Viral video: ವಿದ್ಯಾರ್ಥಿನಿಗೆ ನಡು ರಸ್ತೆಯಲ್ಲೇ ಭೂಪನೊಬ್ಬ ತಾಳಿ ಕಟ್ಟಿದೇಕೆ??ಘಟನೆಯ ಅಸಲಿ ರಹಸ್ಯ ಬಯಲು!!

Share the Article

ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ಫೋಟೋ ವಿಡಿಯೋಗಳು ಶೇರ್ ಆಗಿ ಗಮನ ಸೆಳೆಯುತ್ತವೆ.  ಅದರಲ್ಲಿಯು ಸೆಲೆಬ್ರಿಟಿ ,  ಸ್ಟಾರ್ ಗಳೆಂದರೆ ಮುಗಿಯಿತು ಕಥೆ.  ಮನೆಯಿಂದ ಹೊರ ಕಾಲಿಟ್ಟ ಕೂಡಲೇ ಸಾವಿರಾರು ಕ್ಯಾಮರಾ ಕಣ್ಣಲ್ಲಿ  ಅವರ ಫೋಟೋಗಳು ಸೆರೆಯಾಗಿ ರೆಕ್ಕೆ ಪುಕ್ಕ ಸೇರಿ ನಾನಾ ರೀತಿಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಅಷ್ಟೇ ಸಾಲದು ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಆಗಿ ಭಿನ್ನ ವಿಭಿನ್ನ ಕಮೆಂಟುಗಳು ಟ್ರೋಲ್ ಗಳು ಹರಿದಾಡುತ್ತವೆ. ಇದಕ್ಕೆ ಸಾಮಾನ್ಯ ಜನತೆ ಕೂಡ ಹೊರತಾಗಿಲ್ಲ ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆ ವರದಿಯಾಗಿದೆ.

ಅಷ್ಟಕ್ಕೂ ಏನಪ್ಪಾ ಕಹಾನಿ ಅಂದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿ ಸಂಚಲನ ಮೂಡಿಸಿತ್ತು. ಮಂಡ್ಯದ ರೋಟರಿ ಭವನದ ಮುಂದೆ ಯುವಕನೊಬ್ಬ ವಿದ್ಯಾರ್ಥಿನಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿರುವಂತೆ ತೋರುವ ಈ ವೀಡಿಯೊ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದರು.  ನಡು ರಸ್ತೆಯಲ್ಲೇ ವಿದ್ಯಾರ್ಥಿನಿಗೆ ತಾಳಿ ಕಟ್ಟಿದರೂ ಕೂಡ  ಪೊಲೀಸರು ಈ ಬಗ್ಗೆ ಯಾಕೆ ಯಾವ ಕ್ರಮ  ಕೂಡ ಕೈಗೊಂಡಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಕುರಿತು ಮಂಡ್ಯ ಪೊಲೀಸರು ಸ್ಪಷ್ಟನೆ ನೀಡಿದ್ದು,  ಇದು 2021 ರಲ್ಲಿ ನಡೆದ ಘಟನೆ ಎಂದು ಹೇಳಿದ್ದು, ಈ ಪ್ರಕರಣದ ಕುರಿತಂತೆ ಮಂಡ್ಯ ಪೂರ್ವ ಠಾಣೆಯಲ್ಲಿ  ವಿಚಾರಣೆ ಕೂಡ ನಡೆದು ಕೊನೆಗೆ ಸುಖಾಂತ್ಯ ಕಂಡಿದೆ. ಹಾಗಾಗಿ,  ಇತ್ತೀಚೆಗೆ ನಡೆದ ಘಟನೆಯಲ್ಲ ಎಂಬ ಸ್ಪಷ್ಟನೆ ನೀಡಿರುವುದಲ್ಲದೇ ವಿಡಿಯೋವನ್ನು ಶೇರ್‌ ಮಾಡದಂತೆ  ಪೊಲೀಸರು ಮನವಿ  ಮಾಡಿದ್ದಾರೆ.

Leave A Reply