ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ : ಪೊಲೀಸರಿಗೆ ದೊರೆಯಿತೇ ಮುಖ್ಯವಾದ ಮಾಹಿತಿ!!!

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ ಕರಾವಳಿ ಭಾಗದಲ್ಲಿ ನಡೆದ ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣದ ಕುರಿತು ಖಾಕಿ ಪಡೆ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದು, ಸದ್ಯದಲ್ಲೇ ಕೊಲೆಯ ಹಿಂದಿನ ಅಸಲಿ ರಹಸ್ಯ ಬಯಲಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಕಳೆದ ಭಾನುವಾರ ಸಂಜೆ ಶರತ್‌ ಶೆಟ್ಟಿ ಅವರನ್ನು ಪಾಂಗಾಳದ ಅಂಗಡಿಯೊಂದರ ಬಳಿಗೆ ಮಾತುಕತೆಗೆ ಕರೆಸಿದ ಯುವಕರ ತಂಡ ಆ ಬಳಿಕ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪ್ರಕರಣ ವರದಿಯಾಗಿತ್ತು. ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ್ದರು. ಸದ್ಯ, ಈ ಪ್ರಕರಣದ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದ್ದು, ಹೀಗಾಗಿ ಆರೋಪಿಗಳ ಜಾಡು ಪತ್ತೆ ಮಾಡುವಲ್ಲಿ ಖಾಕಿ ಪಡೆ ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಉಡುಪಿ ಎಸ್ಪಿ, ಅಡಿಷನಲ್‌ ಎಸ್ಪಿ, ಕಾರ್ಕಳ ಡಿವೈಎಸ್ಪಿ ಸಹಿತ ಮೇಲಧಿಕಾರಿಗಳು ಕಾಪು ವೃತ್ತ ನಿರೀಕ್ಷಕರಾದ ಕೆ. ಸಿ. ಪೂವಯ್ಯರವರ ಕಛೇರಿಗೆ ಭೇಟಿ ನೀಡುತ್ತಿದ್ದು ನಿರಂತರ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಈ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಸಂಶಯದ ಮೇರೆಗೆ ಪೋಲೀಸರು ಹಲವರನ್ನು ವಶಕ್ಕೆ ಪಡೆಯಲಾಗಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ, ಪೊಲೀಸರಿಗೆ ಮಹತ್ವದ ವಿಚಾರಗಳು ಜೊತೆಗೆ ಪ್ರಮುಖ ಆರೋಪಿಗಳ ಜಾಡು ಅರಸುತ್ತಾ ಹೊರಟ ಪೊಲೀಸರಿಗೆ ಹತ್ಯೆಯ ಹಿಂದೆ ಅಡಗಿರುವ ಕೈಗಳ ಬಗ್ಗೆ ಸುಳಿವುಲಭ್ಯವಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಕುರಿತು ಖಾಕಿ ಪಡೆ ಖಚಿತ ಪಡಿಸಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಹತ್ಯೆಯ ಹಿಂದಿನ ರಹಸ್ಯ ಬಯಲಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಪೋಲಿಸ್ ಪಡೆ ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.