ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇನ್ನು ಮುಂದೆ ಇವರು ಕೂಡಾ ಅರ್ಹರು !

ಈಗಾಗಲೇ ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ 2021ರ ಏ.9ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಸರ್ಕಾರವು ಮಕ್ಕಳಿಲ್ಲದ ವಿಚ್ಚೇದಿತ ಪುರುಷ ಅಥವಾ ಮಹಿಳೆ ಸರ್ಕಾರಿ ನೌಕರಿಯಲ್ಲಿ ಇರುವಾಗಲೇ ಮೃತಪಟ್ಟರೆ, ಅವರ ಅವಲಂಬಿತ ಸಹೋದರ, ಸಹೋದರಿಯರಿಗೆ ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದು ಎಂದು ಬುಧವಾರ ಸುತ್ತೋಲೆ ಹೊರಡಿಸಿದೆ.

ಮೃತ ವಿಚ್ಚೇದಿತ ನೌಕರರಿಗೆ ಮಕ್ಕಳಿದ್ದರೆ ನಿಯಮ ಅನುಸಾರವಾಗಿ ಅಂತಹ ಮಕ್ಕಳು ಅವರ ಮೇಲೆ ಅವಲಂಬಿತರಾಗಿರಬೇಕು. ಅವರ ಜತೆ ವಾಸಿಸುತ್ತಿರಬೇಕು. ವಿವಾಹಿತ ನೌಕರರು ಮೃತಪಟ್ಟರೆ ಅವರ ಪತಿ ಅಥವಾ ಪತ್ನಿ, ಮಕ್ಕಳು, ಅವಿವಾಹಿತರಾಗಿದ್ದರೆ ಅವರ ಸಹೋದರ, ಸಹೋದರಿಯರು ಅನುಕಂಪದ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಮುಖ್ಯವಾಗಿ ನೇಮಕಾತಿಗೆ ಪರಿಗಣಿಸುವ ಮೊದಲು ಮೃತರ ಮೇಲೆ ಅವಲಂಬಿತವಾಗಿರುವ, ಅವರ ಜತೆ ವಾಸಿಸುತ್ತಿರುವ ಕುರಿತು ದೃಢೀಕರಿಸುವ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Leave A Reply

Your email address will not be published.