IRCTC : ದುಬೈ ಪ್ರವಾಸಕ್ಕೆ ಪ್ಯಾಕೇಜ್‌ ಘೋಷಣೆ | ದರ, ಸ್ಥಳಗಳ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (IRCTC) ಈಗಾಗಲೇ ನಮ್ಮ ದೇಶದಲ್ಲಿ ಅನೇಕ ಪ್ರವಾಸ ಪ್ಯಾಕೇಜ್‌ಗಳನ್ನು ಜೊತೆಗೆ ಕೆಲವು ದೇಶಗಳಿಗೆ ವಿದೇಶಿ ಪ್ರವಾಸದ ಪ್ಯಾಕೇಜ್‌ಗಳನ್ನು ಸಹ ತರುತ್ತಿದೆ. ನೀವು ದುಬೈಗೆ ಹೋಗುವ ಪ್ಲಾನ್’ನಲ್ಲಿದ್ದೀರಾ? ಹಾಗಾದ್ರೆ, ನಿಮಗೆಂದೆ IRCTC ಯು ಇದೀಗ ಮತ್ತೊಂದು ಸಖತ್ ಪ್ಯಾಕೇಜ್’ನ್ನು ತಂದಿದೆ. ಈ ಪ್ಯಾಕೇಜ್ ನಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಅದ್ಭುತ ಸೌಂದರ್ಯವನ್ನು ನೋಡುವುದಕ್ಕೆ ದುಬೈಗೆ ಹೋಗಬಹುದಾಗಿದೆ.

ಈ ಪ್ಯಾಕೇಜ್‌ನಲ್ಲಿ ನೀವು ಬುರ್ಜ್ ಖಲೀಫಾ ಜೊತೆ ಜೊತೆಗೆ ಮ್ಯೂಸಿಕಲ್ ಫೌಂಟೇನ್ ಶೋ, ಡೆಸರ್ಟ್ ಸಫಾರಿ, ದುಬೈನ ಅನೇಕ ಸೂಪರ್ ಡೂಪರ್ ಮಾಲ್‌ಗಳು, ಡವ್ ಕ್ರೂಸ್ ಟೂರ್, ಅಬುಧಾಬಿ ಸಿಟಿ ಟೂರ್, ಫೆರಾರಿ ವರ್ಲ್ಡ್​ಗೂ ಭೇಟಿ ನೀಡುವ ಭರ್ಜರಿ ಅವಕಾಶ ಕೂಡ ಸಿಗಲಿದೆ.

IRCTCಯು ದುಬೈ ಪ್ರವಾಸಕ್ಕಾಗಿ ಏರ್ ಟೂರ್ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದ್ದು, ಈ ಪ್ರವಾಸವು ಉತ್ತರ ಪ್ರದೇಶದ ಲಕ್ನೋದಿಂದ ಆರಂಭವಾಗಿ ಅಲ್ಲಿಂದ ಸೀದಾ ವಿಮಾನದ ಮೂಲಕ ದುಬೈಗೆ ಕರೆದೊಯ್ಯಲಾಗುತ್ತದೆ. ಈ ದುಬೈ ಯಾತ್ರೆಯ ಜರ್ನಿ 5 ಹಗಲು ಮತ್ತು 4 ರಾತ್ರಿಗಳಾಗಿದ್ದು, ಪ್ರವಾಸವು ಮಾರ್ಚ್ 11 ರಿಂದ ಮಾರ್ಚ್ 15 ರವರೆಗೆ ಇರುತ್ತದೆ. ಈ ಪ್ಯಾಕೇಜ್‌ನ ವಿಶೇಷತೆಗಳ ಬಗ್ಗೆ ನೋಡುವುದಾದರೆ, ಮೂರು ಸ್ಟಾರ್ ಹೋಟೆಲ್ ವಸತಿ ಜೊತೆಗೆ ದುಬೈಗೆ ಮತ್ತು ದುಬೈನಿಂದ ರೌಂಡ್ ಟ್ರಿಪ್ ಫ್ಲೈಟ್ ಟಿಕೆಟ್‌ಗಳನ್ನು ಒಳಗೊಂಡಿದೆ. ಇದಲ್ಲದೇ ಬೆಳಗಿನ ಉಪಹಾರ ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ಈ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಿದ್ದಾರೆ.

ಪ್ರತಿ ವರ್ಷ ಭಾರತದಿಂದ ಹೆಚ್ಚಿನ ಸಂಖ್ಯೆಯ ಜನರು ದುಬೈಗೆ ಭೇಟಿ ನೀಡುತ್ತಾರೆ. ನೀವು ಕೂಡಾ ಬುರ್ಜ್ ಖಲೀಫಾದ ಸೌಂದರ್ಯ ರಾಶಿಯನ್ನು ನೋಡಲು ಬಯಸಿದರೆ, ಮರುಭೂಮಿ ಸಫಾರಿಯ ರೋಮಾಂಚನ ಅನುಭವವನ್ನು ಆನಂದಿಸಬೇಕೆಂದಿದ್ದರೆ, ನೀವು ಈ ಪ್ಯಾಕೇಜ್ ಅನ್ನು ಖಂಡಿತ ಕಣ್ ಮುಚ್ಚಿ ಬುಕ್ ಮಾಡಬಹುದು. ಈ ಪ್ರವಾಸ ಪ್ಯಾಕೇಜ್​ ಅನ್ನು ಇಬ್ಬರು ಅಥವಾ ಮೂರು ಜನರಿಗೆ ಬುಕ್ ಮಾಡುವುದರಿಂದ ಒಬ್ಬರಿಗೆ 85,100 ರೂ.ಇರಲಿದೆ. ಒಂದು ವೇಳೆ ನೀವು ಏಕಾಂಗಿಯಾಗಿ ಪ್ರಯಾಣಿಸಲು ಯೋಜಿಸಿದರೆ ರೂ.1,01,800 ಪಾವತಿಸಬೇಕಾಗುತ್ತದೆ. ಈ ಪ್ಯಾಕೇಜ್ ನಲ್ಲಿ ಮಕ್ಕಳಿಗೆ ರೂ.84,400 ನಿಗದಿಪಡಿಸಲಾಗಿದೆ.

IRCTC ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್
https://www.irctctourism.com
ಮೂಲಕ ನೀವು ಈ ಪ್ಯಾಕೇಜ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಬುಕ್ ಮಾಡಬಹುದು.

Leave A Reply

Your email address will not be published.