Buble tea: ಗೂಗಲ್ ಡೂಡಲ್ ನಲ್ಲಿ ಮಿಂಚುತ್ತಿರುವ ಬಬಲ್ ಟೀ ಬಗ್ಗೆ ನಿಮಗೆಷ್ಟು ಗೊತ್ತು?
ಸಾಮಾಜಿಕ ಜಾಲತಾಣದಲ್ಲಿ ಬಬಲ್ ಟೀ ಅಥವಾ ಬಬಲ್ ಡ್ರಿಂಕ್ ರೀಲ್‌ಗಳ ಬಗ್ಗೆ ನೀವು ನೋಡಿರಬಹುದು. ಹೌದು ಏನಿದು ಬಬಲ್ ಟೀ ಡ್ರಿಂಕ್? ಯಾಕೆ ಜನರು ಬಬಲ್ ಟೀ ತುಂಬಾ ಇಷ್ಟ ಪಟ್ಟಿದ್ದಾರೆ. ಹಾಗಾದ್ರೆ ಈ ಬಬಲ್ ಟೀಯಲ್ಲಿ ಅಂಥಾದ್ದೇನಿದೆ ಎಂದು ಬನ್ನಿ ತಿಳಿಯೋಣ.
ಸದ್ಯ ಬಬಲ್ ಟೀ ಅನ್ನು 1980 ರ ದಶಕದಲ್ಲಿ ತೈವಾನ್ ನಲ್ಲಿ ಕಂಡು ಹಿಡಿಯಲಾಯಿತು. ಈ ಬಬಲ್ ಚಹಾ ಈಗ ಪ್ರಪಂಚದ ತುಂಬಾ ಪ್ರಸಿದ್ಧಿ ಪಡೆದಿದೆ. ಇದು ಪಶ್ಚಿಮ, ಯುರೋಪಿಯನ್ ಮತ್ತು ಏಷ್ಯಾದ ದೇಶಗಳಲ್ಲಿ ಅತ್ಯಂತ ಜನಪ್ರಿಯ ಚಹಾ ಆಗಿದೆ.
ಮುಖ್ಯವಾಗಿ ಡೂಡಲ್ ಕೇವಲ ಕೆಲವು ವಿಶೇಷ ದಿನ ಇಲ್ಲವೇ ಸಾಧಕರಿಗೆ ಗೌರವ ಸೂಚಿಸುವುದಕ್ಕಾಗಿ ಹಾಕಲಾಗುತ್ತದೆ. ಆದ್ರೆ ಇಂದು ಗೂಗಲ್ ಬಬಲ್ ಟೀನ ವಿಶೇಷ ಚಿತ್ರವನ್ನು ಹಂಚಿಕೊಂಡಿದ್ದು ಪ್ರಪಂಚದಾದ್ಯಂತ ಬಬಲ್ ಟೀ ಜನಪ್ರಿಯತೆಯನ್ನು ಆಚರಿಸುತ್ತಿದೆ. ಬಬಲ್ ಟೀ ಒಂದು ವಿಶೇಷ ಪಾನೀಯವಾಗಿದೆ. ಇದು ಹೆಚ್ಚಾಗಿ ಕೊರಾನಾ ಸಾಂಕ್ರಾಮಿಕ ಸಮಯದಲ್ಲಿ ಜನಪ್ರಿಯವಾಯಿತು. ಹೌದು ಕೊರೊನಾ ಅವಧಿಯಲ್ಲಿ ಬಬಲ್ ಟೀ ಜನಪ್ರಿಯತೆಯು ತುಂಬಾ ಹೆಚ್ಚಾಯಿತು, 2020 ರಲ್ಲಿ ಈ ದಿನದಂದು ಇದನ್ನು ಎಮೋಜಿ ಎಂದು ಘೋಷಿಸಲಾಯಿತು.
ಈ ಪಾನೀಯದ ಇತಿಹಾಸವು ತುಂಬಾ ಹಳೆಯದು. ಈ ಟೀ ಅನ್ನು ತೈವಾನ್‌ನಲ್ಲಿ ಹಲವು ವರ್ಷಗಳಿಂದ ಸೇವಿಸಲಾಗುತ್ತಿದೆ. ಈ ಚಹಾವನ್ನು ಪ್ರಪಂಚದಾದ್ಯಂತ ಪರ್ಲ್ ಟೀ, ಬ್ಲ್ಯಾಕ್ ಪರ್ಲ್ ಟೀ, ಬಿಗ್ ಪರ್ಲ್, ಪರ್ಲ್ ಶೇಕ್, ಬೋಬಾ ನೈ ಚಾಯ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಬಬಲ್ ಟೀ ಇದನ್ನು ಹಾಲು ಅಥವಾ ಹಸಿರು ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಬಲ್ ರೂಪವನ್ನು ನೀಡಲು ಟ್ಯಾಪಿಯೋಕಾದ ಸಣ್ಣ ಬಾಲ್‌ಗಳನ್ನು ಸೇರಿಸಲಾಗುತ್ತದೆ. ಟ್ಯಾಪಿಯೋಕಾ ಬಾಲ್‌ಗಳನ್ನು ಭಾರತದಲ್ಲಿ ಸಾಬುದಾನ ಎಂದು ಕರೆಯಲಾಗುತ್ತದೆ. ಅವು ಚಿಕ್ಕ, ದುಂಡಗಿನ ಗಾತ್ರದ ಉಂಡೆಗಳಾಗಿದ್ದು ತಿನ್ನಲು ರುಚಿಕರವಾಗಿರುತ್ತದೆ. ಆದ್ದರಿಂದ ಇದಕ್ಕೆ ಬಬಲ್ ಟೀ ಎಂದು ಹೆಸರು. ಇದರೊಂದಿಗೆ ಐಸ್ ಅನ್ನು ಕೂಡ ಸೇರಿಸಲಾಗುತ್ತದೆ.
ಇಷ್ಟೇ ಅಲ್ಲ ಬಬಲ್ ಟೀ ಇತರ ಅದ್ಭುತ ಪ್ರಯೋಜನ ನೀವು ತಿಳಿದುಕೊಳ್ಳಲೇ ಬೇಕು.
- ಒಂದು ಲೋಟ ಹಾಲು ನಮ್ಮ ದೇಹದ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಟ್ಯಾಪಿಯೋಕಾ ಚೆಂಡುಗಳಲ್ಲಿ ಲಭ್ಯವಿರುವ ಕಾರ್ಬೋಹೈಡ್ರೇಟ್ ಅಂಶವು ಮೆದುಳಿಗೆ Brain0 ಶಕ್ತಿಯ ಪ್ರಾಥಮಿಕ ಮೂಲವಾಗಿದೆ. ಇದು ಹೃದಯ ಸ್ನಾಯುಗಳು ಮತ್ತು ಕೇಂದ್ರ ನರಮಂಡಲಕ್ಕೆ ಇಂಧನವಾಗಿಯೂ ಕಾರ್ಯನಿರ್ವಹಿಸುತ್ತದೆ.
- ಬಬಲ್ ಟೀಯಲ್ಲಿರುವ ಹೆಚ್ಚಿನ ಪ್ರಮಾಣದ ಸಕ್ಕರೆಯು ತ್ವರಿತ ಶಕ್ತಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ತೈವಾನ್‌ನ ಈ ಅತ್ಯಂತ ಜನಪ್ರಿಯ ಆರೋಗ್ಯ ಪಾನೀಯದಲ್ಲಿ ಕೆಫೀನ್ ಅನ್ನು ಸಹ ಬಳಸಲಾಗುತ್ತದೆ. ಇದು ದಿನದ ಆಯಾಸವನ್ನು ತೆಗೆದುಹಾಕುವ ಮೂಲಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿದೆ.
- ಬಬಲ್ ಟೀ ರಕ್ತದೊತ್ತಡವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳಲ್ಲಿ ಕಂಡು ಬಂದಿದೆ. ಈ ಚಹಾವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಪಾರ್ಶ್ವವಾಯು ಮತ್ತು ಗಂಭೀರ ಹೃದಯ ಸಂಬಂಧಿ ಕಾಯಿಲೆಗಳ ಶಮನಕ್ಕೆ ಕಾರಣವಾಗಿದೆ.
- ನೀವು ಬಬಲ್ ಟೀ ಸೇವಿಸಿದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಚಹಾವು ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಕುಡಿಯುವುದರಿಂದ ಯಕೃತ್ತು, ಸ್ತನ, ಪ್ರಾಸ್ಟೇಟ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಈ ಚಹಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ಬಳಸುವ ಹಣ್ಣುಗಳಾದ ಬೆರಿಹಣ್ಣುಗಳು, ಸ್ಟ್ರಾಬೆರಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹೊಂದಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇಷ್ಟೆಲ್ಲಾ ಇತಿಹಾಸ ಹೊಂದಿರುವ ಮತ್ತು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಬಬಲ್ ಟೀ ಯನ್ನು ನೀವು ಕೂಡ ಒಮ್ಮೆ ಸವಿಯಲೇ ಬೇಕು.