Home latest ಕಬಡ್ಡಿ ಆಡುತ್ತಲೇ ಕುಸಿದು ಬಿದ್ದು ಸಾವು ಕಂಡ 20 ರ ಹರೆಯದ ಯುವಕ!

ಕಬಡ್ಡಿ ಆಡುತ್ತಲೇ ಕುಸಿದು ಬಿದ್ದು ಸಾವು ಕಂಡ 20 ರ ಹರೆಯದ ಯುವಕ!

Hindu neighbor gifts plot of land

Hindu neighbour gifts land to Muslim journalist

ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗಂತೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸಣ್ಣವರಿಂದ ಹಿಡಿದು ಡೊಡ್ಡವರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಇದೀಗ ಯುವಕನೋರ್ವ ಕಬಡ್ಡಿ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬಯಿಯ ಮಲಾಡ್‌ ನಲ್ಲಿ ನಡೆದಿದೆ.

ಮೃತ ಯುವಕನನ್ನು ಕೀರ್ತಿರಾಜ ಮಲ್ಲನ್ (20) ಎನ್ನಲಾಗಿದ್ದು,
ಈತ ಮುಂಬೈನ ಸಂತೋಷ್ ನಗರದ ನಿವಾಸಿಯಾಗಿದ್ದು, ಗೋರೆಗಾಂವ್‌ನ ವಿವೇಕ್ ಕಾಲೇಜಿನಲ್ಲಿ ಬಿ.ಕಾಮ್ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಕಾಲೇಜಿನಲ್ಲಿ ಆಯೋಜಿಸಿದ ಕಬಡ್ಡಿ ಪಂದ್ಯಾವಳಿಯಲ್ಲಿ ಆಡುತ್ತಿದ್ದ ವೇಳೆ ಮಲ್ಲನ್ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕಬಡ್ಡಿ ಆಟದ ವೇಳೆ ಯುವಕ ಎದುರಾಳಿ ತಂಡದ ಸದಸ್ಯರನ್ನು ಸ್ಪರ್ಶಿಸಿ, ಔಟ್ ಮಾಡಿ, ತನ್ನ ತಂಡಕ್ಕೆ ಹಿಂತಿರುಗುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್ ಅದಾಗಲೇ ಕೀರ್ತಿರಾಜ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಪಂದ್ಯದ ವೇಳೆ ಮೊಬೈಲ್‌ ನಲ್ಲಿ ವಿಡಿಯೋವನ್ನು ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಆಧರಿಸಿ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.