Home Entertainment ಮತ್ತೆ ಮೋಸ ಹೋದ ರಾಖಿ ಸಾವಂತ್ | ರಾಖಿಯಿಂದ ಫಾತಿಮಾವರೆಗೆ, ಆದಿಲ್ ಖಾನ್ ನಿಂದ ಬೆದರಿಕೆ-...

ಮತ್ತೆ ಮೋಸ ಹೋದ ರಾಖಿ ಸಾವಂತ್ | ರಾಖಿಯಿಂದ ಫಾತಿಮಾವರೆಗೆ, ಆದಿಲ್ ಖಾನ್ ನಿಂದ ಬೆದರಿಕೆ- ಗಳಗಳನೇ ಅತ್ತ ಡ್ರಾಮಕ್ವೀನ್

Hindu neighbor gifts plot of land

Hindu neighbour gifts land to Muslim journalist

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಮೀಡಿಯಾ ಮುಂದೆ ಬಂದಿದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತನ್ನು ಅವರು ಪಾಪರಾಜಿಗಳ ಮುಂದೆ ಅಳುತ್ತಾ ಹೇಳಿದ್ದಾರೆ.

ಆದಿಲ್ ಖಾನ್ ಮತ್ತು ರಾಖಿಸಾವಂತ್ ಮದುವೆ ವಿಷಯ ರಿವೀಲ್ ಆದದ್ದು ಕೂಡಾ ಬಹಳ ಆಶ್ಚರ್ಯಕರ ರೀತಿಯಲ್ಲಿ. ಮೈಸೂರಿನ ಆದಿಲ್ ಬಾಲಿವುಡ್ ಡ್ರಾಮ ಕ್ವೀನ್ ರಾಖಿ ಸಾವಂತ್ ಳನ್ನು ಎಂಟು ತಿಂಗಳ ಹಿಂದೆ ಮದುವೆಯಾಗಿದ್ದು, ನಂತರ ಅದನ್ನು ಈಗಲೇ ಹೇಳೋದು ಬೇಡ ಎಂದು ಹೇಳಿದ್ದನ್ನು ರಾಖಿ ಸಾಕ್ಷಿ ಸಹಿತ ತೋರಿಸಿದ್ದರು. ಮೊದ ಮೊದಲಿಗೆ ಒಪ್ಪದ ಆದಿಲ್ ನಂತರ ಈ ಮದುವೆಯನ್ನು ಒಪ್ಪಿಕೊಂಡ. ರಾಖಿ ಸಾವಂತ್ ಫಾತಿಮಾ ಆಗಿದ್ದಾಳೆ ಈಗ.

ಆದಿಲ್ ಗಾಗಿ ಏನೇ ಮಾಡಿದರೂ ಆದಿಲ್ ಮೋಸ ಮಾಡುತ್ತಾ ಇದ್ದಾನೆ. ನನ್ನ ಸಂಸಾರ ಅಪಾಯದಲ್ಲಿದೆ. ಅದನ್ನು ನಾನು ಉಳಿಸಿಕೊಳ್ಳಬೇಕು ಎಂದು ರಾಖಿ ಗಳಗಳನೇ ಅಳುತ್ತಾ ಹೇಳಿದ್ದಾರೆ.

ಮುಂಬೈನಲ್ಲಿ ರಾಖಿ ಸಾವಂತ್ ಅವರು ಜಿಮ್‌ನಿಂದ ಹೊರಬರುವಾಗ ಎಂದಿನಂತೆ ಪಾಪರಾಜಿಗಳು ಅವರ ಹಿಂದೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ರಾಖಿ ಸಾವಂತ್ ನನ್ನ ಗಂಡ ನನಗೆ ಮೋಸ ಮಾಡಿದ್ದಾನೆ. ಕುರಾನ್ ಮೇಲೆ ಕೈಯಿಟ್ಟು ಸುಳ್ಳು ಹೇಳಿದ್ದಾನೆ. ನಾನು ಆತ ಬದಲಾಗಲಿ ಎಂದು ತುಂಬಾ ಚಾನ್ಸ್ ಕೊಟ್ಟೆ. ನಾನು ಆತನ ಹೆಂಡತಿ. ನಾನು ಆತನ ಏಣಿ ಆಗಲಾರೆ. ಆತನ ಹೆಂಡತಿಯಾಗಿರಬೇಕೆನ್ನುವುದು ನನ್ನ ಆಸೆ ಎಂದು ಅಳುತ್ತಾ ಹೇಳಿದ್ದಾರೆ.

ನನ್ನನ್ನು ಬಳಸಿಕೊಂಡು ಬಾಲಿವುಡ್ ನಲ್ಲಿ ಹೆಸರು ಮಾಡಿಕೊಳ್ಳಲು ಬಂದ. ನನ್ನ ಹೆಸರು ಬಳಸಿ ಎಲ್ಲಾ ಮಾಡಿದ. ದಯವಿಟ್ಟು ನಾನು ನಿಮ್ಮ ಕಾಲಿಗೆ ಬೀಳುತ್ತೇನೆ. ಅವನ ಸಂದರ್ಶನ ಮಾಡಬೇಡಿ. ನನಗಾದ ನೋವು ಯಾರಿಗೂ ಆಗದಿರಲಿ ಎಂದು ಮಾಧ್ಯಮದ ಮುಂದೆ ರಾಖಿ ತನ್ನ ನೋವು ಹೇಳಿಕೊಂಡಿದ್ದಾರೆ.

ನನ್ನತ್ರ ಸಾಕ್ಷಿ ಇದೆ. ನಾನು ಕೋರ್ಟ್ ಗೆ ಹೋಗುತ್ತೇನೆ. ನನ್ನನ್ನು ಮದುವೆಯಾಗಿ ಬೇರೆ ಹುಡುಗಿಯರೊಂದಿಗೆ ಆದಿಲ್ ಶೋಕಿ ಮಾಡುತ್ತಿದ್ದಾನೆ. ನನಗೆ ಬೆದರಿಸುತ್ತಿದ್ದಾನೆ. ನಮ್ಮಲ್ಲಿ ಮೂರು ನಾಲ್ಕು ಮದುವೆ ಮಾಮೂಲಿ ಎಂದು ಆದಿಲ್ ಹೇಳಿದ್ದಾಗಿ ರಾಖಿ ಸಾವಂತ್ ಮಾಧ್ಯಮದ ಮುಂದೆ ಹೇಳಿದ್ದಾರೆ. ಈ ಹೇಳಿಕೆಯ ವೀಡಿಯೋ ವೈರಲ್ ಆಗಿದೆ.

ಮದುವೆ ವಿಷಯದಲ್ಲಿ ರಾಖಿ ಸಾವಂತ್ ಗೆ ಯಾವಾಗಲೂ ಮೋಸ ಆಗುತ್ತಿರುತ್ತಿದೆ ಎಂಬುದಕ್ಕೆ ಇದೊಂದು ಘಟನೆ ಮತ್ತೆ ಕಾರಣವಾಗಿದೆ.