Snake Video : ಹಾವೊಂದು ಲೋಟದಲ್ಲಿರುವ ನೀರನ್ನು ಕುಡಿಯುವ ವೀಡಿಯೋ ವೈರಲ್! ಅಬ್ಬಾ ಏನಿದು ವಿಚಿತ್ರ?
ಪ್ರಾಣಿಗಳಿಗೂ ಮನುಷ್ಯರಿಗೂ ಹೇಳತೀರದ ವ್ಯತ್ಯಾಸಗಳಿವೆ. ಇನ್ನು ಸರಿಸೃಪಗಳಿಗೂ ಮನುಷ್ಯರಿಗೂ ಯಾವುದೇ ಸಾಮ್ಯತೆ ಇಲ್ಲ ಯಾಕೆಂದರೆ ಹಾವು ಒಂದು ಉರಗ. ಸರಿಸೃಪ ಜಾತಿಗೆ ಸೇರಿದ ಪ್ರಾಣಿ. ಈ ಕಶೇರುಖ ಗುಂಪಿನ ಪ್ರಾಣಿಗೆ ಕಾಲುಗಳಿರುವುದಿಲ್ಲ ಹಾಗಾಗಿ ತೆವಳುತ್ತಾ ಚಲಿಸುತ್ತವೆ. ಇನ್ನು ಆಹಾರದ ವಿಷಯದಲ್ಲಿ ಸಹ ಹಾವುಗಳ ಜೀವನ ಪದ್ಧತಿ ಸ್ವಲ್ಪ ವಿಚಿತ್ರ ಅನ್ನೋದು ನಮಗೆ ಗೊತ್ತಿದೆ.
ಇನ್ನು ಹಾವುಗಳು ನೀರು ಕುಡಿಯುವುದು ಅತೀ ವಿರಳ. ಯಾಕೆಂದರೆ ಹಾವಿನ ತಲೆಯ ಕೆಳಭಾಗವು ನೀರನ್ನು ಸ್ಪರ್ಶಿಸುತ್ತಿದ್ದಂತೆ, ನೀರು ಚರ್ಮದ ಪದರಗಳ ಮೂಲಕ ಪ್ರವೇಶಿಸುತ್ತದೆ. ಕ್ಯಾಪಿಲ್ಲರಿಟಿಯಿಂದಾಗಿ ಹಾವುಗಳ ಆಹಾರ ನಾಳಕ್ಕೆ ನೀರು ಸೇರುತ್ತದೆ ಎಂದು ಅಧ್ಯಯನಗಳಲ್ಲಿ ತಿಳಿದುಬಂದಿದೆ.
ವಿಚಿತ್ರ ಎಂದರೆ ಇಲ್ಲೊಂದು ಹಾವು ಗ್ಲಾಸ್ ನಲ್ಲಿದ್ದ ನೀರನ್ನು ತನ್ನಷ್ಟಕ್ಕೆ ಗಟ ಗಟನೇ ಕುಡಿದು ಬಿಟ್ಟಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://www.instagram.com/reel/ChVbYRwPnkh/?utm_source=ig_web_button_share_sheet
ಈ ವಿಡಿಯೋದಲ್ಲಿ ಹಾವೊಂದು ಗ್ಲಾಸ್ ನಲ್ಲಿದ್ದ ನೀರನ್ನು ಕುಡಿದು ಖಾಲಿ ಮಾಡುತ್ತದೆ. ಹಾವು ಗ್ಲಾಸಿನಲ್ಲಿದ್ದ ನೀರಿಗೆ ತಲೆ ಹಾಕಿ ನೀರು ಕುಡಿಯುವುದನ್ನು ಕಾಣಬಹುದು. ಸದ್ಯ ಹಾವು ನೀರು ಕುಡಿಯುವ ಸಂದರ್ಭದಲ್ಲಿ ದವಡೆಗಳೂ ಸಹ ಚಲಿಸುವುದನ್ನು ನಾವು ನೋಡಬಹುದಾಗಿದೆ.
ಸದ್ಯ ಇದೊಂದು ಆಶ್ಚರ್ಯಕರ ಘಟನೆ ಆಗಿದ್ದು ವೀಕ್ಷಕರು ಕಣ್ಣು ಬಾಯಿ ಬಿಟ್ಟು ನೋಡುವಂತಾಗಿದೆ. ಜೊತೆಗೆ ಈ ವಿಡಿಯೋ ಗೆ ಹಲವಾರು ಕಾಮೆಂಟ್ ಗಳ ಸುರಿಮಳೆ ಆಗಿದೆ.