Samsung Smartphones : ಸ್ಯಾಮ್‌ಸಂಗ್‌ ಗ್ಯಾಲಕ್ಸಿ 22 ಮತ್ತು 23 ಯ ಮಧ್ಯೆ ಯಾವುದು ಬೆಸ್ಟ್‌ ಫೋನ್‌ ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್‌ ಮಾಹಿತಿ

ಇದೀಗ ಸ್ಯಾಮ್​ಸಂಗ್ ಕಂಪನಿ ಹೊಸ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಲೇ ಇದೆ. ಜನಪ್ರಿಯ ಮೊಬೈಲ್​ ಕಂಪೆನಿಗಳಲ್ಲಿ ಒಂದಾದ ಸ್ಯಾಮ್​ಸಂಗ್ ತನ್ನ ಕಂಪೆನಿಯಿಂದ ಹಲವಾರು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​22 ಸ್ಮಾರ್ಟ್​​​ಫೋನ್​ ಅನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಸಂಚಲನ ಮೂಡಿಸಿತ್ತು. ಇದೇ ಸೀರಿಸ್​ನಿಂದ ಈ ಬಾರಿ ಮತ್ತೊಂದು ಹೊಸ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್ ಅನ್ನು ಬಿಡುಗಡೆ ಮಾಡಿದೆ.

ಸ್ಯಾಮ್​ಸಂಗ್ ತನ್ನ ಬ್ರಾಂಡ್​​ನ ಅಡಿಯಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಮತ್ತು ಗ್ಯಾಲಕ್ಸಿ 23 ಸ್ಮಾರ್ಟ್​​​ಫೋನ್​​ಗಳಲ್ಲಿ ಬೆಸ್ಟ್​ ಯಾವುದು ಎಂದು ಇಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಸ್ಮಾರ್ಟ್​​ಫೋನ್​:

  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನುಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ.
  • ಈ ಫೋನ್ ಆಕ್ಟಾ ಕೋರ್ 4nm ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, 8 ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ.
  • ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 12 ಓಎಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 3,700mAh ಬ್ಯಾಟರಿ ಬ್ಯಾಕಪ್ ಅನ್ನು ಪಡೆದಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್​ :

  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​​ಪ್ಲೇಯು 120Hz ರಿಫ್ರೆಶ್‌ ರೇಟ್‌ ಅನ್ನು ಪಡೆದಿದೆ. ಹಾಗೆಯೇ 240Hz ಗೇಮಿಂಗ್ ಟಚ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ.
  • ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​​​ಫೋನ್​ನ ಡಿಸ್​ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ವನ್ನು ಆ್ಯಡ್ ಮಾಡಲಾಗಿದೆ.
  • ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್‌ ಬೆಂಬಲ ಹೊಂದಿದೆ.
  • 8ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ.
  • ಈ ಸ್ಮಾರ್ಟ್​​​ಫೋನ್​ ಆಂಡ್ರಾಯ್ಡ್‌ 13 ಓಎಸ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 3,900mAh ಬ್ಯಾಟರಿ ಬ್ಯಾಕಪ್ ಅನ್ನು ಸಹ ಹೊಂದಿದೆ.

ಗ್ಯಾಲಕ್ಸಿ ಎಸ್​23 ಮತ್ತು ಗ್ಯಾಲಕ್ಸಿ ಎಸ್​22 ಸ್ಮಾರ್ಟ್​​ಫೋನ್​ನ ಪ್ರೊಸೆಸರ್ ಸಾಮರ್ಥ್ಯ:

  • ಪ್ರೊಸೆಸರ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನ್​ ಅಪ್‌ಗ್ರೇಡ್ ಪ್ರೊಸೆಸರ್​ ಅನ್ನು ಹೊಂದಿದೆ.
  • ಗ್ಯಾಲಕ್ಸಿ ಎಸ್​22 ಫೋನ್ Exynos 2200 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದರೆ, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್​ 2 ಪ್ರೊಸೆಸರ್ ಅನ್ನು ಹೊಂದಿದೆ.
  • ಇನ್ನು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಒದಗಿಸಲಾಗಿದೆ. ನೂತನ ಪ್ರೊಸೆಸರ್‌ ಹಿಂದಿನ ಪ್ರೊಸೆಸರ್‌ಗಿಂತ ಉತ್ತಮವಾಗಿದೆ.
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​​ ಸೀರಿಸ್​ನ ಫೋನ್‌ಗಳಲ್ಲಿ ಕ್ಯಾಮೆರಾ ಪ್ರಮುಖ ಫೀಚರ್ಸ್​ಗಳಲ್ಲಿ ಒಂದಾಗಿದೆ. ಆದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​​23 ಫೋನಿನಲ್ಲಿ, ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಹೆಚ್ಚಿನ ಕ್ಯಾಮೆರಾ ಸೆನ್ಸಾರ್ ಫೀಚರ್​ ಅನ್ನು ನೀಡಲಾಗಿಲ್ಲ.
  • ಸ್ಯಾಮ್​ಸಂಗ್ ಕಂಪೆನಿಯಿಂದ ಬಿಡುಗಡೆಯಾದ ಹೊಸ ಫೋನ್‌ ಸಹ ಹಿಂದಿನ ಫೋನ್‌ನಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್​ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾ 12 ಮೆಗಾ ಪಿಕ್ಸೆಲ್​ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಆದರೆ ಗ್ಯಾಲಕ್ಸಿ ಎಸ್​22 ಫೋನಿನಲ್ಲಿ ಸೆಲ್ಫಿ ಕ್ಯಾಮೆರಾವು 10 ಮೆಗಾ ಪಿಕ್ಸೆಲ್​ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ.
  • ಬ್ಯಾಟರಿ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನಿನಲ್ಲಿ ಬ್ಯಾಟರಿ ವಿಭಾಗದಲ್ಲಿ ಬದಲಾವಣೆಗಳನ್ನು ಮಾಡಿಲ್ಲ.
  • ಗ್ಯಾಲಕ್ಸಿ ಎಸ್​22 ಫೋನ್ 3,700mAh ಬ್ಯಾಟರಿ ಬ್ಯಾಕಪ್​ ಅನ್ನು ಒಳಗೊಂಡಿದ್ದು, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​23 ಫೋನ್ 3,900mAh ಬ್ಯಾಟರಿ ಬ್ಯಾಕಪ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ಹೊಸ ಸ್ಮಾರ್ಟ್​​ಫೋನ್​ನಲ್ಲಿ ಬ್ಯಾಟರಿ ಬ್ಯಾಕಪ್ ಅನ್ನು 200mAh ನಷ್ಟು ಹೆಚ್ಚಿಸಲಾಗಿದೆ.

ಸದ್ಯ ಈ ಮೇಲಿನ ಮಾಹಿತಿ ಆಧಾರದ ಮೇಲೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಮತ್ತು ಗ್ಯಾಲಕ್ಸಿ 23 ಸ್ಮಾರ್ಟ್​​​ಫೋನ್​​ಗಳಲ್ಲಿ ಬೆಸ್ಟ್​ ಯಾವುದು ಎಂದು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.