ಚೆನ್ನಾಗಿ ತಿಂದ್ಕೊಂಡ್, ಉಂಡ್ಕೊಂಡು ಇದ್ದವನೇ ಸಾಯಂಕಾಲಕ್ಕೆ ರೈಟ್ ಹೇಳಿದ – ಜಿಮ್ ಬಗ್ಗೆ ಭಯ ಯಾಕೆ ಅಂದ ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಚಿತ್ರಕ್ಕಾಗಿ ಇನ್ನಿಲ್ಲದ ದೇಹ ಕಸರತ್ತು ಮಾಡಿದ್ದರು. ತನ್ನ ಬೃಹತ್ ದೇಹವನ್ನು ಹುರಿಗೊಳಿಸಿಕೊಂಡಿದ್ದರು. ಮೊದಲೇ ಅಷ್ಟೆತ್ತರದ ಆಳು, ಒಳ್ಳೆಯ ಮೈಕಟ್ಟು. ಈಗ ಜಿಮ್ ನಲ್ಲಿ ಬಾಡಿಯನು ತಿದ್ದಿ ತೀಡಿಕೊಂದು ಶರ್ಟ್‌ಲೆಸ್ ಆಗಿ ದರ್ಶನ ಕೊಟ್ಟಿದ್ದಾರೆ. ಹುಡುಗಿಯರು ನಿದ್ದೆ ಕಳೆದುಕೊಂಡಿದ್ದಾರೆ,ಅದಿರಲಿ.ಕೊರೋನಾ ಲಾಕ್‌ಡೌನ್ ಕಾಲೇನ ಉಂಡುಟ್ಟು ಬೆಳೆದ ಉಬ್ಬಿ ನಿಂತ ದರ್ಶನ್ ದಪ್ಪ ಕಳೆದ ಒಂದು ವರ್ಷದಿಂದ ಮತ್ತೆ ದೇಹ ದಂಡಿಸಲು ಮನಸ್ಸು ಮಾಡಿದ್ದರು. ಜಿಮ್ ಗೆ ಹೋದಾಗ ಅವರ ಮುಖದಿಂದ ಹಿಡಿದು, ದೇಹದ ಬಹುಭಾಗ ಉಬ್ಬಿ ಕೊಂಡು ಒಳ್ಳೆಯ ಗುಂಡುಮರಿ ಥರ ದರ್ಶನ್ ಕಾಣಿಸುತ್ತಿದ್ದರು. ಆದರೆ ಜಿಮ್ ನಲ್ಲಿ ಬೆವರಿನ ಜತೆ ತೂಕ ಇಳಿಯಲು ಆರಂಭವಾಯಿತು ನೋಡಿ, ಬರೋಬ್ಬರಿ 42 ಕೆಜಿ ತೂಕ ಮೈಯಿಂದ ಜಾರಿ ಹೋಗಿದೆ.
ಹಿಂದೆಯೆಲ್ಲ ಜಿಮ್ ನಲ್ಲಿ ಮೈಕಟ್ಟು ಬೆಳೆಸಿದವರು ಆರೋಗ್ಯವಂತರು ಅಂತ ಸಾಮಾನ್ಯ ಭಾವವಾಗಿತ್ತು. ಆದರೆ ಇತ್ತೀಚೆಗೆ ಸಣ್ಣವಯಸ್ಸಿನ ಹಲವು ಸೆಲೆಬ್ರಿಟಿಗಳು ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಿದ ಕಾರಣಕ್ಕೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇದರಿಂದ ಹೃದಯಾಘಾತದಂತಹ ಸಮಸ್ಯೆಗಳು ಜಿಮ್ ಮಾಡೋರಿಗೆ ಎದುರಾಗಬಹುದು ಎಂಬ ಭಯ ಆವರಿಸಿತ್ತು. ಇತ್ತೀಚೆಗೆ ಕೆಲವರು ಚಿಕ್ಕ ವಯಸ್ಸಿಗೆ ಕೊನೆಯುಸಿರೆಳೆಯಲು ಇದೇ ಕಾರಣ ಎನ್ನುವವರು ಕೂಡಾ ಇದ್ದಾರೆ. ಈ ಬಗ್ಗೆ ದರ್ಶನ್ ಅವರನ್ನು ಕೇಳಿದರೆ ದರ್ಶನ್ ಅವರು ಕೊಟ್ಟ ಉತ್ರ ವಿಭಿನ್ನವಾಗಿದೆ.
ಆರ್‌ಜೆ ಸುನೀಲ ಎಂಬವರ ‘ ಫ್ರಾಂಕ್ ಕಾಲ್ಸ್ ಯೂಟ್ಯೂಬ್ ‘ ಚಾನಲ್‌ಗೆ ನಟ ದರ್ಶನ್ ಸಂದರ್ಶನ ನೀಡಿದ್ದಾರೆ. ‘ಕ್ರಾಂತಿ’ ಸಿನಿಮಾ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ತೂಕ ಇಳಿಸಿದ್ದರ ಬಗ್ಗೆಯೂ ಈ ಸಂದರ್ಭದಲ್ಲಿ ವಿವರಿಸಿದ್ದಾರೆ.’ ನಾನು ಕ್ರಾಂತಿ ಚಿತ್ರಕ್ಕಾಗಿ ದಪ್ಪ ಇದ್ದವನು ಸಣ್ಣ ಆಗಿದ್ದೀನಿ. ಲಾಕ್‌ಡೌನ್ ಸಮಯದಿಂದ ಇಲ್ಲಿವರೆಗೆ ಇಲ್ಲಿವರ್ಗೂ ಲೆಕ್ಕ ಹಾಕಿದ್ರೆ, ಸುಮಾರು 42 ಕೆಜಿ ಕಮ್ಮಿ ಆಗಿದ್ದೀನಿ. ನಿನ್ನೆ ಶುರು ಮಾಡಿ ಇವತ್ತು ಕಮ್ಮಿ ಮಾಡಿದ್ದಲ್ಲ. ಒಂದು ಒಂದೂವರೆ ವರ್ಷದಿಂದ ತೂಕ ಕಮ್ಮಿ ಮಾಡಿಕೊಳ್ಳುತ್ತಿದ್ದೀನಿ. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಭಾರ ಇಳಿಸಿಕೊಳ್ಳುತ್ತಿದ್ದೇನೆ’ ಎಂದು ದರ್ಶನ್ ಹೇಳಿದ್ದಾರೆ.
ಈ ಸಂದರ್ಭ ಜಿಮ್ ಅಂದ್ರೆ ಭಯ ಯಾಕೆ ಅಂತ ಅವರು ಪ್ರಶ್ನಿಸಿದ್ದಾರೆ.”ಜಿಮ್ ಅಂದ್ರೆ ಭಯ ಯಾಕೆ, ತಿನ್ಕೊಂಡು ಉಣ್ಕೊಂಡು ಇದ್ದವನೇ ಸಾಯಂಕಾಲ ಹೊರಟೋದ. “ನಿಮಗೆ ಜಿಮ್ ಅಂದ್ರೆ ರಿಸ್ಕ್ ಅನ್ನಿಸಲಿಲ್ವಾ? ಕೆಲವರು ಜಿಮ್ ಮಾಡಲು ಇತ್ತೀಚೆಗೆ ಹೆದರಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ದರ್ಶನ್ ‘ಜಿಮ್ ಅಂದ್ರೆ ಭಯ ಯಾಕೆ ? ಚೆನ್ನಾಗಿ ತಿನ್ಕೊಂಡು ಉಣ್ಕೊಂಡು ಇದ್ದವನೇ ಸಾಯಂಕಾಲ ಹೊರಟೋದ. ನಾವು ನೋಡ್ತಿರುವಂತೆ, ನಮಗೆ ಗೊತ್ತಿರುವಂತೆ. ಅವನಿಗೆ ಬಿಪಿ, ಶುಗರ್ ಏನು ಇಲ್ಲ. ಬೆಳಗ್ಗೆ ತಿಂದ. ಮಧ್ಯಾಹ್ನ ಯಾಕೋ ಸ್ವಲ್ಪ ಕಷ್ಟ ಆಗುತ್ತಿದೆ ಎಂದ. 3 ಗಂಟೆಗೆ ಪಾರ್ಟಿನೇ ಇಲ್ಲ’ ಎಂದು ತನ್ನ ಮಾಮೂಲಿಯ ನೇರ ಮಾತಿನಲ್ಲಿ, ಸ್ವಲ್ಪ ನಾಟಕೀಯತೆ ಬೆರೆಸಿ ಸತ್ಯವನ್ನೇ ಹೇಳಿದ್ದಾರೆ.ಎಲ್ಲಾ ಹಣೆಬರಹ, ಟೈಂ ಬಂದ್ರೆ ಫಿಕ್ಸ್ !’ಭಗವಂತ ಮೊದ್ಲೇ ಬರೆದಿಟ್ಟಿರುತ್ತಾನೆ. ನೀನು ಈ ಟೈಂಗೆ ಬರ್ಬೇಕು ಅಂತ. ಅದಕ್ಕೆ ಫಿಕ್ಸ್ ಆಗಿಬಿಡಿ. ಏನೇನೋ ಥಿಂಕ್ ಮಾಡ್ಬೇಡಿ. ಇದು ಮಾಡಿದ್ರೆ ಅದು ಆಗ್ತೀನಿ; ಅದು ಮಾಡಿದ್ರೆ ಇದು ಆಗ್ತೀನಿ ಅಂತೆಲ್ಲಾ ಯೋಚಿಸ್ತಾ ಕೂರಬೇಡಿ. ಕುಡ್ಕೊಂಡು, ತಿನ್ಕೊಂಡು ಮಜಾ ಮಾಡ್ತಾ ಇದ್ದವರೆಲ್ಲಾ ಎಷ್ಟೋ ದಿನ ಬದುಕಿದ್ದಾರೆ. ಪಾಪ ಏನೂ ಮಾಡದೇ ಚೆನ್ನಾಗಿದ್ದವರು ಪಟ್ ಅಂತ ಹೋಗ್ಬಿಡ್ತಾರೆ. ಏನು ಊಹಿಸೋಕೆ ಸಾಧ್ಯ? ಎಲ್ಲಾ ಹಣೆಬರಹ ಅಷ್ಟೆ’ ಎಂದು ಸ್ವಲ್ಪ ಹತಾಶೆಯ ಮತ್ತಷ್ಟು ವಾಸ್ತವದ ಬಗ್ಗೆ ದರ್ಶನ್ ಮನಸ್ಸು ಬಿಚ್ಚಿ ಮಾತಾಡಿದ್ದಾರೆ.
ಮಾತಿನ ಮಧ್ಯೆ ಕ್ರಾಂತಿ ಚಿತ್ರದಲ್ಲಿ ಗ್ರಾಫಿಕ್ ಮಾಡಿದ ಸುದ್ದಿಯ ಬಗ್ಗೆ ಮಾತಾಡಿದ್ದಾರೆ. ಕ್ರಾಂತಿಯಲ್ಲಿ ಸಿಕ್ಸ್‌ಪ್ಯಾಕ್ ಗ್ರಾಫಿಕ್ಸ್ ಮಾಡಿರೋದಲ್ಲ. ಮೇಕಿಂಗ್ ಶಾರ್ಟ್ಸ್ ಎಲ್ಲಾ ಇದೆ. 100 ಜನರಲ್ಲಿ 10 ಜನ ಆಗದೇ ಇರುವವರು ಇರುತ್ತಾರೆ. ಅವರಿಗಾದರೂ ಆನ್ಸರ್ ಮಾಡ್ಬೇಕಲ್ಲ. ಪ್ರೂಫ್ ಗಾಗಿ ಮೇಕಿಂಗ್ ಇಟ್ಟಿದ್ದೀವಿ. ಈಗ ಖಂಡಿತ ಗ್ರಾಫಿಕ್ಸ್ ಇದೆ. ಏನೂ ಕಷ್ಟ ಬೀಳುವುದು ಬೇಕಾಗಿಲ್ಲ. ಬಟ್ಟೆ ಬಿಚ್ಚಿ ನಿಂತರೆ ಗ್ರಾಫಿಕ್ಸ್‌ನವರು ಸಿಕ್ಸ್‌ಪ್ಯಾಕ್, ಎಯ್ಟ್ ಪ್ಯಾಕ್, ಬೇಕಾದ್ರೆ10 ಪ್ಯಾಕ್ ಯಾವುದು ಬೇಕಾದರೂ ಮಾಡುತ್ತಾರೆ. ಅಂತಹಾ ಟೆಕ್ನಾಲಜಿ ಈಗ ಬಂದಿದೆ. ಅಲ್ಲಿ ನೀವು ಜನಕ್ಕೆ ಮೋಸ ಮಾಡಬಹುದು. ನಾನು ಅಲ್ಲಿಲ್ಲಿ ಓಡಾಡುತ್ತಿರುತ್ತೀನಿ. ದಾರೀಲಿ ಸಿಕ್ಕಾಗ ಇದೇನಯ್ಯಾ ಅಲ್ಲಿ ಹಂಗೆ ಕಾಣಿಸ್ತಾನೆ, ಇಲ್ಲಿ ಇಷ್ಟು ದಪ್ಪ ಇದ್ದಾನೆ ಅಂದ್ರೆ, ಜನಕ್ಕೆ ಡೌಟ್ ಬರುತ್ತಲ್ಲ? ‘ ಎಂದಿದ್ದಾರೆ ದಚ್ಚು.ದರ್ಶನ್ ಅವರು ಹಲವು ವರ್ಷಗಳಿಂದ ಜಿಮ್‌ನಲ್ಲಿ ವರ್ಕೌಟ್ ಮಾಡ್ತಾ ಬರ್ತಿದ್ದಾರೆ. ಈ ಹಿಂದೆ ಕೂಡ ‘ಐರಾವತ’ ಚಿತ್ರದಲ್ಲಿ ಶರ್ಟ್ ಲೆಸ್ ಆಗಿ ದರ್ಶನ ಕೊಟ್ಟು ಅಭಿಮಾನಿಗಳ ಮನ ಗೆದ್ದಿದ್ದರು ದರ್ಶನ್. ಇನ್ನು ‘ಕ್ರಾಂತಿ’ ಚಿತ್ರದಲ್ಲಿ ಇರೋದು ಸಿಕ್ಸ್‌ಪ್ಯಾಕ್ ಗ್ರಾಫಿಕ್ಸ್ ಎನ್ನುವವರಿಗೂ ದರ್ಶನ್ ಸ್ಪಷ್ಟ ಉತ್ತರ ನೀಡಿದ್ದಾರೆ.