ಎದೆಹಾಲು ಕುಡಿಯುತ್ತಲೇ ಪುಟ್ಟ ಕಂದ ತೀರಾ ಅಸ್ವಸ್ಥ : ಮಗು ಸಾವು!
ಮನೆಯಲ್ಲಿ ಪುಟ್ಟ ಮಗುವೊಂದಿದ್ದರೆ ಆ ಮನೆ ಮಂದಿಯ ಸುಖ ಸಂತೋಷಕ್ಕೆ ಪಾರವೇ ಇಲ್ಲ. ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ನಾನಾ ರೀತಿಯ ಕಾರಣಗಳು ಕೂಡ ಇವೆ. ಇದೀಗ, ಮಗುವೊಂದು ತಾಯಿಯ ಎದೆ ಹಾಲು ಕುಡಿಯುತ್ತಿರುವ ವೇಳೆ, ಉಸಿರುಗಟ್ಟಿದ ಘಟನೆ ವರದಿಯಾಗಿದೆ.
ಪುಟ್ಟ ಕಂದಮ್ಮವೊಂದು ತಾಯಿಯ ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಈ ದಾರುಣ ಘಟನೆ ಬದಿಯಡ್ಕದ ಉಕ್ಕಿನಡ್ಕದಲ್ಲಿ ನಡೆದಿದೆ ಎನ್ನಲಾಗಿದ್ದು , ಎದೆಹಾಲು ಕುಡಿಯುವಾಗ ಉಸಿರುಕಟ್ಟಿ 25 ದಿನದ ಪುಟ್ಟ ಕಂದಮ್ಮ ಬಾರದ ಲೋಕಕ್ಕೆ ಪಯಣ ಆರಂಭಿಸಿದ ಘಟನೆ ವರದಿಯಾಗಿದೆ.
ಉಕ್ಕಿನಡ್ಕದ ತಾಹಿರಾ ಮಗುವಿಗೆ ಹಾಲುಣಿಸುತ್ತಿದ್ದ ಸಂದರ್ಭ ಮಗು ಅಸ್ವಸ್ಥಗೊಂಡಿದ್ದು , ಕೂಡಲೇ ಪೋಷಕರಾದ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಯ 25 ದಿನದ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಕುರಿತಂತೆ ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಸದ್ಯ, ಉಕ್ಕಿನಡ್ಕದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.