Home latest Heavy Rain : ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ !

Heavy Rain : ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ !

Hindu neighbor gifts plot of land

Hindu neighbour gifts land to Muslim journalist

ಚುಮು ಚುಮು ಚಳಿಯ ನಡುವೆಯೂ ಹೆಚ್ಚಿನ ಕಡೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ರಾಜ್ಯದ ಹಲವೆಡೆ ವರುಣನ ಆರ್ಭಟದ ಭೀತಿ ಮುಂದುವರೆದಿದ್ದು ತಮಿಳುನಾಡಿನ ಕೆಲ ಪ್ರದೇಶದಲ್ಲಿ ಎಡೆಬಿಡದೆ ನಿರಂತವಾಗಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದೇಶದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು, ಶೀತಅಲೆಯ ನಡುವೆ ಮಳೆಯ ಆರ್ಭಟ ಜೋರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಸನ್ನಿಹಿತವಾಗುವ ಸಮಯವಾದರೂ ಕೂಡ ಕೆಲವೆಡೆ ವರುಣನ ಅಬ್ಬರ ಜೋರಾಗಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತಮಿಳುನಾಡಿನ ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ವಾಯುವ್ಯ ಭಾರತದಲ್ಲಿ ಫೆಬ್ರವರಿಯಲ್ಲಿ ಮಳೆ ಹೆಚ್ಚಾಗಿ ಕಂಡುಬರುತ್ತದೆ. 1971-2020 ರ ವರದಿಗಳ ಆಧಾರದ ಮೇಲೆ ಫೆಬ್ರವರಿಯಲ್ಲಿ ವಾಯುವ್ಯ ಭಾರತದಲ್ಲಿ ದೀರ್ಘಾವಧಿಯ ಮಳೆ ಸರಾಸರಿ 65.0 ಮಿ.ಮೀ ದಾಖಲಾಗಿರುವುದರಿಂದ ಕೋಲ್ಡ್ ವೇವ್ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಹಾನಿರ್ದೇಶಕ ಎಂ ಮೊಹಾಪಾತ್ರ ತಿಳಿಸಿದ್ದಾರೆ ಎನ್ನಲಾಗಿದೆ.

ಜನವರಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದ್ದು, ಇನ್ನೂ ಜನವರಿಯಲ್ಲಿ ಪಶ್ಚಿಮ ಕರಾವಳಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದು IMD ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಈಶಾನ್ಯ ಮತ್ತು ಪಕ್ಕದ ಪೂರ್ವ ಭಾರತವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಕಡಿಮೆ ತಾಪಮಾನ ವರದಿಯಾಗಿದೆ. ವಾಯುವ್ಯ ಭಾರತದಲ್ಲಿ ಶೀತ ಅಲೆ ಕಡಿಮೆಯಾಗುವ ಸಾಧ್ಯತೆ ಇದ್ದು ಫೆಬ್ರವರಿಯಲ್ಲಿ ಸಾಮಾನ್ಯ ಮಳೆ ವೀಕ್ಷಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ, ಪೂರ್ವ-ಮಧ್ಯ ಭಾರತ ಮತ್ತು ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಿದೆ. ಈಶಾನ್ಯ ಮತ್ತು ಪಕ್ಕದ ಪೂರ್ವ ಭಾರತ, ಪಶ್ಚಿಮ ಕರಾವಳಿಯ ಉತ್ತರ ಭಾಗಗಳು ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನ ಕಡಿಮೆಯಿರುತ್ತದೆ.

ಗಾಳಿಯಿಂದ ಮೋಡಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸುವ ಹಿನ್ನೆಲೆ ಗಾಳಿಯ ವೇಗ ಹೆಚ್ಚಾದಂತೆ ಶೀತ ಅಲೆಗಳು ಗಾಳಿಯಲ್ಲಿ ಚದುರಿಹೋಗುವುದಲ್ಲದೆ ಮಳೆ ತರಿಸುವ ಮೋಡಗಳು ಶಾಖದ ಅಲೆಗಳು ಸೃಷ್ಟಿಯಾಗಲು ಕಾರಣವಾಗುತ್ತದೆ. ಈ ಕಾರಣದಿಂದ ಮಳೆಗೂ ಮುನ್ನ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುತ್ತದೆ. IMD ದತ್ತಾಂಶದ ಅನುಸಾರ, ನಗರದಲ್ಲಿ ಜನವರಿ 5 ರಿಂದ 9 ರವರೆಗೆ ಮತ್ತು ಜನವರಿ 16 ರಿಂದ 18 ರವರೆಗೆ ಎರಡು ತೀವ್ರವಾದ ಶೀತಲ ಅಲೆಗಳು ದಾಖಲಾಗಿವೆ. ದೆಹಲಿಯು ಜನವರಿಯಲ್ಲಿ 50 ಗಂಟೆಗಳ ದಟ್ಟವಾದ ಮಂಜಿನಿಂದ ಕೂಡಿದೆ. ಪೆಬ್ರವರಿಯಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಪೂರ್ವ-ಮಧ್ಯ ಭಾರತ, ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಸಾಧ್ಯತೆಯಿದೆ ಎಂದು ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.