Home Breaking Entertainment News Kannada Kantara : ಕಾಂತಾರ 100 ದಿನದ ಸಂಭ್ರಮ | ಈಗ ನೀವು ನೋಡಿರೋದು ಕಾಂತಾರ -2...

Kantara : ಕಾಂತಾರ 100 ದಿನದ ಸಂಭ್ರಮ | ಈಗ ನೀವು ನೋಡಿರೋದು ಕಾಂತಾರ -2 | ಕಾಂತಾರ -1 ಇನ್ನು ಬರಬೇಕಷ್ಟೇ!!! ಏನಿದು ಸಸ್ಪೆನ್ಸ್, ಇಲ್ಲಿದೆ ವಿವರ!

Hindu neighbor gifts plot of land

Hindu neighbour gifts land to Muslim journalist

ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಇದೀಗ ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಇತ್ತೀಚೆಗಷ್ಟೇ ಶತಕದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾದಾಗಲೂ ದಾಖಲೆ ಸೃಷ್ಟಿಸಿದೆ.

ಸಿನಿಮಾ ಎಂಬುದು ಗೆಲುವು ಸೋಲಿನ ಜುಗಲ್ ಬಂಧಿ ಎಂದರೂ ತಪ್ಪಾಗಲಾರದು. ರಿಲೀಸ್ ಆದ ಎಲ್ಲ ಸಿನಿಮಾ ಕೂಡ ಯಶಸ್ಸು ಗಳಿಸುತ್ತದೆ ಎನ್ನಲಾಗದು. ಕೆಲವು ಪ್ರೇಕ್ಷಕರ ನಿರೀಕ್ಷೆಗೆ ತಲುಪದೇ ಫ್ಲಾಪ್ ಆದರೆ ಮತ್ತೆ ಕೆಲವು ನಿರೀಕ್ಷೆಯ ಎಲ್ಲೆಯನ್ನು ಮೀರಿದ ಗೆಲುವನ್ನು ಪಡೆಯುತ್ತದೆ. ಇದೀಗ ರಿಷಬ್ ಶೆಟ್ಟಿ ಮೋಡಿ ಮಾಡಿದ ಕಾಂತಾರ ವಿಶ್ವಾದ್ಯಂತ ಸಂಚಲನ ಮೂಡಿಸಿ 100 ದಿನ ಪೂರೈಸಿದ ಸಂಭ್ರಮವನ್ನೂ ಆಚರಿಸಿಕೊಂಡಿದೆ. ಈ ವೇಳೆ, ಡಿವೈನ್ ಸ್ಟಾರ್ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.

ಸದ್ಯ,  ಕಾಂತಾರ ಸಿನಿಮಾತಂಡ ಸಿನೆಮಾ ನೂರು ದಿನ ಯಶಸ್ವಿಯಾಗಿ ಓಡಿದ ಸಂಭ್ರಮವನ್ನು ಕಾರ್ಯಕ್ರಮ ಮಾಡಿ, ಸಿನಿಮಾದ ಯಶಸ್ಸಿಗೆ ಕಾರಣಿಕರ್ತರಾದ ಪ್ರೇಕ್ಷಕರಿಗೆ ಧನ್ಯವಾದವನ್ನು ಸಮರ್ಪಿಸಿದೆ. ರಿಷಬ್‌ ಶೆಟ್ಟಿ ಅವರ  ʼಕಾಂತಾರʼ ಸಿನಿಮಾದ 100 ದಿನ ಪೂರೈಸಿದ ಹಿನ್ನಲೆಯಲ್ಲಿ ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಭವನದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲಾಗಿತ್ತು. ಬಂಟರ ಭವನ ತುಳುನಾಡಿನ ಸಂಪ್ರದಾಯದಂತೆ ಅಲಂಕರಿಸಲಾಗಿತ್ತು. ಈ ಸಂಭ್ರಮದ ಕ್ಷಣಗಳಿಗೆ  ʼಕಾಂತಾರʼ ಸಿನೆಮಾದ ಚಿತ್ರತಂಡ ಸಾಥ್ ನೀಡಿ ಶುಭ ಕಾರ್ಯಕ್ಕೆ ಹೆಚ್ಚು ಮೆರುಗು ನೀಡಿತ್ತು. ಈ ವೇಳೆ.ಸಿನಿಮಾ ಭರ್ಜರಿ ಗೆಲುವಿಗೆ ಶ್ರಮಿಸಿದ  ಪ್ರತಿಯೊಬ್ಬ ಕಲಾವಿದ, ತಾಂತ್ರಿಕ ತಂಡದವರಿಗೆ ಚಿತ್ರ ತಂಡ ಸ್ಮರಣಿಕೆಯನ್ನು ನೀಡಿ ಗೌರವಿಸಿದೆ.

ಈ ಸಮಾರಂಭದ ವೇಳೆ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಯವರು ಕುಂದಾರಪುರದ ಕೆರಾಡಿ ಎಂಬ ಒಂದು ಸಣ್ಣ ಊರಿನಲ್ಲಿ ಚಿತ್ರೀಕರಣಗೊಂಡ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ಮುಖ್ಯ ಕಾರಣ ಹೊಂಬಾಳೆ ಫಿಲ್ಮ್ಸ್.‌ ಹೊಂಬಾಳೆ ಫಿಲ್ಮ್ಸ್‌ ನಿಂದಲೇ ಇವತ್ತು ʼಕಾಂತಾರʼ ಸಿನಿಮಾ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಈ ಸಿನಿಮಾಗಾಗಿ ಬಜೆಟ್‌ ಎನ್ನುವುದಕ್ಕಿಂತ ಹೆಚ್ಚಾಗಿ  ಕಂಟೆಂಟ್‌ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ನಮ್ಮ ಚಿತ್ರ  ತೋರಿಸಿಕೊಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕರು, ಕಲಾವಿದರು ಸೇರಿದಂತೆ ಅನೇಕ ಮಂದಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದ್ದರು.

ಇದರ ಜೊತೆಗೆ ಎಲ್ಲರೂ ಕಾಂತಾರ -2 ಸಿನಿಮಾ ಯಾವಾಗ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದು ಮುಂದಿನ ಸಿನಿಮಾವನ್ನು ಜನರು ಕಾತುರದಿಂದ ಎದುರು ನೋಡುತ್ತಿದ್ದಾರೆ.  ಈಗ ನೀವು ನೋಡಿರುವುದೇ ʼಕಾಂತಾರ-2”, ಮುಂದೆ ಬರುವುದು ಕಾಂತಾರ ಪಾರ್ಟ್‌ -1 ಎಂಬ ಸೀಕ್ರೆಟ್ ರಿವಿಲ್ ಮಾಡಿದ್ದಾರೆ. ಅತೀ ಶೀಘ್ರದಲ್ಲೆ ಸಿನೆಮಾದ ಕಾರ್ಯಗಳು ನಡೆಯಲಿೆರುವ ಕುರಿತು  ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ನೆಟ್‌ಫ್ಲಿಕ್ಸ್‌ ಅವರು ಇಂಗ್ಲೀಷ್ ನಲ್ಲಿ ಡಬ್‌ ಮಾಡಿ ರಿಲೀಸ್‌ ಮಾಡಲು ಅಣಿಯಾಗಿದ್ದು, ಒಂದು ವೇಳೆ ಇದು ಸಾಧ್ಯವಾದರೆ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಅದಂತೆ ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ರಿಷಬ್ ಶೆಟ್ರು ಮಾಹಿತಿ ನೀಡಿದ್ದಾರೆ.