Home Breaking Entertainment News Kannada ಅರೇ, ಅಭಿಮಾನಿ ಮಾತಿಗೆ ನಾಚಿ ನೀರಾಗಿಬಿಟ್ಳು ನ್ಯಾಷನಲ್‌ ಕ್ರಶ್‌ ! ಅಂತದ್ದೇನಂದ ಆ ಫ್ಯಾನ್‌ ಗೊತ್ತಾ...

ಅರೇ, ಅಭಿಮಾನಿ ಮಾತಿಗೆ ನಾಚಿ ನೀರಾಗಿಬಿಟ್ಳು ನ್ಯಾಷನಲ್‌ ಕ್ರಶ್‌ ! ಅಂತದ್ದೇನಂದ ಆ ಫ್ಯಾನ್‌ ಗೊತ್ತಾ ನಿಮಗೆ? ನಿಮಗೂ ನಾಚಿಗೆ ಆಗುವುದು ಖಂಡಿತ!

Hindu neighbor gifts plot of land

Hindu neighbour gifts land to Muslim journalist

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ ವಿಚಾರದಲ್ಲಿಯೂ ಟಾಪ್ ಲಿಸ್ಟ್ ನಲ್ಲಿದ್ದಾರೆ. ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲ ಭಾಷೆಯ ಸಿನಿಮಾ ರಂಗದಲ್ಲೂ ನಟಿಸುವ ಅವಕಾಶ ಲಭ್ಯವಾದರು ಕೂಡ ತೆಲುಗು ಚಿತ್ರರಂಗದಲ್ಲಿ ಸಿಕ್ಕಷ್ಟು ಯಶಸ್ಸು ಮತ್ತೆಲ್ಲೂ ಸಿಕ್ಕಿಲ್ಲ ಅನ್ನೋದಂತು ಸುಳ್ಳಲ್ಲ.. ಇದೀಗ ತಮ್ಮ ಅಭಿಮಾನಿಯೊಬ್ಬ ನಿಗೆ ಲವ್ ಪ್ರಪೋಸಲ್ ಬಗ್ಗೆ ಕ್ಲಾಸ್ ಕೊಟ್ಟಿದ್ದಾರೆ ಅನ್ನೋದು ಸದ್ಯದ ಹಾಟ್ ಟಾಪಿಕ್ ಆಗಿ ಟ್ರೆಂಡ್ ಆಗುತ್ತಿದೆ.

ಹೆಚ್ಚು ಸುದ್ದಿಯಾಗುತ್ತಿರುವ ನ್ಯಾಷನಲ್ ಕ್ರಷ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಟಿ ಮಾತ್ರವಲ್ಲ ತನ್ನ ಹಾಟ್ ಪಿಕ್ ಗಳ ಪಡ್ಡೆ ಹುಡುಗರ ಎದೆಬಡಿತದ ಲಯ ತಪ್ಪುವಂತೆ ಮಾಡೋದು ಕಾಮನ್. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವ್ರ ಜೊತೆಗೆ ನ್ಯೂ ಇಯರ್ ಪಾರ್ಟಿ ಮಾಡಿಕೊಂಡಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪ ಮೊದಲ ಭಾಗದಲ್ಲಿ ಶ್ರೀವಲ್ಲಿಯಾಗಿ ಎಲ್ಲರ ಮನ ಸೆಳೆದಿದ್ದ ಕಿರಿಕ್ ಬೆಡಗಿ ಈಗ ಪುಷ್ಪ 2 ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾದ ಮೂಲಕ ಬ್ಯುಸಿ ಆಗಿದ್ದಾರೆ.

ಇದೀಗ ನ್ಯಾಶನಲ್ ಕ್ರಷ್ ತಮ್ಮ ಅಭಿಮಾನಿಯೊಬ್ಬನಿಗೆ ಪ್ರೇಮ ನಿವೇದನೆ ಹೇಗೆ ಮಾಡಬೇಕು ಎಂದು ಸಲಹೆ ನೀಡಲು ಹೋಗಿ ತಾನೇ ಪೇಚಿಗೆ ಸಿಲುಕಿದ ಪ್ರಹಸನ ನಡೆದಿದೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಕಿರಿಕ್ ಬೆಡಗಿ ರಶ್ಮಿಕಾ ಅವರನ್ನು ಅಭಿಮಾನಿಯೊಬ್ಬ ಲವ್ ಪ್ರಪೋಸಲ್ ಮಾಡಲು ಸಲಹೆ ಕೇಳಿದ್ದಾನೆ ಎನ್ನಲಾಗಿದೆ. ಮೇಡಂ, ತೆಲುಗಿನಲ್ಲಿ ಪ್ರೇಮನಿವೇದನೆ ಮಾಡುವುದು ಅಥವಾ ಪ್ರೊಪೋಸ್ ಮಾಡುವುದು ಹೇಗೆ ?? ಎಂದು ಅಭಿಮಾನಿ ಕೇಳಿದ್ದು, ಇದಕ್ಕೆ ನಟಿ ರಶ್ಮಿಕಾ, ತೆಲುಗಿನಲ್ಲಿ ‘ಮೀರು ಚಾಲಾ ಮಂಚಿಗಾ ಕನಿಪಿಸ್ತುನ್ನಾವು’ (ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ) ಎಂದು ಹೇಳುವಂತೆ ಸಲಹೆ ನೀಡಿದ್ದಾರೆ.

ನ್ಯಾಷನಲ್ ಕ್ರಷ್ ತೆಲುಗಿನಲ್ಲಿ ಮೀರು ಚಾಲಾ ಮಂಚಿಗಾ ಕನಿಪಿಸ್ತುನ್ನಾವು ಎಂದು ಹೇಳಿದ ಕೂಡಲೆ, ಬುದ್ದಿವಂತ ಅಭಿಮಾನಿ ‘ಸೇಮ್ ಟು ಯು’ ಎಂದುಬಿಟ್ಟಿದ್ದಾನೆ. ಅಭಿಮಾನಿಯ ಈ ಚಾಲಾಕಿ ಉತ್ತರ ಕೇಳಿ ದಂಗಾದ ರಶ್ಮಿಕಾ, ಬಳಿಕ ನಾಚಿ ನೀರಾಗಿ ಬಿಟ್ಟಿದ್ದಾರೆ. ಅಭಿಮಾನಿಯ ಜಾಣ್ಮೆಗೆ ಮನಸೋತು ಹೂನಗೆ ಬೀರಿ ಅಲ್ಲಿಂದ ತೆರಳಿದ್ದಾರೆ. ಸದ್ಯ ಚಾಣಾಕ್ಷ ಅಭಿಮಾನಿ ತನ್ನ ನೆಚ್ಚಿನ ನಟಿಗೆ ಟಕ್ಕರ್ ನೀಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಸಂಚಲನ ಮೂಡಿಸಿದೆ.

ಎಲ್ಲೆಡೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರ ನಡುವೆ ಲವ್ ಕಹಾನಿ ನಡೆಯುತ್ತಿದೆ ಎಂಬ ಸುದ್ದಿ ವರ್ಷಗಳಿಂದಲೂ ಹರಿದಾಡುತ್ತಿದೆ. ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದರು ಕೂಡ ಜೊತೆಯಾಗಿ ಆಗಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಲೆ ಇರುತ್ತಾರೆ. ಯಾರೇನೇ ಅನ್ನಲಿ ನನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಪಾಲಿಸಿ ಅನುಸರಿಸಿಕೊಂಡು ಕಿರಿಕ್ ಬೆಡಗಿ ತಮ್ಮ ಸಿನಿ ಬದುಕಲ್ಲಿ ಸಾಲು ಸಾಲು ಸಿನಿಮಾಗಳ ಆಫರ್ ಹಿಡಿದು ಜನರನ್ನು ರಂಜಿಸಲು ರೆಡಿಯಾಗುತ್ತಿದ್ದಾರೆ.