ಈ ಬ್ಯಾಂಕ್ ನಲ್ಲಿ FD ಲಾಭ ಹಿರಿಯ ನಾಗರಿಕರು ಭರಪೂರ ಪಡೆಯಲು ಸಾಧ್ಯ!

Share the Article

ಸದ್ಯ ಆ್ಯಕ್ಸಿಸ್ ಬ್ಯಾಂಕ್ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​​ನಲ್ಲಿ ಎಫ್​ಡಿ ಇಟ್ಟರೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ. ಸದ್ಯ ಸ್ಥಿರ ಠೇವಣಿ (FD) ಇಡುವ ಗ್ರಾಹಕರಿಗೆ ಶೇ 8.11ರ ವರೆಗೆ ಹಾಗೂ ಹಿರಿಯ ನಾಗರಿಕರಿಗೆ ಶೇ 8.71ರ ವರೆಗೆ ಬಡ್ಡಿ ದೊರೆಯಲಿದೆ. ಆದರೆ, ಕನಿಷ್ಠ 5,000 ರೂ. ಠೇವಣಿ ಇಡಬೇಕು ಎಂದು ತಿಳಿಸಲಾಗಿದೆ.

ಪ್ರಸ್ತುತ ಆರ್​ಬಿಐ ರೆಪೊ ದರ ಹೆಚ್ಚಿಸಿರುವ ಬೆನ್ನಲ್ಲೇ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಹಾಗೂ ಠೇವಣಿಗಳ (Deposits) ಮೇಲಿನ ಬಡ್ಡಿ ದರ ಹೆಚ್ಚಿಸಲು ಆರಂಭಿಸಿವೆ. ಆ್ಯಕ್ಸಿಸ್ ಬ್ಯಾಂಕ್ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳು ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ್ದು ಇದೀಗ ಫಿನ್​​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪರಿಷ್ಕೃತ ಬಡ್ಡಿ ದರ ಫೆಬ್ರವರಿ 13ರಿಂದಲೇ ಅನ್ವಯವಾಗಲಿದೆ.

ಮುಖ್ಯವಾಗಿ ಬ್ಯಾಂಕ್​​ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಶ್ ಮಿಶ್ರಾ ಪ್ರಕಾರ ದೀರ್ಘಾವಧಿಯ ಗುರಿ ಸಾಧಿಸುವುದಕ್ಕಾಗಿ ಗ್ರಾಹಕರಿಗೆ ನಾವು ಉನ್ನತ ಹಣಕಾಸು ಸೇವೆ ನೀಡುತ್ತಿದ್ದೇವೆ. ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಎಫ್​​ಡಿ ದರ ಹೆಚ್ಚಳ ಮಾಡಿರುವುದೂ ಈ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ಎಫ್​ಡಿ ಖಾತೆ ತೆರೆಯುವ ವಿಧಾನ :
ಫಿನ್​​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖೆಗೆ ತೆರಳಿ ಅಥವಾ ಆನ್​ಲೈನ್ ಮೂಲಕ ಎಫ್​ಡಿ ಖಾತೆ ತೆರೆಯಬಹುದಾಗಿದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್​​ನೆಟ್ ಬ್ಯಾಂಕಿಂಗ್ ಮೂಲಕವೂ ಎಫ್​​​ಡಿ ಆರಂಭಿಸಬಹುದಾಗಿದೆ. ಬಡ್ಡಿ ದರ ಹೆಚ್ಚಳದ ಮೂಲಕ ನಾವು ಗ್ರಾಹಕ ಕೇಂದ್ರಿತ ಸೇವೆ ಮುಂದುವರಿಸುತ್ತಿದ್ದೇವೆ ಎಂದು ಆಶಿಶ್ ಮಿಶ್ರಾ ತಿಳಿಸಿದ್ದಾರೆ.

ಸದ್ಯ ಫಿನ್​​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕರೆಂಟ್ & ಸೇವಿಂಗ್ಸ್ ಅಕೌಂಟ್, ಚಿನ್ನದ ಅಡಮಾನ ಸಾಲ, ಆಸ್ತಿ ಅಡಮಾನ ಸಾಲ, ಆರ್​ಡಿ, ಎಫ್​ಡಿ ಸೇರಿ ಅನೇಕ ಸೇವೆಗಳನ್ನು ಒದಗಿಸುತ್ತಿದೆ ಎಂದು ಕಾರ್ಯನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.

Leave A Reply