PF : ಪಿಎಫ್ ಬಗ್ಗೆ ಮುಖ್ಯವಾದ ಮಾಹಿತಿ, ನೀವು ಮಾಡುವ ಒಂದು ತಪ್ಪು ನಿಮ್ಮ ಖಾತೆ ಖಾಲಿ ಮಾಡುತ್ತೆ! ಇಪಿಎಫ್‌ಒ ನಿಂದ ಟ್ವೀಟ್‌

ದೇಶದಲ್ಲಿ ಆನ್‌ಲೈನ್ ವಂಚನೆಯ ಬೆದರಿಕೆಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಘ ತನ್ನ ಗ್ರಾಹಕರಿಗೆ ಆನ್‌ಲೈನ್ ವಂಚನೆ ಕುರಿತು ಎಚ್ಚರಿಕೆ ನೀಡಿದೆ. ವಂಚಕರು ಉದ್ಯೋಗಿಗಳ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದು ಇಪಿಎಫ್‌ಒ ಮಾಹಿತಿ ನೀಡಿದೆ. ಸಂಸ್ಥೆಯ ಸದಸ್ಯ ಎಂದು ಹೇಳಿಕೊಳ್ಳುವ ವ್ಯಕ್ತಿಯು ನಿಮ್ಮ ಖಾತೆಗೆ ಸಂಬಂಧಿಸಿದ ಅಥವಾ ಇತರ ಗೌಪ್ಯ ಮಾಹಿತಿಯನ್ನು ಕೇಳಿದರೆ, ಅದನ್ನು ನೀಡಬೇಡಿ ಎಂದು ಇಪಿಎಫ್‌ಒ ಟ್ವೀಟ್ ಮಾಡಿದೆ.

ಫೋನ್ ಕರೆಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ಮಾಹಿತಿಯನ್ನು ಸಂಸ್ಥೆಯು ಗ್ರಾಹಕರನ್ನು ಕೇಳುವುದಿಲ್ಲ ಎಂದು ಇಪಿಎಫ್‌ಒ ಹೇಳಿದೆ. ಇದರೊಂದಿಗೆ, ಚಂದಾದಾರರು ಹೇಗೆ ಸುರಕ್ಷಿತವಾಗಿರಬಹುದು ಎಂಬುದನ್ನು EPFO ​​ವಿವರಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರನ್ನು ಆನ್‌ಲೈನ್ ವಂಚನೆಯ ಸಂಭಾವ್ಯ ಅಪಾಯಗಳಿಂದ ರಕ್ಷಿಸಲು ಎಚ್ಚರಿಸಿದೆ ಮತ್ತು ಸುರಕ್ಷತಾ ಸಲಹೆಗಳನ್ನು ಸಹ ನೀಡಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ಇಪಿಎಫ್‌ಒ ತನ್ನ ಸದಸ್ಯರಿಗೆ ‘ನಕಲಿ ಕರೆಗಳು/ಸಂದೇಶಗಳ ಬಗ್ಗೆ ಎಚ್ಚರದಿಂದಿರಿ’ ಎಂದು ಕೇಳಿಕೊಂಡಿದೆ.

UAN/Password/PAN/Aadhaar ನಂತಹ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ EPFO ​​ತನ್ನ ಸದಸ್ಯರಿಗೆ ಎಚ್ಚರಿಕೆ ನೀಡಿದೆ. ಇಪಿಎಫ್‌ಒ ತನ್ನ ಸದಸ್ಯರಲ್ಲಿ ಫೋನ್‌ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಯಾರೊಂದಿಗೂ ಈ ವಿವರಗಳನ್ನು ಹಂಚಿಕೊಳ್ಳದಂತೆ ಕೇಳಿದೆ. ತಾವು ಇಪಿಎಫ್‌ಒ ಪ್ರತಿನಿಧಿ ಎಂದು ಹೇಳಿಕೊಂಡು ಮುಖ್ಯವಾದ ಮಾಹಿತಿ ಕೇಳಿದರೂ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.

Leave A Reply

Your email address will not be published.