Home Entertainment ಸಿದ್ಧಾರ್ಥ್‌ ಮತ್ತು ಕಿಯಾರಾ ಮದುವೆಯಲ್ಲಿ ಅಂಬಾನಿ ಕುಟುಂಬ ನೀಡಿದ ಉಡುಗೊರೆ ಏನು ಗೊತ್ತೇ?

ಸಿದ್ಧಾರ್ಥ್‌ ಮತ್ತು ಕಿಯಾರಾ ಮದುವೆಯಲ್ಲಿ ಅಂಬಾನಿ ಕುಟುಂಬ ನೀಡಿದ ಉಡುಗೊರೆ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ಇತ್ತೀಚೆಗೆ ಯಾವುದೇ ಸದ್ದುಗದ್ದಲವಿಲ್ಲದೇ ನಡೆದೇ ಹೋಯಿತು. ಮದುವೆ ಫೋಟೋಸ್‌ಗಳನ್ನು ಈ ನವಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ನೋಡಿ ಜನ ನಿಜಕ್ಕೂ ಖುಷಿ ಗೊಂಡಿದ್ದಾರೆ. ಫೆವ್ರವರಿ 12 ರಂದು, ಸಿದ್ಧಾರ್ಥ್ ಕಿಯಾರಾ ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ಪಾರ್ಟಿಯನ್ನು ಆಯೋಜಿಸಿದ್ದಾರೆ. ಅದರ ಸಿದ್ಧತೆಗಳು ಅದ್ದೂರಿಯಾಗಿ ನಡೆಯುತ್ತಿವೆ. ಅಂದ ಹಾಗೇ, ಬ್ಯುಸಿನೆಸ್‌ ದಿಗ್ಗದ ಅಂಬಾನಿ ಕುಟುಂಬದ ಕಡೆಯಿಂದ ಸಿದ್-ಕಿಯಾರಾಗೆ ದೊಡ್ಡ ಉಡುಗೊರೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಮುಖೇಶ್ ಅಂಬಾನಿ ಅವರು ಸಿದ್ಧಾರ್ಥ್ ಮತ್ತು ಕಿಯಾರಾ ಅವರನ್ನು ತಮ್ಮ ಕಂಪನಿ ರಿಲಯನ್ಸ್ ಟ್ರೆಂಡ್ಸ್ ಪಾದರಕ್ಷೆಯ ಹೊಸ ಬ್ರಾಂಡ್ ಅಂಬಾಸಿಡರ್‌ಗಳನ್ನಾಗಿ ಮಾಡಿದ್ದಾರೆ. ರಿಲಯನ್ಸ್ ರಿಟೇಲ್‌ನ ವೆಂಚರ್ ಟ್ರೆಂಡ್ಸ್ ಫುಟ್‌ವೇರ್ ದಂಪತಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿರುವ ಬಗ್ಗೆ ವರದಿಯಾಗಿದೆ. ಇದು ನಿಜಕ್ಕೂ ಈ ನವಜೋಡಿಗೆ ದೊಡ್ಡ ಗಿಫ್ಟ್‌ ಎಂದೇ ಹೇಳಬಹುದು.

ರಿಲಯನ್ಸ್ ರಿಟೇಲ್ ಲಿಮಿಟೆಡ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಅಧ್ಯಕ್ಷ ಮತ್ತು ಸಿಇಒ ಅಖಿಲೇಶ್ ಪ್ರಸಾದ್, ‘ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್‌ನ ಇಬ್ಬರು ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ಯುವ ಐಕಾನ್‌ಗಳಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಬ್ರಾಂಡ್ ಅಂಬಾಸಿಡರ್‌ಗಳನ್ನಾಗಿ ಮಾಡುವುದರಿಂದ ಯುವಕರೊಂದಿಗಿನ ನಮ್ಮ ಸಂಬಂಧ ಗಟ್ಟಿಯಾಗುತ್ತದೆ” ಎಂದು ಹೇಳಿದ್ದಾರೆ.

ಅಂಬಾನಿ ಕುಟುಂಬದಿಂದ ಕೋಟಿಗಟ್ಟಲೆ ಉಡುಗೊರೆಗಳನ್ನು ಸ್ವೀಕರಿಸಿದ ನಂತರ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತುಂಬಾ ಸಂತೋಷದಲ್ಲಿದ್ದಾರೆ ಎಂದು ನಾವು ತಿಳಿಯೋಣ. ಕಿಯಾರಾ ಅಡ್ವಾಣಿ ಅವರು ಅಂಬಾನಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಕಿಯಾರಾ ಮತ್ತು ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಬಾಲ್ಯದ ಗೆಳತಿಯರು. ಇತ್ತೀಚೆಗೆ, ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಮಾಲ್ ಅವರೊಂದಿಗೆ ಸಿದ್ಧಾರ್ಥ್ ಕಿಯಾರಾ ಅವರ ಮದುವೆಗೆ ಆಗಮಿಸಿದ್ದರು. ಇದೀಗ ಮುಂಬೈನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭದಲ್ಲಿ ಅಂಬಾನಿ ಕುಟುಂಬ ಪಾಲ್ಗೊಳ್ಳುವ ನಿರೀಕ್ಷೆಯಿದೆ.