ಸಿದ್ದರಾಮಯ್ಯನವರ ಕಾರಿನ ಮೇಲೆ ನಾಲ್ಕು ಮೊಟ್ಟೆ ಎಸೆದ ಪ್ರಕರಣ, ಗಡೀಪಾರು ಭೀತಿಯಲ್ಲಿ ಈ ಇಬ್ಬರು !

ಸಿದ್ದರಾಮಯ್ಯನವರಿಗೆ ಮಡಿಕೇರಿಗೆ ಬಂದಾಗ ಮೊಟ್ಟೆ ಎಸದ ಆರೋಪಿಗಳಿಗೆ ಗಡಿ ಪಾರು ಶಿಕ್ಷೆಯ ಆತಂಕ ಕಾದಿದೆ.
ಮಡಿಕೇರಿ ನಗರಸಭೆ ಸದಸ್ಯ ಕವನ್ ಕಾವೇರಪ್ಪ ಮತ್ತು ಹಿಂದೂ ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಈ ಇಬ್ಬರಿಗೆ ಗಡಿಪಾರು ಭೀತಿ ಎದುರಾಗಿದೆ.

ಕಳೆದ ವರ್ಷಅಕ್ಟೋಬರ್ ತಿಂಗಳಲ್ಲಿ ಮಳೆ ಹಾನಿ ಸಂಬಂಧ  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಈ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮತ್ತು ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿತ್ತು. ಅವತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಸಂಘರ್ಷ ನಡೆದುಹೋಗಿತ್ತು. ತದನಂತರ ಪ್ರಕರಣ ಕೋರ್ಟು ಮೆಟ್ಟಲೇರಿತ್ತು.ಈ ಪ್ರಕರಣದಲ್ಲಿ ಮಡಿಕೇರಿ ನಗರ ಸಭೆ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪನನ್ನು A1 ಆರೋಪಿ ಏನು ಗುರುತು ಮಾಡಿದ್ದರೆ, ಹಿಂದೂ ಯುವವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಕೂಡ ಆರೋಪಿ ಆಗಿದ್ದರು. ಆದರೆ ಆ ಪ್ರಕರಣ ಇತ್ತೀಚೆಗೆ ಖುಲಾಸೆಗೊಂಡಿತ್ತು.

ಈಗ ನಿಮ್ಮಿಬ್ಬರನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಕೊಡಗು ಎಸಿ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ನೊಟೀಸ್ ಪಡೆದಿರುವ ಇಬ್ಬರು ಫೆ.2 ರಂದು ಕೊಡಗು ಎಸಿ ಕೋರ್ಟಿಗೆ ಹಾಜರಾಗಬೇಕಾಗಿದೆ.

ಕೇಸು ಖುಲಾಸೆ ಆಗಿದ್ದರೂ ನೋಟಿಸ್ ಜಾರಿ.ಮಾಡಿದ ಕುರಿತು ಆಕ್ರೋಶ ಹೊರಹಾಕಿದ್ದಾರೆ ಆಪಾದಿತರು. ನನ್ನ ಮೇಲೆ ಇದ್ದ ಪ್ರಕರಣ ಖುಲಾಸೆ ಆಗಿದೆ. ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿದೆ ಎಂದು ಯಾರೋ ದೂರು ಕೊಟ್ಟ ಕೂಡಲೇ ಅದರ ಆಧಾರದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸಿ ಈಗ ಜಿಲ್ಲಾಡಳಿತ ಗಡಿಪಾರಿಗೆ ಮುಂದಾಗುತ್ತಿದೆ. ಈ ಕ್ರಮಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಇದಕ್ಕೆ ಸರಿಯಾದ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಕವನ್ ಕಾವೇರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ, ಈಗ ಗಡಿಪಾರಿಗೆ ಇಬ್ಬರ ಹೆಸರನ್ನು ಪೊಲೀಸ್ ಇಲಾಖೆ ಸೂಚಿಸಿದ್ದು ಪ್ರಕರನ ರಾಜಕೀಯ ಸ್ವರೂಪ ಪಡೆದುಕೊಳ್ಳಲು ಆರಂಭಿಸಿದೆ. ಈಗ ಎಸಿ ಕೋರ್ಟ್ ಅಂಗಳದಲ್ಲಿ ಪ್ರಕರಣ ಇದ್ದು ಇವತ್ತು ವಿಚಾರಣೆ ಬಳಿಕ ಎಸಿ ಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ನಿರೀಕ್ಷೆಗೆ ಕಾರಣ ಆಗಿದೆ.

Leave A Reply

Your email address will not be published.