Good News: ಕೇಂದ್ರ ಸರ್ಕಾರ ನೀಡುತ್ತಿದೆ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಈ ಅವಕಾಶ!

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಸುಮಾರು ಶೇಕಡಾ 60 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ರೈತರ ಕಷ್ಟ ರೈತರಿಗೇ ಗೊತ್ತು. ರೈತರು ತಮ್ಮ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬೆಳೆಸುತ್ತಾರೆ. ನಂತರ ಕಟಾವು ಮಾಡಿ ಮಾರಾಟ ಮಾಡಿ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ ಆಗದೆ ರೈತರು ಕಣ್ಗೆಟ್ಟು ಹೋಗುವುದು ಪ್ರತಿಯೊಂದು ವರ್ಷವೂ ಒಂದಲ್ಲಾ ಒಂದು ಕಾರಣದಿಂದ ನಡೆಯುತ್ತಲೇ ಇದೆ. ವಿಶೇಷವೆಂದರೆ ರೈತರು ಈ ಒಂದು ಕೃಷಿಯಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಇಲ್ಲಿ ನಿಮಗೆ ಅಂತಹ ಒಂದು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಹೌದು ಈ ಕೃಷಿಯ ಹೆಸರು ಬಿದಿರು ಕೃಷಿ. ಬಿದಿರನ್ನು ಹಸಿರು ಚಿನ್ನ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಬಿದಿರು ಕೃಷಿಯನ್ನು ಉತ್ತೇಜಿಸಲು ಭಾರತ ಸರ್ಕಾರವು 2006-2007 ರಲ್ಲಿ ರಾಷ್ಟ್ರೀಯ ಬಿದಿರು ಮಿಷನ್ ಅನ್ನು ಪ್ರಾರಂಭಿಸಿದೆ. ಇದರ ಬೇಸಾಯಕ್ಕೆ ಸರಕಾರದಿಂದ ಸಹಾಯಧನವೂ ಸಿಗುತ್ತದೆ.

ಸದ್ಯ ಋತುಮಾನಕ್ಕೆ ತಕ್ಕಂತೆ ಬಿದಿರು ಕೃಷಿ ಮಾಡಲಾಗುವುದಿಲ್ಲ. ಇದರ ಕೃಷಿಯು 4 ವರ್ಷಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ ಮತ್ತು ಅದರ ಕೃಷಿಗಾಗಿ ಭೂಮಿಯನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಈ ಬೇಸಾಯಕ್ಕೆ ಮಣ್ಣಿನ pH ಮೌಲ್ಯವು 6.5 ರಿಂದ 7.5 ರವರೆಗೆ ಇರಬೇಕು. ಒಂದು ಹೆಕ್ಟೇರ್ ನಲ್ಲಿ 625 ಬಿದಿರಿನ ಗಿಡಗಳನ್ನು ನೆಡಬಹುದು. ಬಿದಿರು ಗಿಡಗಳನ್ನು ಕಾಲಕಾಲಕ್ಕೆ ಕಟಾವು ಮಾಡಬೇಕು.

ಬಿದಿರು ಕೃಷಿಯಲ್ಲಿ ಹೆಕ್ಟೇರ್‌ಗೆ ಸುಮಾರು 1 ಸಾವಿರದ 500 ಗಿಡಗಳನ್ನು ನೆಡಲಾಗುತ್ತದೆ. ಸುಮಾರು 3 ವರ್ಷಗಳಲ್ಲಿ ಬಿದಿರು ಬೆಳೆ ಸಿದ್ಧವಾಗುತ್ತದೆ. 1 ಗಿಡದ ಬೆಲೆ 250 ರೂಪಾಯಿಗಳು ಮತ್ತು ಇದರಲ್ಲಿ ಸರ್ಕಾರದಿಂದ ಸಹಾಯಧನ ಲಭ್ಯವಿರುತ್ತದೆ. ಸರ್ಕಾರವು ಬಿದಿರು ಕೃಷಿಗಾಗಿ ರಾಷ್ಟ್ರೀಯ ಬಿದಿರು ಮಿಷನ್ ಅನ್ನು ನಡೆಸುತ್ತಿದೆ. ಅಂದರೆ ನೀವು ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡುತ್ತೀರಿ ಮತ್ತು ನಂತರ 3 ವರ್ಷಗಳ ನಂತರ ನೀವು 1 ಹೆಕ್ಟೇರ್‌ನಿಂದ ಸುಮಾರು 3.5 ಲಕ್ಷ ರೂಪಾಯಿ ಗಳಿಸುತ್ತೀರಿ. ಇದರ ನಂತರವೂ ನಿಮ್ಮ ಗಳಿಕೆ ಮುಂದುವರಿಯುತ್ತದೆ.

ಬಿದಿರಿನ ಕೃಷಿಯ ಒಂದು ಅತ್ಯುತ್ತಮ ವಿಶೇಷತೆ ಎಂದರೆ, ಬಿದಿರಿನ ಬೆಳೆ 40 ವರ್ಷಗಳವರೆಗೆ ಮುಂದುವರಿಯುತ್ತದೆ, ಕೇವಲ ನಾಲ್ಕು ವರ್ಷದಲ್ಲಿ ಬಿದಿರು ಕಟಾವಿಗೆ ಬರುತ್ತದೆ. ಬಹುಬೇಗ ಕಟಾವಿಗೆ ಬರುವುದರಿಂದ ಉತ್ತಮ ಆದಾಯವೂ ಲಭಿಸುತ್ತದೆ. ಇದನ್ನು ಬೆಳೆಯಲು ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆಯಿರುವ ಈ ಹಸಿರು ಹೊನ್ನನ್ನು ಬೆಳೆಯಲು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು.

ಒಟ್ಟಿನಲ್ಲಿ ಬಿದಿರು ಬೇಸಾಯವನ್ನು ಇತರ ಬೆಳೆಗಳಿಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ ಮತ್ತು ಅದರಿಂದ ಉತ್ತಮ ಗಳಿಕೆ ಕೂಡ ಮಾಡಬಹುದು. ಇದು ಯಾವುದೇ ಋತುವಿನಲ್ಲಿ ಹಾಳಾಗುವುದಿಲ್ಲ ಎಂದು ಸಾಬೀತು ಆಗಿದೆ.

Leave A Reply

Your email address will not be published.