

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ 8ನೇ ವೇತನ ಆಯೋಗ ಘೋಷಿಸುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನ ಫೆಬ್ರವರಿ 1 ಅಂದ್ರೆ ನಾಳೆಯಿಂದ ಆರಂಭವಾಗಲಿದ್ದು, ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ, ನೌಕರರಿಗೆ ಖುಷಿ ನೀಡುವ ಸುದ್ಧಿಯಾದ 8 ನೇ ವೇತನ ಆಯೋಗವನ್ನು ಘೋಷಿಸುತ್ತದೆ ಎಂದು ಹೇಳಲಾಗುತ್ತಿದೆ. 2023-24ರ ಯೂನಿಯನ್ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಿದರೆ, ಇದರಿಂದ ಕೇಂದ್ರ ನೌಕರರ ವೇತನದಲ್ಲಿ ಗಣನೀಯ ಹೆಚ್ಚಳವಾಗುತ್ತದೆ.
ಸದ್ಯ 7ನೇ ವೇತನ ಆಯೋಗದ ಸುಧಾರಣೆಗಳನ್ನು ಬದಲಾಯಿಸಲು, ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಹೊಸ 8 ನೇ ವೇತನ ಆಯೋಗದೊಂದಿಗೆ ಬದಲಾವಣೆ ಮಾಡಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಇನ್ನು, 8ನೇ ವೇತನ ಆಯೋಗ ಘೋಷಣೆ ಆದ್ರೆ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ, ವೇತನ ಶ್ರೇಣಿ ಮತ್ತು ಭತ್ಯೆಯಲ್ಲಿ ಗಣನೀಯ ಹೆಚ್ಚಳವಾಗಬಹುದು. ಹಾಗೇ ಮುಂದಿನ ದಿನಗಳಲ್ಲಿ ಉದ್ಯೋಗಿಗಳು ಹೆಚ್ಚಿದ ಫಿಟ್‌ಮೆಂಟ್ ಫ್ಯಾಕ್ಟರ್ ಬೂಸ್ಟ್ ಅನ್ನು ಪಡೆಯುವ ಸಾಧ್ಯತೆಯೂ ಇದೆ.
5, 6 ಮತ್ತು 7ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವೇತನ ಆಯೋಗಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಹಾಗಾಗಿ ಈ ಮಧ್ಯೆ 8 ನೇ ವೇತನ ಆಯೋಗದ ಘೋಷಣೆ ಆಗುತ್ತದೆಯೇ? ಅಥವಾ ಇಲ್ಲವೇ? ಎನ್ನುವುದರ ಬಗ್ಗೆ ಸ್ಪಷ್ಟವಾದ ಘೋಷಣೆಯಾಗಿಲ್ಲ. ಸರ್ಕಾರಿ ನೌಕರರು ಇದರ ನಿರೀಕ್ಷೆಯಲ್ಲಿದ್ದು, ಬಜೆಟ್ ದಿನದವರೆಗೂ, ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವವರೆಗೂ ಕಾಯಬೇಕಿದೆ.













