50 ವಿದ್ಯಾರ್ಥಿಗಳ ತಲೆಕೂದಲಿಗೆ ಕತ್ತರಿ ಹಾಕಿದ ಶಿಕ್ಷಕ ; ಪೋಷಕರು ಫುಲ್ ಗರಂ!!

ಶಾಲಾವರಣದಲ್ಲಿ ಅದರದ್ದೇ ಆದ ನಿಯಮಾವಳಿಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕೂಡಾ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಮವಸ್ತ್ರವನ್ನು ನೀಟಾಗಿ ಹಾಕಬೇಕು, ಉಗುರನ್ನು ಮತ್ತು ಕೂದಲನ್ನು ಟ್ರಿಮ್ ಮಾಡಬೇಕು ಎಂಬುದು ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲು ನಿಯಮವಿದೆ ಮತ್ತು ಇದನ್ನು ಪ್ರತಿ ಬಾರಿಯು ಶಿಕ್ಷಕರು ನೆನಪಿಸುತ್ತಿರುತ್ತಾರೆ.ಆದರೆ, ಇಲ್ಲೊಂದು ಕಡೆ ಶಿಕ್ಷಕರೆ ಶಾಲಾ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ!! ವಿದ್ಯಾರ್ಥಿಗಳು ಈ ಒಂದು ತಪ್ಪನ್ನು ಮಾಡಿದಕ್ಕಾಗಿ ಶಿಕ್ಷಕರು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಾದರೆ ಆ ತಪ್ಪೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ತಲೆ ಕೂದಲು ಕತ್ತರಿಸಿದ್ದಾರೆ. ತಮ್ಮ ಅನುಮತಿ ಪಡೆಯದೆ ಮಕ್ಕಳ ಕೂದಲು ಕತ್ತರಿಸಿದ್ದಕ್ಕೆ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದದ್ದು, ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ. ತಮ್ಮ ಅನುಮತಿ ಇಲ್ಲದೆ ಟ್ರಿಮ್ಮರ್​ನಿಂದ ಮಕ್ಕಳ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೇಲಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.

ಈ ವೇಳೆ ಪ್ರವೇಶ ಪತ್ರದಲ್ಲಿ ಕೆಲವು ಷರತ್ತುಗಳಿದ್ದವು, ಅದಕ್ಕೆ ಪೋಷಕರು ಸಹಿ ಹಾಕಿದ್ದರು ಆದರೆ ಮಕ್ಕಳು ಆ ನಿಯಮಗಳನ್ನು ಪಾಲಿಸಿಲ್ಲ ಎಂದು ಶಾಲಾ ಆಡಳಿತವು ಹೇಳಿದೆ. ಮೊರಾದಾಬಾದ್‌ನ ಥಾನಾ ಮಜೋಲಾ ಪ್ರದೇಶದ ಕಾಶಿರಾಮ್ ನಗರದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಸೇಂಟ್ ಮೀರಾ ಅಕಾಡೆಮಿಯ ಪಿಟಿ ಶಿಕ್ಷಕ ಇಸ್ರಾರ್, ಶಾಲೆಯಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಅನುಮತಿಯಿಲ್ಲದೆ ಟ್ರಿಮ್ಮರ್‌ನಿಂದ ಕೂದಲನ್ನು ಕತ್ತರಿಸಿದ್ದಾರೆ ಎನ್ನುವ ಆರೋಪವಿದೆ. ಕ್ಷೌರದ ನಂತರ ಶಾಲೆಯ ಹಲವು ವಿದ್ಯಾರ್ಥಿಗಳು ಪೋಷಕರಿಗೆ ವಿಷಯವನ್ನು ತಿಳಿಸಿದ್ದಾರೆ. ನಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತಮ್ಮ ಬಳಿಗೆ ಬಂದು ದೂರು ನೀಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ಶಿಕ್ಷಕರು ಸುಮಾರು 50-60 ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಮತ್ತೊಂದೆಡೆ, ಸೇಂಟ್ ಮೀರಾ ಅಕಾಡೆಮಿಯ ನಿರ್ದೇಶಕಿ ಅಕ್ಷರಿ ಸಿಂಗ್, ಮಕ್ಕಳು ಕ್ಲೀನ್ ಸಮವಸ್ತ್ರವನ್ನು ಧರಿಸಿ ಬರಬೇಕು, ಅವರ ಉಗುರುಗಳನ್ನು ಟ್ರಿಮ್ ಮಾಡಬೇಕು ಮತ್ತು ಅವರ ಕೂದಲು ಚಿಕ್ಕದಾಗಿರಬೇಕು ಎಂದು ತಮ್ಮ ಶಾಲೆಯ ನಿಯಮವಿದೆ, ಆದರೆ ಕೆಲವು ಮಕ್ಕಳು ಪದೇ ಪದೇ ನೋಟಿಸ್ ನೀಡಿದ ನಂತರವೂ ಕತ್ತರಿಸಿರಲಿಲ್ಲ ಮತ್ತು ಕೂದಲು ಕತ್ತರಿಸಿರುವ ಮಕ್ಕಳ ಕುಟುಂಬಗಳಿಗೂ ಮೂರು ಬಾರಿ ನೋಟಿಸ್ ನೀಡಲಾಗಿದೆ. ಅವರು ನೋಟಿಸ್‌ನ ಪರಿಗಣನೆಗೆ ತೆಗೆದುಕೊಳ್ಳದಿದ್ದಾಗ, ಶಾಲೆಯ ನಿಯಮಗಳ ಪ್ರಕಾರ ಟ್ರಿಮ್ಮರ್‌ನಿಂದ ಮಕ್ಕಳ ಕೂದಲನ್ನು ಕತ್ತರಿಸಲಾಯಿತು ಎಂದಿದ್ದಾರೆ.

ಶಾಲಾ ನಿರ್ದೇಶಕರ ಪ್ರಕಾರ ತಾನು ಯಾವುದೇ ತಪ್ಪು ಮಾಡಿಲ್ಲ. ಶಾಲೆಯಲ್ಲಿ ಪ್ರವೇಶದ ಸಮಯದಲ್ಲಿ, ಶಾಲೆಯಲ್ಲಿನ ನಿಯಮಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿರುವಂತೆ ನೋಡಿಕೊಳ್ಳುತ್ತೇವೆ. ಈಗ ಪೋಷಕರು ಶಾಲೆಗೆ ಕಳಂಕವನ್ನು ತರಲು ಈ ರೀತಿಯಾಗಿ ದೋಷಾರೋಪಣೆ ಮಾಡುತ್ತಿದ್ದಾರೆ ಎಂದರು.

Leave A Reply

Your email address will not be published.