ಲೇಬರ್‌ ಕಾರ್ಡ್‌ ಹೊಂದಿರುವವರೇ ನಿಮಗೊಂದು ಹೊಸ ಅಪ್ಡೇಟ್‌ ಬಂದಿದೆ !

ಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರವು ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಈಗಾಗಲೇ, ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಯೋಜನೆ ಹಾಗೂ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ಹಾಗೂ ಇತರೆ ಯೋಜನೆಗಳಲ್ಲಿ ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಇನ್ನು ಯಾವುದೇ ಸ್ಕಾಲರ್ಶಿಪ್ ಅಥವಾ ಬಸ್ ಪಾಸ್ ಬಂದಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆಯಿಂದ ಹೊಸ ಅಪ್ಡೇಟ್ ಬಂದಿದೆ. ನಿಮಗೂ ಕಾರ್ಮಿಕ ಕಾರ್ಡ್ ಅಡಿಯಲ್ಲಿ ಯಾವುದೇ ಸೌಲಭ್ಯಗಳು ಲಭ್ಯವಾಗದಿದ್ದಲ್ಲಿ , ಇಲ್ಲಿ ನೀಡಲಾದ ಪೂರ್ತಿ ಮಾಹಿತಿಯನ್ನು ಓದಿರಿ.

ಕಾರ್ಮಿಕ ಇಲಾಖೆಯ ಹೊಸ ಅಪ್ಡೇಟ್’ನಲ್ಲಿರುವ ಮಾಹಿತಿ ಪ್ರಕಾರ, ಇತ್ತೀಚಿನ ದಿನಗಳಲ್ಲಂತೂ ಲೇಬರ್ ಕಾರ್ಡ್’ನ ಮಹತ್ವ ಹೆಚ್ಚುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರವು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ಯೋಜನೆಗಳ ಸದುಪಯೋಗಕ್ಕಾಗಿ ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವೆಂದು ಶರತ್ತು ವಿಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಲ್ಲದೆ ಇರುವವರು ಸಹ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಡೂಪ್ಲಿಕೇಟ್ ಲೇಬರ್ ಕಾರ್ಡ್’ಗಳನ್ನು ಮಾಡಿಸಿಕೊಂಡು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ ನಕಲಿ ಲೇಬರ್ ಕಾರ್ಡ್ ಹೆಚ್ಚಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಹಾಗಾಗಿ, ಯೋಜನೆಗಳ ದುರ್ಬಳಕೆಯನ್ನು ತಡೆಯಲು ಹಾಗೂ ಅನರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದಂತೆ ತಡೆಯಲು ಇಲಾಖೆಯು ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಹೌದು, ನಕಲಿ ಲೇಬರ್ ಕಾರ್ಡಗಳನ್ನು ಪತ್ತೆಹಚ್ಚಿ ಅವುಗಳನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ” ನಕಲಿ ಕಾರ್ಮಿಕ ಕಾರ್ಡ್‌ ಹಾಗೂ ಬೋಗಸ್ ಕಾರ್ಡ್ ರದ್ದತಿ ಅಭಿಯಾನ” ವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನದಡಿಯಲ್ಲಿ ನಕಲಿ ಲೇಬರ್ ಕಾರ್ಡ್ ಮಾಡಿಸಿಕೊಂಡಿರುವ ಫಲಾನುಭವಿಗಳು ತಾವಾಗಿಯೇ ಸ್ವ ಇಚ್ಛೆಯಿಂದ ಹೋಗಿ ಕಾರ್ಡುಗಳನ್ನು ರದ್ದುಪಡಿಸಿಕೊಳ್ಳಬೇಕು. ಈಗಾಗಲೇ ಇಲಾಖೆಯಿಂದ 25.01.2023 ರಿಂದ 25.02.2023 ರವರೆಗೆ ಅಭಿಯಾನ ಜಾರಿಯಾಗಿದ್ದು, ನಕಲಿ ಕಾರ್ಡುಗಳನ್ನು ಹಿಂದಿರುಗಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಸಹಿತ ಹಿಂದಿರುಗಿಸದೆ ಇರುವ ನಕಲಿ ಫಲಾನುಭವಿಗಳಿಗೆ ನಂತರದ ದಿನಗಳಲ್ಲಿ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.

ಈ ಲೇಬರ್ ಕಾರ್ಡ್’ಗಳನ್ನು ಮಂಡಳಿಯ ಹೆಸರು ಸೂಚಿಸುವಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗಾಗಿ ಮಾತ್ರ ಜಾರಿಗೆ ತರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟೈಲರ್, ತರಕಾರಿ ಮಾರುವವರು, ಬಟ್ಟೆ ಮಾರುವವರು, ಕಸಗುಡಿಸುವವರು, ಬೀದಿ ಬದಿ ವ್ಯಾಪಾರಸ್ಥರು ಹೀಗೆ ಎಲ್ಲರೂ ಲೇಬರ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ಕಟ್ಟಡ ನಿರ್ಮಾಣ, ಇಟ್ಟಿಗೆ ತಯಾರಕರು, ಸಿಮೆಂಟ್ ತಯಾರಕರು, ಕಟ್ಟಡ ಪೇಂಟಿಂಗ, ರೈಲ್ವೆ ಟ್ರ್ಯಾಕ್ ನಿರ್ಮಾಣ, ಬ್ರಿಡ್ಜ್ ನಿರ್ಮಾಣ, ರಸ್ತೆ ನಿರ್ಮಾಣ, ರಸ್ತೆ ರಿಪೇರಿ, ಬಿಲ್ಡಿಂಗ್ ರಿಪೇರಿ, ಇತರೆ ಸ್ಮಾರಕ ನಿರ್ಮಾಣ, ಹೀಗೆ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿದ್ದು ಬೇರೆ ಕೆಲಸ ಮಾಡುವ ಜನರು ಈ ಲೇಬರ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಹರಾಗಿರುವುದಿಲ್ಲ.

ಹಾಗಾಗಿ ನೀವೇನಾದರೂ ನಕಲಿ ಲೇಬರ್ ಕಾರ್ಡ್ ಮಾಡಿಸಿದಲ್ಲಿ ಈಗಲೇ ಕ್ಯಾನ್ಸಲ್ ಮಾಡಿಸಿಕೊಳ್ಳಿ. ಕ್ಯಾನ್ಸಲ್ ಮಾಡಿಸಿಕೊಳ್ಳಲು 155214 ಅಥವಾ 9845353214 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಲೇಬರ್ ಕಾರ್ಡನ್ನು ರದ್ದುಗೊಳಿಸಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ನಿಮ್ಮ ಲೇಬರ್ ಕಾರ್ಡನ್ನು ರದ್ದುಪಡಿಸಿಕೊಳ್ಳಬಹುದು.

ಸೂಚನೆ: ನಕಲಿ ಲೇಬರ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಕೂಡಲೇ ನಿಮ್ಮ ಕಾಡನ್ನು ರದ್ದುಗೊಳಿಸಿ ಇಲ್ಲವಾದಲ್ಲಿ ಇಲಾಖೆಯಿಂದ ಕಾನೂನು ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆಯನ್ನು ಎದುರಿಸಬೇಕಾಗುತ್ತದೆ.

Leave A Reply

Your email address will not be published.