Home Breaking Entertainment News Kannada ದೀಪಿಕಾ ದಾಸ್‌ – ಶೈನ್‌ ಶೆಟ್ಟಿ ಫೋಟೋ ಮತ್ತೆ ವೈರಲ್‌ | ಮದುವೆ ಸುದ್ದಿ ನಿಜಾನಾ...

ದೀಪಿಕಾ ದಾಸ್‌ – ಶೈನ್‌ ಶೆಟ್ಟಿ ಫೋಟೋ ಮತ್ತೆ ವೈರಲ್‌ | ಮದುವೆ ಸುದ್ದಿ ನಿಜಾನಾ ?

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿಯ ಬಗ್ಗೆ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇವರಿಬ್ಬರೂ ಮದುವೆ ಆಗಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಸದ್ಯ ಇವರಿಬ್ಬರ ಫೋಟೋ ವೈರಲ್ ಆಗಿದ್ದು, ಇವರಿಬ್ಬರು ಮದುವೆ ಆಗುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಬಿಗ್​ಬಾಸ್​ ಸೀಸನ್​ 7ರಲ್ಲಿ ಸಖತ್ ಫೇಮಸ್ ಆದ ಜೋಡಿಗಳು ಅಂದ್ರೆ ಅದು ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಜೋಡಿ. ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಹಾಗೇ ಹೇಳುತ್ತಿದ್ದರು ಕೂಡ. ಇನ್ನು ಈ ಜೋಡಿಗೆ ಅಂದು ಮತ್ತು ಇಂದು ಕೂಡ ದೊಡ್ಡ ಅಭಿಮಾನಿಗಳಗವೇ ಇದೇ. ಫಾನ್ಸ್ ಗಳೆಲ್ಲರೂ ಇವರಿಬ್ಬರು ಮದುವೆ ಆಗಲಿ ಎಂದು ಬಯಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಸಿನಿಮಾ ಸೇರಿದಂತೆ ಹಲವು ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಹಾಗೂ ದೀಪಿಕಾ ದಾಸ್ ಕನ್ನಡ ಬಿಗ್​ ಬಾಸ್ ಸೀಸನ್ 9ರಲ್ಲಿ ಮತ್ತೆ ಸ್ಪರ್ಧಿಸಿ, ವೀಕ್ಷಕರಿಗೆ ಉತ್ತಮ ಮನರಂಜನೆ ನೀಡಿ ಫೈನಲ್​ಗೆ ತಲುಪಿದ್ದರು. ಆದರೆ ವಿನ್ನರ್ ಪಟ್ಟಕ್ಕೆ ಏರಲು ಸಾಧ್ಯವಾಗಲಿಲ್ಲ. ಆದರೆ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮದುವೆಯ ಬಗ್ಗೆ ಮಾತನಾಡಿದ್ದರು. ಇದಂತು ಅಭಿಮಾನಿಗಳಿಗೆ ಇನ್ನಷ್ಟು ಪುಷ್ಟಿ ನೀಡಿದ್ದು, ಸದ್ಯ ಇವರಿಬ್ಬರ ಮದುವೆ ವಿಚಾರ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಶೆಟ್ರು ಮಾತ್ರ ಯಾವುದಕ್ಕೂ ಉತ್ತರ ನೀಡದೆ ಸುಮ್ಮನೆ ಇದ್ದಾರೆ.

ಮದುವೆ ಬಗ್ಗೆ ದೀಪಿಕಾ ದಾಸ್ ಏನ್ ಹೇಳಿದ್ರು ಅಂದ್ರೆ, ಮದುವೆಯಾಗಲು ಇನ್ನೂ ನಾಲ್ಕು ವರ್ಷ ಬೇಕು. ಇಷ್ಟವಾಗುವಂತಹ ಹುಡುಗ ಸಿಗಬೇಕು. ಅಲ್ಲದೆ, ಆತನಲ್ಲಿರಬೇಕಾದ ಕ್ವಾಲಿಟಿ ಕೂಡ ಹೇಳಿದ್ದಾರೆ. ಏನು ಗೊತ್ತಾ? ಆ ಹುಡುಗ ಸುಳ್ಳು ಹೇಳಬಾರದು. ಒಳ್ಳೆ ಮನಸ್ಸಿನ ಹುಡುಗ ಆಗಿರಬೇಕು ಎಂದಿದ್ದರು. ಇದಿಷ್ಟೇ ಅಲ್ಲದೆ, ತನಗೆ ಟ್ರಾವೆಲ್ ಮಾಡೋದು ಇಷ್ಟ ಹಾಗಾಗಿ ಆತನಿಗೂ ಟ್ರಿಪ್ ಹೋಗುವ ಮನಸಿರಬೇಕು. ಯಾವಾಗಲೂ ನನ್ನ ಜೊತೆ ಟ್ರಿಪ್ ಮಾಡಲು ಸಿದ್ಧರಿರಬೇಕು ಎಂದಿದ್ದಾರೆ. ಅದಕ್ಕೂ ನಾಜೂಕಾಗಿ ಕಾಲೆಳೆದ ನೆಟ್ಟಿಗರು ಒಟ್ನಲ್ಲಿ ‘ಮದುವೆಯಾದ ನಂತರ ಶೈನ್ ಶೆಟ್ಟಿ ನಮ್ಮ ಕೈಗೆ ಸಿಗಲ್ಲ’ ಅಂದಿದ್ದಾರೆ. ಸದ್ಯ ಅಭಿಮಾನಿಗಳು ದೀಪಿಕಾ ದಾಸ್ ಈ ವರ್ಷವೇ ಮದುವೆ ಆಗಲಿದ್ದಾರೆ ಎಂದು ಭಾರೀ ಉತ್ಸಾಹದಲ್ಲಿದ್ದಾರೆ.

ಮದುವೆ ಆಗುತ್ತಾರೆ ಅನ್ನೋ ಸುದ್ದಿಗೆ ಸರಿಯಾಗಿ ಈ ಜೋಡಿ ಇದೀಗ ಜೊತೆಯಾಗಿ ಫೋಟೋ ಹಂಚಿಕೊಂಡಿದ್ದು, ಇದು ಮದುವೆಯಾಗುವ ಸೂಚನೆ ಎಂದು ನೆಟ್ಟಿಗರು ಕಾಮೆಂಟ್ ನ ಮಳೆ ಸುರಿಸುತ್ತಿದ್ದಾರೆ. ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೈನ್ ಶೆಟ್ಟಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ವೀಕ್ಷಿಸಿದ ಅಭಿಮಾನಿಗಳು ಭರ್ಜರಿ ಕಾಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗಿ ಎಂದು ಆಶಿಸುತ್ತಿದ್ದಾರೆ.

https://www.instagram.com/p/CoEe_DsBApC/?igshid=Yzg5MTU1MDY=