Home Breaking Entertainment News Kannada Rashmika Mandanna : ಕಿರಿಕ್ ಬೆಡಗಿಯ ಹೊಸ ಲವ್ ! ಹಾರ್ಟ್ ಸಿಂಬಲ್ ತೋರಿಸಿ ಸಿದ್ಧಾರ್ಥ್...

Rashmika Mandanna : ಕಿರಿಕ್ ಬೆಡಗಿಯ ಹೊಸ ಲವ್ ! ಹಾರ್ಟ್ ಸಿಂಬಲ್ ತೋರಿಸಿ ಸಿದ್ಧಾರ್ಥ್ ಜೊತೆ ಪಾರ್ಟಿ!!!

Hindu neighbor gifts plot of land

Hindu neighbour gifts land to Muslim journalist

‘ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದು ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಕ್ರಶ್ ಎಂದು ಫೇಮಸ್ ಆಗಿರುವ ರಶ್ಮಿಕಾ, ಸದ್ಯ ಸಕ್ಸಸ್ಗಳ ಅಲೆಯಲ್ಲಿ ತೇಲುತ್ತಿದ್ದಾರೆ. ಚಲೋ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟು, ತಮ್ಮ ಟ್ಯಾಲೆಂಟ್‌ ಮತ್ತು ಬ್ಯೂಟಿ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ತಿಂಗಳಲ್ಲಿ ಸತತ ಎರಡು ಸಿನಿಮಾಗಳ ಗೆಲುವನ್ನು ಕಂಡಿರುವ ಕನ್ನಡದ ಚೆಲುವೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.

ರಶ್ಮಿಕಾ ತಮ್ಮ ‘ಮಿಷನ್ ಮಜ್ನು’ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಲು ಸಖತ್ ಹಾಟ್ ಆಗಿ ಬಂದಿದ್ದರು. ಮಿನಿ ಸ್ಕರ್ಟ್ ಧರಿಸಿದ್ದ ರಶ್ಮಿಕಾ ಪಾರ್ಟಿಯಲ್ಲಿ ಎಲ್ಲರ ಮಧ್ಯೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಈ ವೇಳೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಾ, ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಲವ್ ಸಿಂಬಲ್ ಪೋಸ್‌ ಕೊಟ್ಟರು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸದ್ಯ ರಶ್ಮಿಕಾರ ಈ ಫೋಟೋಗಳಿಗೆ ಸೋಷಿಯಲ್ಸ್ ಫುಲ್ ಫಿದಾ ಆಗಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಗೀತ ಗೋವಿಂದಂ ಬಳಿಕ ರಶ್ಮಿಕಾ ಹಾಗೂ ವಿಜಯ್‌ ಬಗ್ಗೆ ಗಾಳಿ ಸುದ್ದಿಗಳು ಶುರುವಾಗಿತ್ತು. ಇದೀಗ ಸಿದ್ಧಾರ್ಥ ಮಲ್ಹೋತ್ರಾ ಜೊತೆ ರಶ್ಮಿಕಾ ಹಾರ್ಟ್‌ ಸಿಂಬಲ್‌ ಪೋಸ್‌ ಕೊಟ್ಟಿರುವುದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಅನೇಕ ಗಾಸಿಪ್‌ಗಳು ಶುರುವಾಗಿವೆ.

ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳನ್ನೂ ಮಾಡುತ್ತಿರುವ ರಶ್ಮಿಕಾ “ಗುಡ್ ಬೈ” ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಯ ಅಕಾಡಕ್ಕಿಳಿದಿದ್ದರು. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸುವ ಮೂಲಕ ಬಿ-ಟೌನ್ ಪ್ರೇಕ್ಷಕರನ್ನು ಸಹ ಸೆಳೆದುಕೊಂಡರು. ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮುಂಬರುವ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ಈ ಕಿರಿಕ್‌ ಬೆಡಗಿ ರೆಡಿಯಾಗಿದ್ದಾರೆ ಎನ್ನಲಾಗಿದೆ. ಈ ವಿಶೇಷ ಹಾಡಿನಲ್ಲಿ ನಟಿಸಲು ರಶ್ಮಿಕಾ ಸುಮಾರು ಐದು ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಹೀಗೆ ಬಾಲಿವುಡ್ ಮತ್ತು ಸೌತ್ ಸಿನಿಮಾ ಅಂತಾ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಸದ್ಯ ʻಪುಷ್ಪ 2ʼ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.