7th Pay Commission: ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ! ವೇತನದಲ್ಲಿ ಏರಿಕೆ!!!
ಈಗಾಗಲೇ ಸರ್ಕಾರಿ ನೌಕರರ 7ನೇ ವೇತನ ಆಯೋಗ ರಚನೆ ಮಾಡಿದ್ದು ಮಾರ್ಚ್ 1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸದ್ಯ ಕೇಂದ್ರ ಸರ್ಕಾರಿ ನೌಕರರು ಸರ್ಕಾರದ ಡಿಎ ಹೆಚ್ಚಳದ ನಿರ್ಧಾರದ ನಿರೀಕ್ಷೆಯಲ್ಲಿದ್ದು ಸದ್ಯ ಮಾರ್ಚ್ 1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು ಈ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರೊಂದಿಗೆ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಲಿದೆ. ಹೀಗಾದಾಗ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಮತ್ತು ಬಾಕಿ ಎರಡರ ಲಾಭವನ್ನು ನೌಕರರು ಪಡೆಯಲಿದ್ದಾರೆ.
ಮಾಹಿತಿ ಪ್ರಕಾರ ಈ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಾಗಲಿದೆ ಎಂಬುದು ಎಐಸಿಪಿಐ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಮೂಲಗಳ ಪ್ರಕಾರ ಜನವರಿ 2023 ರಿಂದ, DA 42 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಇದರಿಂದ 52 ಲಕ್ಷ ಕೇಂದ್ರ ನೌಕರರು ಮತ್ತು 60 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ (ಜೆಸಿಎಂ) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು 7ನೇ ವೇತನ ಆಯೋಗದ ಅಡಿಯಲ್ಲಿ ಪಡೆಯುವ ತುಟ್ಟಿಭತ್ಯೆ (ಡಿಎ) ಪ್ರಸ್ತುತ ಶೇಕಡಾ 38 ರಷ್ಟಿದ್ದು, ಈ ಬಾರಿ ಅದು ಶೇಕಡಾ 42 ಕ್ಕೆ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ 7ನೇ ವೇತನ ಆಯೋಗದ ಅಡಿಯಲ್ಲಿ, ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ. ಉದಾಹರಣೆಗೆ, ಮೂಲ ವೇತನವು 25,000 ರೂಪಾಯಿ ಆಗಿದ್ದರೆ, 42% ಡಿಎ ಯಂತೆ 10,500 ರೂಪಾಯಿ ಪಡೆಯುತ್ತಾರೆ. ಇದರ ಆಧಾರದ ಮೇಲೆ ಇತರ ಕೇಂದ್ರ ನೌಕರರ ಡಿಎ ಕೂಡಾ ಹೆಚ್ಚಾಗಲಿದೆ. ನಿಮ್ಮ ಮೂಲ ವೇತನ ಎಷ್ಟು ಎನ್ನುವುದರ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಬಹುದು.
• ಮೂಲ ವೇತನ: 18000 ರೂ. ಆಗಿದ್ದರೆ
42% ಡಿಎ ಅಂದರೆ ತಿಂಗಳಿಗೆ 7560 ರೂ.
• ಮೂಲ ವೇತನ : 25000 ರೂ. ಆಗಿದ್ದರೆ
42% ಡಿಎ ಅಂದರೆ ತಿಂಗಳಿಗೆ 10500 ರೂ.
7 ನೇ ವೇತನ ಆಯೋಗದ ಅಡಿಯಲ್ಲಿ, ನಿಮ್ಮ ಮೂಲ ವೇತನ ರೂ.18,000 ಆಗಿದ್ದರೆ, ನೀವು 6,840 ರೂಪಾಯಿಯಷ್ಟು ತುಟ್ಟಿಭತ್ಯೆಯನ್ನು ಶೇಕಡಾ 38 ರ ದರದಲ್ಲಿ ಪಡೆಯುತ್ತೀರಿ. ಆದರೆ, ತುಟ್ಟಿಭತ್ಯೆ ಶೇ.42ಕ್ಕೆ ಏರಿದರೆ ಪಡೆಯುವ ಮೊತ್ತ ಕೂಡಾ 7,560 ರೂ.ಗೆ ಏರಿಕೆಯಾಗಲಿದೆ. ಅದೇ ರೀತಿ, 25,000 ರೂಪಾಯಿ ಮೂಲ ವೇತನವಾಗಿದ್ದರೆ, ಪ್ರಸ್ತುತ 9,500 ರೂಪಾಯಿ ತುಟ್ಟಿಭತ್ಯೆಯನ್ನು ಪಡೆಯುತ್ತಿರುತ್ತೀರಿ. ಆದರೆ ಡಿಎ ಶೇ.42 ಆದರೆ ಈ ಮೊತ್ತ 10500 ರೂ.ಗೆ ಏರಿಕೆಯಾಗಲಿದೆ.
ಒಟ್ಟಿನಲ್ಲಿ ಸರ್ಕಾರಿ ನೌಕರರಿಗೆ ಈ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.