11 ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ ಈ ಸಿನಿಮಾ | ಯಾವ ಸಿನಿಮಾ ಗೊತ್ತಾ? ಅಂಥದ್ದೇನಿದೆ ಆ ಚಿತ್ರದಲ್ಲಿ?

ಆಸ್ಕರ್ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಓರಿಜಿನಲ್ ಸಾಂಗ್ ನಾಮ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರಗಳ ಜೊತೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು‘ ಸಾಂಗ್ ಕೂಡ ಸೇರಿಕೊಂಡಿದೆ. ತೆಲುಗಿನ ‘ನಾಟು ನಾಟು’ ಬೆಸ್ಟ್ ಓರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಇನ್ನೂ ಇದರ ಜೊತೆಗೆ ಭಾರತದ ಆಲ್ ದಟ್ ಬ್ರೀಥ್ಸ್’, ಮತ್ತು ದಿ ಎಲೆಫೆಂಟ್ ವಿಸ್ಪರರ್ಸ್’ ಎಂಬು ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದೆ.

ಹಾಗೇ ಹಾಲಿವುಡ್‌ನ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಸಿನಿಮಾ ಬರೋಬ್ಬರಿ 11 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. 11 ವಿಭಾಗದಲ್ಲಿ ನಾಮಿನೇಟ್ ಆಗಿದೆ ಅಂದ್ರೆ ಈ ಸಿನಿಮಾದಲ್ಲಿ ಅಂಥಾದ್ದೇನಿದೆ? ಅಷ್ಟೊಂದು ಚೆನ್ನಾಗಿದೆಯಾ? ಎಂದು ಇದೀಗ ಕೆಲವರು ಮುಗಿಬಿದ್ದು ನೋಡುತ್ತಿದ್ದಾರೆ.

ಅಮೇರಿಕಾದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಹಲವು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿದೆ. ಉತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ನಟಿ, ಉತ್ತಮ ಒರಿಜಿನಲ್ ಸಾಂಗ್, ಉತ್ತಮ ಪೋಷಕ ನಟ, ಉತ್ತಮ ಪೋಷಕ ನಟಿ, ಉತ್ತಮ ಕಾಸ್ಟ್ಯೂಮ್ ಡಿಸೈನರ್, ಉತ್ತಮ ಸ್ಕ್ರೀನ್‌ಪ್ಲೇ ಸೇರಿದಂತೆ 11 ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಿದೆ.

ಈ ಚಿತ್ರಕ್ಕೆ ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸ್ಕಿನರ್ಟ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಗೇ ಮಿಚ್ಚೆಲೆ ಯೆಹ್, ಸ್ಟೇಫನಿ ಹು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಓಟಿಟಿ ಫ್ಲಾಟ್‌ಫಾರ್ಮ್‌ಗೂ ಬಂದಿದೆ. ಸದ್ಯ ಸಿನಿಮಾ ನೋಡಿ ಜನರು ಮೆಚ್ಚಿಕೊಂಡಿದ್ದಾರೆ.

Leave A Reply

Your email address will not be published.