ಹೈಕೋರ್ಟ್‌ನಲ್ಲಿ ಕಾನೂನು ಪದವೀಧರರಿಗೆ ಉದ್ಯೋಗಾವಕಾಶ !

Share the Article

ಪ್ರತಿಭಾವಂತ ಕಾನೂನು ಪದವೀಧರರಿಗೆ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ಹೈಕೋರ್ಟ್‌ ಕಾನೂನು ಸಹಾಯಕ ಕಂ ಸಂಶೋಧನಾ ಸಹಾಯಕ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ.

ಪ್ರಸ್ತುತ ಕಾನೂನು ಸಹಾಯಕ ಕಂ ಸಂಶೋಧನಾ ಸಹಾಯಕ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಉದ್ಯೋಗ ಪ್ರಾಧಿಕಾರ : ಕರ್ನಾಟಕ ಹೈಕೋರ್ಟ್
ಹುದ್ದೆ ಹೆಸರು : ಕಾನೂನು ಸಹಾಯಕ ಕಂ ಸಂಶೋಧನಾ ಸಹಾಯಕ
ಹುದ್ದೆಗಳ ಸಂಖ್ಯೆ : 13

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು :

  • ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಕಾನೂನು ಪದವಿ ಪಾಸ್ ಮಾಡಿರಬೇಕು.
  • ಫೆ.25, 2023 ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.
  • ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ಅಡ್ವೋಕೇಟ್‌ ಆಗಿ ರಿಜಿಸ್ಟ್ರೇಷನ್ ಪಡೆದಿರಬೇಕು.
  • ಕಂಪ್ಯೂಟರ್ ಬಳಕೆ ಕಡ್ಡಾಯ ತಿಳಿದುಕೊಂಡಿರಬೇಕು.

ಆಯ್ಕೆ ವಿಧಾನ :

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಅಭ್ಯರ್ಥಿಯ ಸಾಧನೆ, ಶೈಕ್ಷಣಿಕ ದಾಖಲೆ ಹಾಗೂ ಅಂಕಗಳು, ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡುತ್ತಾರೆ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://karnatakajudiciary.kar.nic.in
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-02-2023 ರ ರಾತ್ರಿ 11-59 ಗಂಟೆವರೆಗೆ ಅವಕಾಶ ಇರುತ್ತದೆ.

ಅರ್ಜಿ ಸಲ್ಲಿಸಿ ಹುದ್ದೆಗೆ ಆಯ್ಕೆ ಆದವರನ್ನು ಹೈಕೋರ್ಟ್‌ ನ ನ್ಯಾಯಾಧೀಶರ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಾಗುತ್ತದೆ. ಅವರು ಕಾನೂನಿಗೆ ಸಂಬಂಧಿಸಿದ ಕೆಲಸ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಕೇಸ್‌ ಫೈಲ್‌ಗಳ್ನು ಓದುವ, ಕೇಸ್‌ ವಿವರಣೆ ಬರೆಯುವ, ಇತರೆ ಕೆಲಸಗಳನ್ನು ನಿರ್ವಹಿಸಬೇಕು.

ಅಲ್ಲದೆ ಹುದ್ದೆಗೆ ಆಯ್ಕೆಯಾದವರನ್ನು ಬೆಂಗಳೂರು, ಕಲಬುರಗಿ, ಧಾರವಾಡದಲ್ಲಿನ ಹೈಕೋರ್ಟ್‌ ಮುಖ್ಯ ಘಟಕಗಳಲ್ಲಿ ನಿಯೋಜಿಸಲಾಗುತ್ತದೆ. ಈ ಹುದ್ದೆಗಳು ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರಿತವಾಗಿರುತ್ತದೆ. ಮಾಸಿಕ ಸಂಭಾವನೆಯನ್ನು ನೀಡಲಾಗುತ್ತದೆ. ಅಲ್ಲದೆ ಹುದ್ದೆಗಳನ್ನು ಅಗತ್ಯವಿದ್ದಲ್ಲಿ ಹೆಚ್ಚು ಮಾಡುವ ಅವಕಾಶ ಹೈಕೋರ್ಟ್‌ಗೆ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.

Leave A Reply