ಮಾರ್ಕೆಟ್‌ನಲ್ಲಿ ತಲವಾರು ಝಳಪಿಸಿದ ವ್ಯಕ್ತಿಗೆ ಫೈರಿಂಗ್‌ ಪ್ರಕರಣ : ಆರೋಪಿಯ ಕಾಲು ಕತ್ತರಿಸಿದ ಡಾಕ್ಟರ್‌ !

Share the Article

ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ತಲವಾರು ಝಳಪಿಸಿದ್ದು, ಆತನ ಮೇಲೆ ಪೊಲೀಸ್‌ ಪಿಎಸ್‌ಐ ಫೈರಿಂಗ್‌ ನಡೆಸಿದ್ದ ಘಟನೆ ಕಲಬುರಗಿಯ ಬ್ರಹ್ಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ಕಾಲನ್ನು ಡಾಕ್ಟರ್‌ ಕತ್ತರಿಸಿದ್ದಾರೆ.

ಕಲಬುರ್ಗಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಮೊಹಮ್ಮದ್‌ ಫಜಲ್‌ ಎಂಬಾತ ತಲ್ವಾರ್‌ ಹಿಡಿದು ಅಲ್ಲಿನ ಜನರಿಗೆ ಭಯ ಹುಟ್ಟಿಸುತ್ತಿದ್ದ. ಸ್ಥಳಕ್ಕಾಗಮಿಸಿದ ಪೋಲಿಸರ ಮೇಲೆ ಕೂಡ ಹಲ್ಲೆ ನಡೆಸಲು ಮುಂದಾಗಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಪಿಎಸ್‌ಐ ವಾಹಿದ್‌ ಕೋತ್ವಾಲ್‌ ಫಜಲ್ ಮೇಲೆ ಫೈರಿಂಗ್‌ ನಡೆಸಿದ್ದರು. ಈ ಘಟನೆ ರವಿವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದ್ದು, ಫೈರಿಂಗ್‌ನಲ್ಲಿ ಮೊಹಮ್ಮದ್‌ ಫಜಲ್‌ ಕಾಲಿಗೆ ಗುಂಡು ತಗುಲಿತ್ತು.

ಫಜಲ್‌ ಕಾಲಿಗೆ ಗುಂಡು ತಗಲಿದ ಕಾರಣ, ಕಾಲು ರಕ್ತದ ಮಡುವಿನಲ್ಲಿ ಮುಳುಗಿತ್ತು. ಕಾಲಿಗೆ ತುಂಬಾನೇ ಗಾಯವಾಗಿತ್ತು. ಕಾಲು ಡ್ಯಾಮೇಜ್ ಆಗಿದ್ದ ಕಾರಣ ಇದೀಗ ವೈದ್ಯರು ಆರೋಪಿಯ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ. ತೆಗೆಯದಿದ್ದರೆ ಮುಂದೆ ಹೆಚ್ಚು ತೊಂದರೆಯಾಗುವ ಸಾಧ್ಯತೆ ಇತ್ತು. ಹಾಗಾಗಿ ಯುನೈಟೆಡ್‌ ಆಸ್ಪತ್ರೆಯ ವೈದ್ಯರು ಆತನ ಬಲಗಾಲನ್ನು ತುಂಡು ಮಾಡಿದ್ದು, ಸದ್ಯ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.

Leave A Reply