ಆರ್ಡರ್ ಮಾಡಿದ್ದು ಜ್ಯೂಸ್, ಸಪ್ಲೈಯರ್ ತಂದಿದ್ದು ಡಿಟರ್ಜೆಂಟ್ ಲಿಕ್ವಿಡ್ ! ಇದನ್ನು ಕುಡಿದವರಿಗೆ ನಂತರ ಆದದ್ದೇನು?
ಈಗಂತೂ ಬೇಸಿಗೆ ಕಾಲ ಹೊರಗಡೆ ಹೋದಾಗ ಹೋಟೆಲ್ ನಲ್ಲಿ ಒಂದು ಜ್ಯೂಸ್ ಕುಡಿದಾಗ ನಿರಾಳ ಅನಿಸುತ್ತೆ. ಜ್ಯೂಸ್ ಅಂದರೆ ಎಲ್ಲರಿಗೂ ಇಷ್ಟವೇ ತಾನೇ. ಬಾಯಾರಿದ ಸಮಯದಲ್ಲಿ ಯಾವ ಜ್ಯೂಸ್ ಕೊಟ್ಟರು ಒಂದು ಕ್ಷಣ ಸುಮ್ಮನೆ ಕುಡಿದು ಬಿಡೋಣ ಅನಿಸುತ್ತೆ ಅಲ್ವಾ. ಹೌದು
ಹೊಟೇಲ್‌ಗಳಲ್ಲಿ ನಿರ್ಧಿಷ್ಟ ಆಹಾರವನ್ನು ಆರ್ಡರ್ ಮಾಡಿದಾಗ ತಪ್ಪಿ ಇನ್ಯಾವುದೋ ಫುಡ್ ತಂದು ಕೊಡುವುದು ಸಹಜ ಆದ್ರೆ ಚೀನಾದ ರೆಸ್ಟೋರೆಂಟ್‌ವೊಂದು ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್ ಸರ್ವ್ ಮಾಡಿದೆ.
ಹೌದು ಚೀನಾದ ರೆಸ್ಟೋರೆಂಟ್‌ವೊಂದು ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್ ನೀಡಿ ಎಡವಟ್ಟು ಮಾಡಿಕೊಂಡಿದೆ. ಘಟನೆಯಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದಾರೆ. ಏಳು ಮಂದಿ ಸಹ ಸರ್ವರ್ ಕೊಟ್ಟ ಜ್ಯೂಸ್ ಕುಡಿದಿದ್ದಾರೆ. ನಂತರ ಹೊಟ್ಟೆ ತಳಮಳಗೊಂಡಾಗ ಎಲ್ಲರೂ ಅಸ್ವಸ್ಥರಾದರು.
ಈ ಘಟನೆಯು ಜನವರಿ 16ರಂದು ಝೆಜಿಯಾಂಗ್ನಲ್ಲಿ ನಡೆದಿದೆ. ಸಿಸ್ಟರ್ ವುಕಾಂಗ್ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚೀನಾದ ಝೆಜಿಯಾಂಗ್ ಪ್ರಾಂತ್ಯದ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ವೈಟರ್ ಜ್ಯೂಸ್ ಎಂದು ಹೇಳಿ ಲಿಕ್ವೀಡ್ ಪಾನೀಯವನ್ನು ತಂದಿಟ್ಟಿದ್ದಾನೆ. ಎಲ್ಲರೂ ಇದನ್ನೇ ಸೇವಿಸಿದ್ದು ಆರೋಗ್ಯ ಹದಗೆಟ್ಟಿದೆ. ಬಳಿಕ ಪರಿಶೀಲನೆ ನಡೆಸಿದಾಗ ಅದು ಜ್ಯೂಸ್ ಬದಲಿಗೆ ಡಿಟರ್ಜೆಂಟ್ ನೀರಾಗಿತ್ತು ಎಂದು ತಿಳಿದುಬಂದಿದೆ.
ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು ನಂತರ ವಾಂತಿ ಮೂಲಕ ಸೇವಿಸಿದ ಜ್ಯೂಸ್ ಹೊರತೆಗೆಯಲಾಯಿತು. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಕ್ಸುಕುನ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಹಕರು ರೆಸ್ಟೋರೆಂಟ್‌ನಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ.
ಸದ್ಯ ಹೋಟೆಲ್ ಮಾಲಿಕ ತಪ್ಪನ್ನು ಒಪ್ಪಿಕೊಂಡಿದ್ದು ಇನ್ನು ಮುಂದೆ ಇಂತಹ ತಪ್ಪು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದು ಅಲ್ಲದೆ ಗ್ರಾಹಕರಿಗೆ ಪರಿಹಾರ ನೀಡುವುದಾಗಿ ಒಪ್ಪಿಗೆ ನೀಡಿದ್ದಾರೆ.