಫೀಚರ್ಸ್ ಗಾಲ ಒಟ್ಟು ಸಂಕಲನವೇ ಈ ಸುಜುಕಿ ಹಯಾಬುಸ ( suzuki hayabusa).