ಕಾಂತಾರ ಸಿನಿಮಾ ನೋಡಿ ಚಳಿ ಜ್ವರ ಬಂತಂತೆ ರೀಲ್ಸ್ ಕ್ವೀನ್ ಗೆ !
ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾದಾಗಲೂ ದಾಖಲೆ ಬರೆದಿದೆ.ಕನ್ನಡದ ಹಿಟ್ ಸಿನಿಮಾದಲ್ಲಿ ಕಾಂತಾರ ತನ್ನ ಪಾರುಪತ್ಯ ಕಾಯ್ದುಕೊಂಡಿದ್ದು, ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್ ಶೆಟ್ಟಿ ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನಗೊಳಿಸುವಂತೆ ನಟಿಸಿದ್ದಾರೆ. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ. ಸದ್ಯ ಈ ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಏಷ್ಟೋ ಮಂದಿ ದೈವದ ಪ್ರತಿರೂಪ ಎಂಬಂತೆ ರಿಷಬ್ ಶೆಟ್ಟಿ ಅವರ ಕಾಲು ಹಿಡಿಯಲು ಕೂಡ ಮುಂದಾಗಿದ್ದು ಅದನ್ನು ಅಷ್ಟೆ ನಯವಾಗಿ ಶೆಟ್ರು ತಿರಸ್ಕರಿಸಿದ್ದು ಕೂಡ ಇದೆ. ಈ ನಡುವೆ ಸೋನು ಗೌಡ ಅವರು ಕಾಂತಾರ ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ಹೊರ ಬಿದ್ದ ಬಳಿಕ ಮನೆಯಿಂದ ಹೊರ ಹೋಗಲು ಮನಸ್ಸೇ ಇರಲಿಲ್ಲ ಅಷ್ಟೆ ಅಲ್ಲದೇ ತುಂಬಾ ಸುಸ್ತು ಹಾಗೂ ವಿಶ್ರಾಂತಿ ಬೇಕೆಂದು ಅನಿಸಿಬಿಟ್ಟಿತ್ತು. ಸ್ನೇಹಿತರೆಲ್ಲ ಸಿನಿಮಾ ನೋಡುವಂತೆ ಹೇಳುತ್ತಿದ್ದರು ಹೀಗಾಗಿ, ಅ ಕ್ಕನೊಂದಿಗೆ ಸೋನು ಗೌಡ ಕಾಂತಾರ ಸಿನಿಮಾ ನೋಡಲು ಹೋಗಿದ್ದರಂತೆ. ಸಿನಿಮಾದಲ್ಲಿ ಹೆಚ್ಚು ಮಂಗಳೂರಿನ ಭಾಷೆ ಹೆಚ್ಚು ಇದ್ದಿದ್ದರಿಂದ ಪ್ರಾರಂಭದಲ್ಲಿ ಏನು ಅರ್ಥವಾಗುತ್ತಿರಲಿಲ್ಲ ಆದರೂ ನೋಡುತ್ತಾ ಹೋದಂತೆ ಸಾಂಗ್ಸ್ ಕೇಳುತ್ತಾ ಕೂತಿದ್ದೆ. ಆದ್ರೆ ಚಿತ್ರದ ಕೊನೆಯ 20 ನಿಮಿಷ ಇದ್ಯಲ್ಲಾ ಗುರು.. ವೋ…..ಅದನ್ನು ವರ್ಣಿಸಲು ಅಸಾಧ್ಯ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸೋನು ಗೌಡ ಹೇಳಿಕೊಂಡಿದ್ದು , ಅಷ್ಟೆ ಅಲ್ಲದೇ, ಸಿನಿಮಾ ನೋಡಿ ಬಂದು ಚಳಿ ಜ್ವರ ಕೂಡ ಬಂದಿದ್ದಂತೆ. ಸ್ವಲ್ಪ ಆರೋಗ್ಯ ಕೂಡ ಕೆಟ್ಟ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದು, ಎರಡು ವಾರ ಆಸ್ಪತ್ರೆಗೆ ದಾಖಲಾಗಿದ್ರಂತೆ ಸೋನು ಗೌಡ. ಬೆಂಗಳೂರಿನಲ್ಲಿ ಒಂದು ವಾರ ಅದೇ ರೇತಿ ಮಂಡ್ಯದಲ್ಲಿ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ರು ಅಂತ ಸೋನು ಅವರೇ ಹೇಳಿಕೊಂಡಿದ್ದಾರೆ.
ಈ ಬಳಿಕ ಓಟಿಟಿಯಲ್ಲಿ ಕಾಂತಾರಾ ಸಿನಿಮಾ ರಿಲೀಸ್ ಮಾಡಿದ ಸಂದರ್ಭ ಅಕ್ಕ ತನ್ನನ್ನು ರೇಗಿಸುತ್ತಿದ್ದಳು. ಮತ್ತೊಮ್ಮೆ ಓಟಿಟಿಯಲ್ಲಿ ಸಿನಿಮಾ ನೋಡುವಾಗ ಚಳಿ ಜ್ವರ ಬರಲಿಕ್ಕೂ ಸಾಕು ಎಂದು ಕಾಂತಾರ ಸಿನಿಮಾದ ಬಗ್ಗೆ ತಮ್ಮ ಅನುಭವವನ್ನು ಸೋನು ಗೌಡ ಹಂಚಿಕೊಂಡಿದ್ದಾರೆ. ಚಿತ್ರದ ಕೊನೆ 20 ನಿಮಿಷ ನೋಡಿ , ಈ ರೀತಿ ಸಿನಿಮಾಗಳನ್ನು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಕಾಡಿತ್ತು. ಕೆಲವೊಂದು ಸಿನಿಮಾಗಳಲ್ಲಿ ತುಂಬಾ ಗ್ರಾಫಿಕ್ಸ್ ಮಾಡಲಾಗುತ್ತದೆ. ಆದರೆ ಕಾಂತಾರ ತುಂಬಾ ಸಿಂಪಲ್ ಮತ್ತು ಕ್ರಿಯೇಟಿವ್ ಆಗಿ ಮಾಡಿದ್ದು , ಈ ರೀತಿಯ ಸಿನಿಮಾಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹೆಚ್ಚಿನ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿಕೊಂಡಿರುವ ಸೋನು ಗೌಡ. ಇವುಗಳ ಜೊತೆಗೆ ನಾವು ಕೂಡ ಒಂದು ಹೆಜ್ಜೆ ಇಡುತ್ತಿದ್ದೇವೆ ಎಂದು ಆಲೋಚನೆ ಮಾಡಿದಾಗಲೇ ಹೆಚ್ಚು ಆನಂದವಾಗುತ್ತೆ ಎಂದು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.