Home Breaking Entertainment News Kannada ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಹೃದಯಾಘಾತದಿಂದ ಸಾವು!!

ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಹೃದಯಾಘಾತದಿಂದ ಸಾವು!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಲಿಯಾಗುತ್ತಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮಂದೀಪ್ ರಾಯ್ (73) ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಬೆಂಗಳೂರಿನ ಭೈರಸಂಧ್ರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿಯ ವೇಳೆ ಮಂದೀಪ್ ರಾಯ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದು ಮೊದಲನೇ ಬಾರಿಯ ಹೃದಯಾಘಾತವಲ್ಲ ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಂದೀಪ್ ರಾಯ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಬೆಂಗಳೂರಿನ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಸ್ಯಾಂಡಲ್ ವುಡ್ ನ ಹಿರಿಯ ನಟ ಮಂದೀಪ್ ರಾಯ್ ಅವರು ಹಲವಾರು ಸಿನಿಮಾಗಳ ಮೂಲಕ ಜನರ ಮನಗೆದ್ದಿದ್ದರು. ಇವರು ಇಲ್ಲಿವರೆಗೂ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅದ್ಭುತ ಹಾಸ್ಯಗಾರನೂ ಹೌದು.