Home Interesting ನಿಮಗಿದು ಗೊತ್ತೇ? ವಿಶ್ವದಲ್ಲೇ ಅತಿ ದುಬಾರಿ ಕಾಫಿ ಪ್ರಾಣಿ ಮಲದಿಂದ ತಯಾರಿಸುವುದೆಂದು! ಹೆಚ್ಚಿನ ಮಾಹಿತಿ...

ನಿಮಗಿದು ಗೊತ್ತೇ? ವಿಶ್ವದಲ್ಲೇ ಅತಿ ದುಬಾರಿ ಕಾಫಿ ಪ್ರಾಣಿ ಮಲದಿಂದ ತಯಾರಿಸುವುದೆಂದು! ಹೆಚ್ಚಿನ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಕಬರ್ ಬಿಜ್ಜು ಎಂಬ ಪ್ರಾಣಿ ಪತ್ತೆಯಾಗಿದ್ದು, ಈ ವಿಚಿತ್ರ ಪ್ರಾಣಿಯನ್ನು ಕಂಡು ಜನರು ಹೌಹಾರಿದ್ದಾರೆ. ಕಾರಣ, ಈ ಪ್ರಾಣಿಯ ಮಲದಿಂದ ಕಾಫಿ ತಯಾರಿಸುತ್ತಾರಂತೆ. ಆ ಕಾಫಿ ವಿಶ್ವದ ಅತಿ ದುಬಾರಿಯದ್ದು ಎನ್ನಲಾಗಿದೆ.

ಸುತಾರ್ರಾ ಗ್ರಾಮದ ಮನೆಯೊಂದರ ಬಳಿ ಈ ಪ್ರಾಣಿ ಕಂಡುಬಂದಿದ್ದು, ಇದನ್ನು ರಕ್ಷಿಸಲು ಮನೆಗೆ ತಂಡವೊಂದು ಆಗಮಿಸಿದ್ದು, ಈ ಪ್ರಾಣಿಯನ್ನು ನೋಡಿದ ತಂಡದ ಸದಸ್ಯರು ಆಶ್ಚರ್ಯಚಕಿತರಾಗಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ನಂತರ ಇದನ್ನು ರಕ್ಷಿಸಿ ಅರಣ್ಯದಲ್ಲಿ ಬಿಡಲಾಯಿತು.

ಈ ಪ್ರಾಣಿ ಏಷ್ಯನ್ ಪಾಮ್ ಸಿವೆಟ್ ಆಗಿದ್ದು, ಇದನ್ನು ಕಬರ್ ಬಿಜ್ಜು ಎಂದೂ ಕರೆಯುತ್ತಾರೆ. ಕಬರ್ ಬಿಜ್ಜು ಸೇವಿಸಿದ ಮತ್ತು ಜೀರ್ಣವಾಗದ್ದನ್ನು ಹೊರಹಾಕಿದ ಕಾಫಿ ಬೀಜಗಳು ಪ್ರಪಂಚದ ಅತ್ಯಂತ ದುಬಾರಿ ಕಾಫಿಗಳ ಮೂಲವಾಗಿದೆ.

ಈ ಪ್ರಾಣಿಯ ಮಲದಿಂದ ಮಾಡಿರುವ ಕಾಫಿಯ ಒಂದು ಕಪ್ ಗೆ ಅಮೆರಿಕಾದಲ್ಲಿ ಸುಮಾರು 6000 ರೂಪಾಯಿ ಇದೆ. ಕಬರ್ ಬಿಜ್ಜು ಅಪರೂಪದ ಪ್ರಾಣಿಯಾಗಿದ್ದು, ನೋಡಲು ಬೆಕ್ಕಿನಂತೆ ಕಾಣುತ್ತದೆ. ಈ ಪ್ರಾಣಿಯ ಮಲದಿಂದ ಮಾಡಿದ ಕಾಫಿಯನ್ನು ಕಾಪಿ ಲುವಾಕ್ ಎಂದು ಕರೆಯಲಾಗುತ್ತದೆ.