Coding : ಕೋಡಿಂಗ್ ಕಲಿತರೆ ಏನೆಲ್ಲಾ ಉದ್ಯೋಗ ಲಭ್ಯ?
ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ.
ವ್ಯಾಸಂಗ ಮುಗಿಯುತ್ತಿದ್ದಂತೆ ತಮ್ಮ ವಿದ್ಯಾರ್ಹತೆ ಹಾಗೂ ತಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಸಹಜ. ಅದೇ ಕಾಮರ್ಸ್ ನವರು ಅಕೌಂಟ್ಸ್, ಬ್ಯಾಂಕ್ ಹುದ್ದೆಗಳ ಕಡೆ ಗಮನ ಹರಿಸಿದರೆ, ಇಂಜಿನಿಯರಿಂಗ್ ಮಾಡಿದವರು ತಮ್ಮದೇ ಫೀಲ್ಡ್ ನ ಕೆಲ್ಸ ನೆಚ್ಚಿಕೊಳ್ಳೋದು ಸಹಜ. ಅದೇ ರೀತಿ ಕೋಡಿಂಗ್, ಪ್ರೋಗ್ರಾಮ್ಮಿಂಗ್ ಕ್ಷೇತ್ರದಲ್ಲಿ ಇಂದು ಉದ್ಯೋಗಕ್ಕಾಗಿ ವಿಪುಲ ಅವಕಾಶಗಳಿವೆ. ಆದರೆ, ಈ ಕೋಡಿಂಗ್ ಎಂದರೇನು?? ಎನ್ನುವ ಪ್ರಶ್ನೆ ನಿಮಗೆ ಸಹಜವಾಗಿ ಕಾಡಬಹುದು. MCA ಇಲ್ಲವೇ ಕಂಪ್ಯೂಟರ್ ವಿಷಯಗಳ ಬಗ್ಗೆ ವ್ಯಾಸಂಗ ಮಾಡಿದವರಿಗೆ ಈ ಕೋಡಿಂಗ್ ಮಾಡುವ ಪ್ರೋಗ್ರಾಂ, ಫ್ಲೋ ಚಾರ್ಟ್, ವಿಭಿನ್ನ ಪ್ರೋಗ್ರಾಮಿಂಗ್ ಲಾಂಗ್ವೇಜ್ ಬಗ್ಗೆ ಮಾಹಿತಿ ಕೊಂಚಮಟ್ಟಿಗಾದರು ತಿಳಿದಿರುತ್ತದೆ. ಸದ್ಯ ಅನೇಕ ಕಂಪನಿಗಳು ಕೋಡಿಂಗ್ ಜ್ಞಾನ ಹೊಂದಿರುವ ಉದ್ಯೋಗಿಗಳಿಗಾಗಿ ಹುಡುಕಾಟ ನಡೆಸುತ್ತಿವೆ.
ಕೋಡಿಂಗ್ ಎಂದರೆ ಬಹುತೇಕವಾಗಿ ನಮ್ಮ ಪರಿಕಲ್ಪನೆಗಳನ್ನು ಒಂದು ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲು ಅಥವಾ ಒಂದು ಹೊಸ ಅಂತಿಮ-ಉತ್ಪನ್ನವನ್ನು ಸೃಷ್ಟಿಸಲು ಬಳಸಿಕೊಳ್ಳುವ ಪ್ರಕ್ರಿಯೆಯಾಗಿದೆ.ಹೇಳಿ ಕೇಳಿ ಇದು ಡಿಜಿಟಲ್ ಯುಗ. ಎಲ್ಲೇ ಹೋದರು ಬಂದ್ರೂ ಎಲ್ಲವೂ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಕ್ಷಣ ಮಾತ್ರದಲ್ಲಿ ಮಾಡಲು ಸಾಧ್ಯವಾಗುತ್ತದೆ. ಆದ್ರೆ, ನಾವೆಲ್ಲರೂ ಬಳಸುವ ಸ್ಮಾರ್ಟ್ ಫೋನ್ ಅದರಲ್ಲಿ ನಾವು ಉಪಯೋಗಿಸುವ ಕರೆ, ಮೆಸೇಜ್, ವಿಭಿನ್ನ ಅಪ್ಲಿಕೇಶನ್ ಎಲ್ಲವೂ ಪ್ರೋಗ್ರಾಮಿಂಗ್ ಲಾಂಗ್ವೇಜ್ ಗಳಲ್ಲಿ ರಚಿಸಲಾಗಿರುತ್ತದೆ. ಅನೇಕ ಪ್ರೋಗ್ರಾಮಿಂಗ್ ಭಾಷೆಗಳಿದ್ದು, ಕೆಲವು ವೆಬ್ ಅಭಿವೃದ್ಧಿಗೆ (Web development) ಬಳಸಲ್ಪಡುತ್ತವೆ ಮತ್ತು ಕೆಲವು Android ಅಪ್ಲಿಕೇಶನ್ ಅಭಿವೃದ್ಧಿಗೆ ಬಳಸಲ್ಪಡುತ್ತವೆ.
ಕೋಡಿಂಗ್ ಎನ್ನುವುದು ಪ್ರೋಗ್ರಾಂ ಅಥವಾ ಕಾರ್ಯವನ್ನು ಕಂಪ್ಯೂಟರ್‌ಗೆ ಅರ್ಥವಾಗುವ ಭಾಷೆಯಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ನಿಮ್ಮ ಸಮಸ್ಯೆಯನ್ನು ಕಂಪ್ಯೂಟರ್‌ಗೆ ಆದೇಶಗಳ ಸರಣಿಯಾಗಿ ಪರಿವರ್ತಿಸಿದಾಗ ಕೋಡಿಂಗ್‌ನ ವ್ಯಾಖ್ಯಾನವಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ರಚಿಸಲಾದ ಕೋಡಿಂಗ್ ಭಾಷೆಗಳ ಮೂಲಕ ಇದನ್ನು ಮಾಡಬಹುದಾಗಿದೆ.ಹೆಚ್ಚು ಬಳಸಬಹುದಾದ ಕೆಲವು ಕೋಡಿಂಗ್ ಭಾಷೆಗಳ ಬಗ್ಗೆ ಗಮನ ಹರಿಸಿದರೆ,
ಜಾವಾ (Java)
ಪೈಥಾನ್ (Python),
C
C++
ಜಾವಾ ಸ್ಕ್ರಿಪ್ಟ್ (Java Script)
HTML
CSS
PHP
MySQL
.NET
ದಿನಂಪ್ರತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿರುವುದು ಗೊತ್ತಿರುವ ವಿಚಾರವೇ. ಹೀಗೆ ತಂತ್ರಜ್ಞಾನ ಸಾಧನಗಳ ಕೋಡಿಂಗ್ ಬಹಳ ಸರಳ ಹಾಗೂ ಸುಲಭವಾಗಿದ್ದು, ಇಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞರು(ಐಟಿ) ಕೂಡ ಪೈಥಾನ್(Python) ಮತ್ತು ಆರ್(R) ನಂತಹ ಲಾಂಗ್ವೇಜ್‌ಗಳ ನೆರವಿನೊಂದಿಗೆ ಸಂಕೀರ್ಣವಾದ ಕೋಡ್‍ಗಳನ್ನು ಬರೆಯುತ್ತಿದ್ದಾರೆ. ಕೋಡಿಂಗ್ ಎಂದರೆ ತಾಂತ್ರಿಕ ರೂಪದ ಪರಿಹಾರಗಳನ್ನು ನೀಡುವ ಒಂದು ಕ್ರಮವಾಗಿದೆ.ಈ ಸೂಚನೆಗಳು ಅಥವಾ “ಕೋಡ್” ಅನ್ನು ನಿರ್ದಿಷ್ಟ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆಯಲಾಗಿದೆ. ಉದಾಹರಣೆಗೆ ಜಾವಾ ಅಥವಾ ಪೈಥಾನ್, ಕಂಪ್ಯೂಟರ್ ಅರ್ಥಮಾಡಿಕೊಳ್ಳಬಹುದು
ಈಗ ನಿಮ್ಮ ಮುಂದೆ ಹಾಗಿದ್ರೆ, ಕೋಡಿಂಗ್ ಕಲಿಯುವುದು ಸುಲಭವೇ ಎಂಬ ಪ್ರಶ್ನೆ ಸಹಜವಾಗಿ ಕಾಡಬಹುದು. ಹೌದು!!! ನೀವು ಕೋಡಿಂಗ್ ಬಗ್ಗೆ ತಿಳಿಯುವ ಆಸಕ್ತಿ ಹೊಂದಿದ್ದರೆ, ಅನೇಕ ಆನ್‌ಲೈನ್ ವೆಬ್‍ಸೈಟ್‌ಗಳ ನೆರವಿನೊಂದಿಗೆ ಕೋಡಿಂಗ್ ಅನ್ನು ಕಲಿತು ಅಭ್ಯಾಸ ಮಾಡಬಹುದು. ಕೋಡ್ ಬರೆಯುವುದಕ್ಕೆ ಮುಖ್ಯ ಅಡಿಪಾಯ ಈ ವಿನ್ಯಾಸವನ್ನು ರಚಿಸುವುದಕ್ಕಾಗಿ ಆಲ್ಗೋರಿದಮ್ ಅಥವಾ ಫ್ಲೋಚಾರ್ಟ್ ಹಾಗೂ ಅದನ್ನು ಕೋಡ್ ಆಗಿ ಪರಿವರ್ತಿಸುವುದನ್ನು ತಿಳಿದಿರಬೇಕು.
ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೋಡ್ ಮಾಡುವ ಸಾಮರ್ಥ್ಯವು ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳಲ್ಲಿ ಒಂದಾಗಿದೆ. ಪ್ರಪಂಚವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದಂತೆ, ನುರಿತ ಕೋಡರ್‌ಗಳ ಬೇಡಿಕೆಯು ಬೆಳೆಯುತ್ತಲೇ ಇರುತ್ತದೆ.ಭಾರತದಲ್ಲಿ, ಒಬ್ಬ ಕೋಡರ್‌ನ ಸಂಬಳವು, ವಿವಿಧ ಕೋಡಿಂಗ್ ಹಂತಗಳಿಗೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಆರಂಭದಲ್ಲಿರುವವರು ವಾರ್ಷಿಕ 3ರಿಂದ 5 ಲಕ್ಷ ಸಂಭಾವನೆ ನಿರೀಕ್ಷಿಸಬಹುದು. ಮಧ್ಯಮ-ಶ್ರೇಣಿಯ ಅನುಭವದೊಂದಿಗೆ ಕೋಡಿಂಗ್ ಕೌಶಲ್ಯಗಳಲ್ಲಿ(ಇತ್ತೀಚಿನ ತಂತ್ರಜ್ಞಾನ ಮತ್ತು ಅತಿಯಾಗಿ ಬೇಡಿಕೆಯಲ್ಲಿರುವ ತಂತ್ರಜ್ಞಾನ) ವೃತ್ತಿಪರರು ವಾರ್ಷಿಕ 10 ರಿಂದ 12 ಲಕ್ಷ ವೇತನ ಗಳಿಸಬಹುದು. ಉತ್ಪನ್ನ ಆಧಾರಿತ MNCಗಳಿಗಾಗಿ(ಬಹುರಾಷ್ಟ್ರೀಯ ಸಂಸ್ಥೆಗಳು) ಕೆಲಸ ಮಾಡುವ ವೃತ್ತಿಪರರಿಗೆ, ಅನುಭವದಲ್ಲಿ ಅವರ ಸೀನಿಯಾರಿಟಿಯನ್ನು ಅವಲಂಬಿಸಿ 15 ರಿಂದ 40 ಲಕ್ಷ ಸಿಗಬಹುದು.ಸಾಫ್ಟ್‌ವೇರ್ ಅಭಿವೃದ್ಧಿಯು ಉತ್ತಮ ಸಂಬಳದ ವೃತ್ತಿಯಾಗಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ಸಂಗತಿ.
ಉದ್ಯೋಗಾವಕಾಶಗಳು ಹೀಗಿವೆ:
ಫ್ರಂಟ್- ಎಂಡ್ ಡೆವಲಪರ್
ಮುಂಭಾಗದ ಡೆವಲಪರ್‌ನ ಮುಖ್ಯ ಕೆಲಸ ಕಾರ್ಯದ ಬಗ್ಗೆ ಮಾಹಿತಿ ಇಲ್ಲಿದೆ. ಬಳಕೆದಾರ ಇಂಟರ್ಫೇಸ್ (UI) ಮೂಲಕ ಬಳಕೆದಾರರು ಅಪ್ಲಿಕೇಶನ್‌ನೊಂದಿಗೆ ಸಂವಹನ ನಡೆಸಬಹುದೆಂದು ಖಚಿತಪಡಿಸಿಕೊಳ್ಳುವುದು – ಸಾಮಾನ್ಯವಾಗಿ ಇದು ವೆಬ್ ಬ್ರೌಸರ್ ಅನ್ನು ಬಳಸಿಕೊಂಡು ಪ್ರವೇಶಿಸುವ ವೆಬ್‌ಸೈಟ್ ಇದಾಗಿದೆ. ವೆಬ್‌ಸೈಟ್ ಹೇಗೆ ಕಾಣುತ್ತದೆ ಮತ್ತು ಯಾವುದೇ ಡೀಬಗ್ ಮಾಡುವಿಕೆಯೊಂದಿಗೆ ವ್ಯವಹರಿಸಲು ಅವರು ತಂತ್ರಜ್ಞಾನ, ವಿನ್ಯಾಸ ಮತ್ತು ಪ್ರೋಗ್ರಾಮಿಂಗ್ ಮೂಲಕ ಇದನ್ನು ಸಾಧಿಸುತ್ತಾರೆ. ವೆಬ್‌ಸೈಟ್‌ನಲ್ಲಿ ನೀವು ಕ್ಲಿಕ್ ಮಾಡುವ, ನೋಡುವ ಅಥವಾ ಬಳಸುವ ಎಲ್ಲವೂ ಮುಂಭಾಗದ ಡೆವಲಪರ್‌ನ ಕೆಲಸವಾಗಿದೆ.
ಬ್ಯಾಕ್- ಎಂಡ್ ಡೆವಲಪರ್
ವೆಬ್‌ಪುಟದಲ್ಲಿ ನೀವು ನೋಡುವ ಎಲ್ಲವನ್ನೂ ಫ್ರಂಟ್- ಎಂಡ್ ಡೆವಲಪರ್‌ಗಳು ನಿರ್ವಹಿಸುವಾಗ, ಬ್ಯಾಕ್- ಎಂಡ್ ಡೆವಲಪರ್‌ಗಳು ತೆರೆಮರೆಯಲ್ಲಿ ಮಿದುಳುಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಮಾಹಿತಿಯೊಂದಿಗೆ ವ್ಯವಹರಿಸುವ ಮತ್ತು ಸೈಟ್‌ನಲ್ಲಿ ಕ್ರಮಗಳನ್ನು ಕೈಗೊಳ್ಳುವ ಕಾರ್ಯವಿಧಾನಗಳನ್ನು ಅವರು ನಿರ್ಮಿಸುತ್ತಾರೆ. ನೀವು ನೋಡಲಾಗದ ಭದ್ರತೆ, ಡೇಟಾ ಸಂಗ್ರಹಣೆ ಮತ್ತು ಇತರ ಸರ್ವರ್- ಆಧಾರಿತ ಕಾರ್ಯಗಳಿಗೆ ಬ್ಯಾಕ್- ಎಂಡ್ ಡೆವಲಪರ್ ಜವಾಬ್ದಾರರಾಗಿರುತ್ತಾರೆ.
ಜಾವಾಪೂರ್ಣ- ಸ್ಟಾಕ್ ಡೆವಲಪರ್
“ಫುಲ್ ಸ್ಟಾಕ್” ಡೆವಲಪರ್ ಆಗಿರುವುದು ಎಂದರೆ ನೀವು ಮುಂಭಾಗದ ಅಭಿವೃದ್ಧಿ ಮತ್ತು ಬ್ಯಾಕೆಂಡ್ ಅಭಿವೃದ್ಧಿ ಎರಡನ್ನೂ ಮಾಡಬೇಕಾಗುತ್ತದೆ. ಇದು ಸಾಮಾನ್ಯವಾಗಿ ಹೆಚ್ಚು ಅನುಭವವಿರುವ ಇಂಜಿನಿಯರ್‌ಗಳು ನಿರ್ವಹಿಸುವ ಕಾರ್ಯವಾಗಿದೆ.
ಮೊಬೈಲ್ ಡೆವಲಪರ್
ಮೊಬೈಲ್ ಡೆವಲಪರ್‌ಗಳು, ಹೆಸರೇ ಸೂಚಿಸುವಂತೆ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಮೊಬೈಲ್ ಸಾಧನಗಳಿಗಾಗಿ ಅಪ್ಲಿಕೇಶನ್‌ಗಳನ್ನು ರಚಿಸುತ್ತಾರೆ. ಅವರು ಆಬ್ಜೆಕ್ಟಿವ್ ಸಿ (ಐಫೋನ್), ಜಾವಾ (ಆಂಡ್ರಾಯ್ಡ್), ಸ್ವಿಫ್ಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆದಾರ ಇಂಟರ್ಫೇಸ್, ತರ್ಕ ಮತ್ತು ಕಾರ್ಯವನ್ನು ನಿರ್ಮಿಸಲು ಇತರ ಭಾಷೆಗಳಂತಹ ಕೋಡಿಂಗ್ ಭಾಷೆಗಳನ್ನು ಬಳಸುತ್ತಾರೆ.
ಕೋಡಿಂಗ್ ಕಲಿಯುವುದು ಹೇಗೆ ಅಂತೀರಾ?
ಪ್ರೋಗ್ರಾಮಿಂಗ್ ಕೋಡಿಂಗ್ ಬಳಕೆಯನ್ನು ಒಳಗೊಂಡಿರುತ್ತದೆ. ವಿನ್ಯಾಸ, ಪರೀಕ್ಷೆ ಮತ್ತು ಡೀಬಗ್ ಮಾಡುವಿಕೆಯಂತಹ ಇತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಸಂಕ್ಷಿಪ್ತವಾಗಿ, ಕೋಡಿಂಗ್ ಪ್ರೋಗ್ರಾಮಿಂಗ್‌ನ ಒಂದು ಭಾಗವಾಗಿದೆ. ಕೋಡ್ ಅನ್ನು ನಿರ್ದಿಷ್ಟ ಭಾಷೆಯ ಅವಲಂಬಿತ ಸಿಂಟ್ಯಾಕ್ಸ್ ಬಳಸಿ ಬರೆಯಲಾಗುತ್ತದೆ. ಅದು ಕೆಲವು ನಿಯಮಗಳನ್ನು ಅನುಸರಿಸುತ್ತದೆ ಮತ್ತು ಇದನ್ನು ವಿಶಿಷ್ಟವಾಗಿ ಪ್ರತ್ಯೇಕ ಸಾಲುಗಳು ಅಥವಾ ಬ್ಲಾಕ್ಗಳಾಗಿ ಆಯೋಜಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಕೋಡಿಂಗ್ ಕಲಿಯಲು ಹಲವು ವೆಬ್‌ಸೈಟ್‌ಗಳಿವೆ. ಅವುಗಳಿಂದ ನೀವು ಕೋಡಿಂಗ್ ಕಲಿಯಬಹುದು. ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಅನ್ನು ಉಚಿತವಾಗಿ ಕಲಿಸುವ ಹಲವಾರು ವೆಬ್‌ಸೈಟ್‌ಗಳಿವೆ. ಇನ್ನೂ ಹಲವು ಫಿ (Paid web sites)ಕೊಟ್ಟು ಕಲಿಯುವ ವೆಬ್ಸೈಟ್ ಗಳಾಗಿವೆ.ಯೂಟ್ಯೂಬ್ ನಲ್ಲೂ ಅನೇಕ ಚಾನೆಲ್ ಗಳ ಮೂಲಕವೂ ನೀವು ಕಲಿಯಬಹುದು.
w3schools.com ಮತ್ತು tutorialspoint.com
ಕೋಡಿಂಗ್ ಕಲಿಯಲು ವೆಬ್‌ಸೈಟ್
freecodecamp.org
codewars.com
geeksofgeek.org
ಆಫ್‌ಲೈನ್ ಕೋಡಿಂಗ್ ಕಲಿಯುವುದು ಹೇಗೆ? (How to Lean Coding Offline)
ಆಫ್‌ಲೈನ್‌ನಲ್ಲಿ ಕೋಡಿಂಗ್ ಕಲಿಯಲು, ನೀವು ಪ್ರೋಗ್ರಾಮಿಂಗ್ ಕಲಿಸುವ ಕೋಚಿಂಗ್ ಕ್ಲಾಸ್‌ಗೆ ಹೋಗಬಹುದು ಮತ್ತು ಪ್ರೋಗ್ರಾಮಿಂಗ್ ಪುಸ್ತಕದಿಂದ ಕೋಡಿಂಗ್ ಕಲಿಯಬಹುದು.