BPNL Recruitment 2023: ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ | ಪಶುಪಾಲನಾ ನಿಗಮದಲ್ಲಿ 2826 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಪಿಯುಸಿ ಡಿಗ್ರಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹದು. ಕೇಂದ್ರ ಸರಕಾರದ ಉದ್ಯೋಗ ಬಯಸುವವರು ಈ ನಿಟ್ಟಿನಲ್ಲಿ ಹುದ್ದೆಗೆ ಅಪ್ಲೈ ಮಾಡಬಹುದು. ಅಂದ ಹಾಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆ.5, 2023 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಂಸ್ಥೆ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್
ಹುದ್ದೆ : ಟ್ರೇನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆ : 2826
ವಿದ್ಯಾರ್ಹತೆ : ಪಿಯುಸಿ, ಡಿಗ್ರಿ
ವೇತನ ಮಾಸಿಕ : ₹10,000- 18,000
ಉದ್ಯೋಗದ ಸ್ಥಳ : ಭಾರತ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 5, 2023

ಹುದ್ದೆಯ ಮಾಹಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 314 ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಾಸಾಗಿರಬೇಕು.
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 628 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ತೇರ್ಗಡೆ ಹೊಂದಿರಬೇಕು.
ಆಫೀಸ್ ಅಸಿಸ್ಟೆಂಟ್-314 ಹುದ್ದೆಗಳು. ಪಿಯುಸಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಟ್ರೇನರ್- 942 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ಪಾಸಾಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್- 628 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪಾಸಾಗಿರಬೇಕು.

ಅರ್ಜಿ ಶುಲ್ಕ:
ಸೆಂಟ್ರಲ್ ಸೂಪರಿಂಟೆಂಡೆಂಟ್- 945 ರೂ.
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 828 ರೂ.
ಆಫೀಸ್ ಅಸಿಸ್ಟೆಂಟ್- 708 ರೂ.
ಟ್ರೇನರ್- 591 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- 472 ರೂ.
ಪಾವತಿಸುವ ಬಗೆ- ಆನ್​ಲೈನ್

ವಯೋಮಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 25 ರಿಂದ 45 ವರ್ಷ
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 21 ರಿಂದ 40 ವರ್ಷ
ಆಫೀಸ್ ಅಸಿಸ್ಟೆಂಟ್- 21 ರಿಂದ 40 ವರ್ಷ
ಟ್ರೇನರ್- 21 ರಿಂದ 40 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 21 ರಿಂದ 30 ವರ್ಷ. ಅಂದ ಹಾಗೆ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ: ಸೆಂಟ್ರಲ್ ಸೂಪರಿಂಟೆಂಡೆಂಟ್- ವೇತನ 18,000 ರೂ.
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್-ವೇತನ 15,000 ರೂ.
ಆಫೀಸ್ ಅಸಿಸ್ಟೆಂಟ್-ವೇತನ 12,000 ರೂ.
ಟ್ರೇನರ್- ವೇತನ 15,000 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- ವೇತನ 10,000 ರೂ.

ಅಭ್ಯರ್ಥಿಗಳನ್ನು ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Leave A Reply

Your email address will not be published.