ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ!

ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕಾಲೇಜು ಶಿಕ್ಷಣ ಇಲಾಖೆ 2022-23ನೇ ಸಾಲಿನ  ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ\ವಿದ್ಯಾರ್ಥಿನಿಯರು ವಿವಿಧ ವಿದ್ಯಾರ್ಥಿ ವೇತನ\ಶುಲ್ಕ ಮರುಪಾವತಿಯ ಸಲುವಾಗಿ ಎಸ್‌ಎಸ್ ಸಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.

2022-23ನೇ ಸಾಲಿನ ಸಂಚಿಹೊನ್ನಮ್ಮ ಮತ್ತು ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನದ ಜೊತೆಗೆ ಆದಾಯ ಮಿತಿ ರೂ.2.50 ಲಕ್ಷಕ್ಕಿಂತಲೂ ಹೆಚ್ಚು ಇರುವ  ಎಸ್‌.ಸಿ ಎಸ್.ಟಿ ವಿದ್ಯಾರ್ಥಿಗಳ ಜೊತೆಗೆ ಸೈನಿಕ ಸಿಬ್ಬಂದಿ ಮಕ್ಕಳ ಶುಲ್ಕ ಮರುಪಾವತಿ ಯೋಜನೆಯನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅನುಷ್ಟಾನಗೊಳಿಸಲಾಗಿದೆ. ಹೀಗಾಗಿ, ಸದ್ಯ  ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೂತನ/ನವೀಕರಣದ ಮಂಜೂರಾತಿಯ ಸಲುವಾಗಿ ಎಸ್.ಎಸ್.ಪಿ. ಪೋರ್ಟಲ್‌ನ (SSP Portal) https://ssp.postmatric.karnataka.gov.in/2223processing/loginPage.aspx ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಇದರ ಜೊತೆಗೆ ಅರ್ಜಿ ಸಲ್ಲಿಸಲು 20.02.23 ಕೊನೆಯ ದಿನಾಂಕವಾಗಿದ್ದು ವಿದ್ಯಾರ್ಥಿಗಳು ಈ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Leave A Reply

Your email address will not be published.