FTII Job Notification 2023: ಭಾರತೀಯ ಚಲನಚಿತ್ರ, ದೂರದರ್ಶನ ಸಂಸ್ಥೆಯಲ್ಲಿ ಉದ್ಯೋಗವಕಾಶ ! ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ
FTII Recruitment 2023 : ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ), ಪುಣೆ, ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ. ಭಾರತೀಯ ಪ್ರಜೆಗಳಿಂದ ವಿವಿಧ ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳ ವಿವರಗಳನ್ನು ಕೆಳಗಿನಂತೆ ನೀಡಲಾಗಿದೆ. ಆಸಕ್ತರು ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-02-2023, 6 pm.
ಹುದ್ದೆಗಳ ವಿವರ
ಡೀನ್ (ಟೆಲಿವಿಜನ್) : 1
ಪ್ರಾಧ್ಯಾಪಕ, ಚಿತ್ರಕಥೆ ಬರವಣಿಗೆ: 1
ಪ್ರಾಧ್ಯಾಪಕ, ಎಡಿಟಿಂಗ್ : 1
ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ : 1
ಪ್ರಾಧ್ಯಾಪಕ, ಸಂಗೀತ: 1
ಪ್ರಾಧ್ಯಾಪಕ, ಸೌಂಡ್ ಇಂಜಿನಿಯರಿಂಗ್ : 1
ಸಹ ಪ್ರಾಧ್ಯಾಪಕ, ಚಿತ್ರ ನಿರ್ದೇಶನ : 2
ಸಹ ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ : 1
ಸಹ ಪ್ರಾಧ್ಯಾಪಕ, ಚಿತ್ರ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಇಟಿವಿ ಚಿತ್ರ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ (ರೆಕಾರ್ಡಿಂಗ್) : 1
ಸಹ ಪ್ರಾಧ್ಯಾಪಕ, ಇಟಿವಿ ನಿರ್ಮಾಣ : 1
ಸಹ ಪ್ರಾಧ್ಯಾಪಕ, ಟಿವಿ ಟೆಕ್ನಿಕಲ್ ಮ್ಯಾನೇಜ್ಮೆಂಟ್ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್) : 1
ಸಹ ಪ್ರಾಧ್ಯಾಪಕ, ಸಿನಿಮಾಟೋಗ್ರಾಫಿ: 2
ಸಹ ಪ್ರಾಧ್ಯಾಪಕ, ಎಡಿಟಿಂಗ್ : 1
ಸಹ ಪ್ರಾಧ್ಯಾಪಕ, ಸೌಂಡ್ ಇಂಜಿನಿಯರಿಂಗ್ : 1
ಸಹ ಪ್ರಾಧ್ಯಾಪಕ, ಟಿವಿ ಇಂಜಿನಿಯರಿಂಗ್ : 2
ಸಹ ಪ್ರಾಧ್ಯಾಪಕ, ಟಿವಿ ಟೆಕ್ನಿಕಲ್ ಆಪರೇಷನ್ಸ್ : 2
ಸಹ ಪ್ರಾಧ್ಯಾಪಕ, ಟಿವಿ ಪ್ರೊಡಕ್ಷನ್ : 2
ಮೆಂಟೆನನ್ಸ್ ಇಂಜಿನಿಯರ್ : 2
ವಿಜನ್ ಮಿಕ್ಸರ್ ಇಂಜಿನಿಯರ್ : 1
ಮುಖ್ಯ ಗ್ರಂಥಾಪಾಲಕ : 1
ಫಿಲ್ಮ್ ರಿಸರ್ಚ್ ಆಫೀಸರ್ (ಪಿಡಬ್ಲ್ಯೂಡಿ ಕೆಟಗರಿ-ಎ ಅಂದರೆ ಅಂಧತ್ವ ಮತ್ತು ಕಡಿಮೆ ದೃಷ್ಟಿಯವರಿಗಾಗಿ) : 1
ವೇತನ : ಡೀನ್ ಹಾಗೂ ಪ್ರಾಧ್ಯಾಪಕ ಹುದ್ದೆಗಳಿಗೆ ಲೆವೆಲ್-12 ವೇತನ, ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಲೆವೆಲ್ 11 ವೇತನ, ಇತರೆ ಹುದ್ದೆಗಳಿಗೆ ಲೆವೆಲ್ -10 ಸಂಬಳ ನೀಡಲಾಗುತ್ತದೆ.
ವಯೋಮಿತಿ: ಡೀನ್ ಹುದ್ದೆಗೆ ಗರಿಷ್ಠ 55 ವರ್ಷ, ಪ್ರಾಧ್ಯಾಪಕ ಹುದ್ದೆಗಳಿಗೆ 50 ವರ್ಷ, ಸಹ ಪ್ರಾಧ್ಯಾಪಕ ಹುದ್ದೆಗಳ ಪೈಕಿ ಕೆಲವು ಪದನಾಮ ಹುದ್ದೆಗೆ 45 ವರ್ಷ, ಇನ್ನೂ ಕೆಲವು ಹುದ್ದೆ ಹಾಗೂ ಇತರೆ ಹುದ್ದೆಗಳಿಗೆ 30 ರಿಂದ 40 ವರ್ಷ ಗರಿಷ್ಠ ವಯೋಮಿತಿ ನಿಗಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ