ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಇವುಗಳನ್ನು ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚುತ್ತೆ!

ಪ್ರತಿ ಪೋಷಕರು ಮಗುವಿಗೆ ಪರೀಕ್ಷೆಯ ತಯಾರಿಗಾಗಿ ಸಹಾಯ ಮಾಡುವ ಸಲುವಾಗಿ ಏನನ್ನಾದರೂ ಮಾಡಲು ಅವಕಾಶವನ್ನು ಹುಡುಕುತ್ತಾರೆ. ಆದರೆ ದುಃಖದ ಸಂಗತಿಯೆಂದರೆ ಬಹುತೇಕ ಪೋಷಕರಿಗೆ ಏನು ಮಾಡಬೇಕೆಂಬುದೇ ತಿಳಿದಿಲ್ಲ.

ನಿಮ್ಮ ಆಹಾರ ಕ್ರಮ ಸರಿಯಾಗಿದ್ದರೆ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಇದರ ದಕ್ಷತೆಯೂ ಹೆಚ್ಚುತ್ತದೆ. ನೀವು ತೀಕ್ಷ್ಣವಾದ ಮನಸ್ಸು ಬಯಸಿದ್ರೆ, ನಿಮ್ಮ ಆಹಾರದಲ್ಲಿ ಮಿದುಳಿನ ಆರೋಗ್ಯಕರ ಮಿದುಳಿನ ಆಹಾರಗಳನ್ನ ಸೇರಿಸುವುದು ಅತ್ಯಗತ್ಯ. ವಿಶೇಷವಾಗಿ ಮಕ್ಕಳಿಗೆ ಪರೀಕ್ಷೆಯ ಸಮಯದಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಮ್ಮೆ ಓದಿದ್ದೆಲ್ಲ ನೆನಪಾಗುತ್ತದೆ. ಈ ಆಹಾರಗಳು ಮಕ್ಕಳಲ್ಲಿ ಜ್ಞಾಪಕಶಕ್ತಿಯನ್ನ ಹೆಚ್ಚಿಸುತ್ತವೆ.

  • ಮೆದುಳಿನ ಕಾರ್ಯವನ್ನ ಸುಧಾರಿಸುವಲ್ಲಿ ಬಾದಾಮಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೆದುಳನ್ನ ಕ್ರಿಯಾಶೀಲವಾಗಿಸುತ್ತದೆ. ಇದು ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಬಾದಾಮಿಯನ್ನು ದಿನವೂ ತಿನ್ನುವುದರಿಂದ ವಯಸ್ಸಾಗುತ್ತಿರುವ ತ್ವಚೆಯನ್ನ ಕಡಿಮೆ ಮಾಡಬಹುದು. ಆಲೋಚನಾ ಶಕ್ತಿ ಹೆಚ್ಚುತ್ತದೆ. ಬಾದಾಮಿಯಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನ ಸುಧಾರಿಸುತ್ತದೆ.
  • ಅರಿಶಿನದ ಬಳಕೆಯಿಂದ ಅನೇಕ ರೀತಿಯ ರೋಗಗಳನ್ನ ಗುಣಪಡಿಸಬಹುದು. ಆಯುರ್ವೇದದಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ಅರಿಶಿನ ಆರೋಗ್ಯ ರಕ್ಷಕ ಮಾತ್ರವಲ್ಲ, ಮೆದುಳಿನ ಕಾರ್ಯವನ್ನ ಸುಧಾರಿಸುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಸಂಯುಕ್ತವು ಮೆದುಳಿನ ಕಾರ್ಯವನ್ನ ಸುಧಾರಿಸುತ್ತದೆ. ಇದು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಮರೆವಿನ ಸಮಸ್ಯೆಯನ್ನ ಸಹ ಗುಣಪಡಿಸುತ್ತದೆ. ಮೆದುಳಿನಿಂದ ಅಮಿಲಾಯ್ಡ್ ಅವಶೇಷಗಳನ್ನ ಸಹ ತೆಗೆದುಹಾಕುತ್ತದೆ. ಈ ಅಮಿಲಾಯ್ಡ್ ಆಲ್ಝೈಮರ್ ಕಾಯಿಲೆಗೆ ಕಾರಣವಾಗುತ್ತದೆ. ಕರ್ಕ್ಯುಮಿನ್ ಸಿರೊಟೋನಿನ್ ಮತ್ತು ಡೋಪಮೈನ್ ಹಾರ್ಮೋನುಗಳನ್ನ ಸಕ್ರಿಯಗೊಳಿಸುವ ಮೂಲಕ ಮನಸ್ಥಿತಿಯನ್ನ ಸುಧಾರಿಸುತ್ತದೆ. • ಉತ್ತಮ ಮೆದುಳಿನ ಕಾರ್ಯಕ್ಕಾಗಿ ಬೆರಿಹಣ್ಣುಗಳು ನಿಮ್ಮ ಆಹಾರದಲ್ಲಿ ಅತ್ಯಗತ್ಯವಾಗಿರುತ್ತದೆ. ಸ್ಟ್ರಾಬೆರಿ, ಬ್ಲೂಬೆರ್ರಿ, ಬೆರ್ರಿ, ಮಲ್ಬರಿ ಮುಂತಾದ ಹಣ್ಣುಗಳೂ ಈ ಪಟ್ಟಿಯಲ್ಲಿವೆ. ಈ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನ ಹೊಂದಿರುತ್ತವೆ. ಇವು ಮೆದುಳಿನ ಆರೋಗ್ಯವನ್ನ ಸುಧಾರಿಸುತ್ತದೆ. ದೇಹದಿಂದ ಆಕ್ಸಿಡೇಟಿವ್ ಒತ್ತಡವನ್ನ ಸಹ ತೆಗೆದುಹಾಕುತ್ತದೆ.
  • ಡಾರ್ಕ್ ಚಾಕೊಲೇಟ್ ಇದು ಮೆದುಳನ್ನ ತುಂಬಾ ಚುರುಕುಗೊಳಿಸುತ್ತದೆ. ಡಾರ್ಕ್ ಚಾಕೊಲೇಟ್ ಕೆಫೀನ್ ಮತ್ತು ಫ್ಲೇವನಾಯ್ಡ್ಗಳನ್ನ ಒಳಗೊಂಡಂತೆ ವಿವಿಧ ಆಂಟಿಆಕ್ಸಿಡೆಂಟ್ಗಳನ್ನ ಹೊಂದಿರುತ್ತದೆ. ಫ್ಲೇವನಾಯ್ಡ್ಗಳು ನಿಮ್ಮ ಕಲಿಕೆ ಮತ್ತು ಜ್ಞಾಪಕ ಶಕ್ತಿಯನ್ನ ಹೆಚ್ಚಿಸುತ್ತವೆ. ಸಂಶೋಧನೆಯೊಂದರ ಪ್ರಕಾರ, ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಬೌದ್ಧಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಮರ್ಥ್ಯವೂ ಹೆಚ್ಚುತ್ತದೆ.
  • ಹೆಚ್ಚಿನ ಜನರು ಕುಂಬಳಕಾಯಿ ಬೀಜಗಳನ್ನ ತೆಗೆದುಹಾಕುತ್ತಾರೆ. ಆದ್ರೆ, ಇದು ಅದ್ಭುತವಾದ ಸೂಪರ್ಫುಡ್ ಆಗಿದೆ. ಇದೇ ಕಾರಣಕ್ಕೆ ಇದರ ಬೆಲೆ ಕೆ.ಜಿ.ಗೆ 600 ರೂ. ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್, ಕಬ್ಬಿಣ, ಸತು, ತಾಮ್ರದಂತಹ ಅಂಶಗಳು ಕುಂಬಳಕಾಯಿ ಬೀಜಗಳಲ್ಲಿ ಹೇರಳವಾಗಿವೆ. ಇವೆಲ್ಲವೂ ಮನಸ್ಸನ್ನ ಕ್ರಿಯಾಶೀಲವಾಗಿರಿಸುತ್ತದೆ. ಸಂಶೋಧನೆಯೊಂದರ ಪ್ರಕಾರ, ಕುಂಬಳಕಾಯಿ ಬೀಜಗಳಲ್ಲಿ ಸಾಕಷ್ಟು ಸೂಕ್ಷ್ಮ ಪೋಷಕಾಂಶಗಳಿವೆ. ಇದರಿಂದಾಗಿ ಮೆದುಳು ಆರೋಗ್ಯಕರವಾಗಿರುತ್ತದೆ. ಮೆದುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಕಡಿಮೆಯಾಗುತ್ತವೆ.

ಇನ್ನು ಮೆದುಳು ಮತ್ತು ದೇಹವು ಚೆನ್ನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯ ಹೆಚ್ಚಾಗಿದೆ. ಹಾಗಾಗಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದು ಮುಖ್ಯ. ಓದಿನಲ್ಲಿ ಮಗ್ನವಾಗಿರುವ ವೇಳೆ ಆಗಾಗ್ಗೆ ಬಾಟಲಿಯಲ್ಲಿ ಇರಿಸಿರುವ ನೀರನ್ನು ಕುಡಿಯುವುದು ಉತ್ತಮ. ಇದು ನಿಮ್ಮ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಉಂಟು ಮಾಡಬಹುದು.

ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆರೋಗ್ಯಕರ ದೇಹ ಮತ್ತು ಮನಸ್ಸು ಬಹಳ ಮುಖ್ಯವಾಗಿದೆ ಮತ್ತು ಮಗು ಯಶಸ್ಸನ್ನು ಸಾಧಿಸಲು ನಿಮ್ಮ ಮಗುವಿಗೆ ಉತ್ತಮವಾದ ಮತ್ತು ಪೌಷ್ಟಿಕ ಆಹಾರ ನೀಡುವ ಮೂಲಕ ಯಶಸ್ಸಿಗೆ ಸಹಕರಿಸಿ.

Leave A Reply

Your email address will not be published.