ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಎಂಟ್ರಿ ಕೊಟ್ಟರು ಕಳ್ಳರು | ಅನಂತರ ಹೆದರಿ ಓಡಿ ಹೋದವರಿಗೆ ನಿಜವಾಗಲೂ ಆಗಿದ್ದೇನು?
ಎಷ್ಟೇ ಬುದ್ಧಿವಂತ ಕಳ್ಳನಾದರೂ ಸಹ ಒಂದು ಬಾರಿ ಸಿಕ್ಕಿ ಹಾಕಿಕೊಳ್ಳಲೇ ಬೇಕು. ಕಳ್ಳರ ಕೈ ಚಳಕಕ್ಕೆ ತಕ್ಕಂತೆ ನಾವು ಸಹ ಮುಂದುವರಿದರೆ ಕಳ್ಳತನಕ್ಕೆ ಅವಕಾಶ ಇರುವುದಿಲ್ಲ. ಹೌದು ಆರು ತಿಂಗಳಿಂದ ಮಾಲೀಕರಿಲ್ಲದ ಮನೆಯನ್ನು ಗುರುತಿಸಿಕೊಂಡು ಕಳ್ಳತನಕ್ಕೆ ಬಂದಿದ್ದ ಖದೀಮರು ಮನೆಯಲ್ಲಿ ಯಾರೂ ಇಲ್ಲದಿದ್ದರೂ ಹೆದರಿ ಓಡಿಹೋದ ಪ್ರಸಂಗವೊಂದು ನಡೆದಿದೆ.
ಹೊಸೂರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗದಲ್ಲಿರುವ ಇವರು ಕಳೆದ ಆರು ತಿಂಗಳಿಂದ ಅಲ್ಲೇ ನೆಲೆಸಿದ್ದರಿಂದ, ಈ ಮನೆ ಖಾಲಿ ಉಳಿದಿತ್ತು. ಹೀಗಾಗಿ ಕಳ್ಳರು ಇಲ್ಲಿ ಕಳವಿಗೆ ಯತ್ನಿಸಿದ್ದರು. ತಿಂಗಳುಗಟ್ಟಲೆ ಮನೆಯಿಂದ ದೂರ ಇರಬೇಕಾದ ಪರಿಸ್ಥಿತಿ ಇರುವುದರಿಂದ ಕಾರ್ತಿಯನ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮರಾ ಮತ್ತು ಅಲಾರ್ಮ್ ಕೂಡ ಅಳವಡಿಸಿದ್ದರು. ಈ ಮನೆಯಲ್ಲಿನ ಕಳ್ಳತನಕ್ಕಾಗಿ ಮೂವರು ಕಳ್ಳರು ಬೈಕ್‌ನಲ್ಲಿ ಬಂದಿದ್ದರು. ಕೈಯಲ್ಲಿ ರಾಡ್ ಹಿಡಿದು ಮನೆಯ ಕಾಂಪೌಂಡ್ ಹತ್ತಿ ಒಳಗೂ ಹೋಗಿದ್ದರು.
ಈ ವೇಳೆ ಸಿಸಿಟಿವಿಗೆ ಅಳವಡಿಸಿದ್ದ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದ್ದು, ಕೂಡಲೇ ಅದರಲ್ಲಿನ ಅಲಾರ್ಮ್ ಸೌಂಡ್ ಆಗಿದೆ. ಅದರ ಶಬ್ದಕ್ಕೆ ಬೆಚ್ಚಿ ಬಿದ್ದ ಕಳ್ಳರು ಹೆದರಿ ಓಡಿಹೋಗಿದ್ದರು.
ಇನ್ನೇನು ತೋಳ ಹಳ್ಳಕ್ಕೆ ಬಿತ್ತು ಅಂದುಕೊಂಡು ಕಳ್ಳರ ಚಲನವಲನದ ದೃಶ್ಯ ಸಿಸಿಟಿವಿ ಕ್ಯಾಮರ ಆಧಾರಿಸಿ ಗಂಧಿಕುಪ್ಪಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ತಮಿಳುನಾಡಿನ ಕೃಷ್ಣಗಿರಿ ಸಮೀಪದ ಗಂಧಿಗುಪ್ಪಂ ಎಂಬಲ್ಲಿರುವ ಖಾಸಗಿ ಕಂಪನಿಯ ಉದ್ಯೋಗಿ ಕೀರ್ತಿಯನ್ ಅವರ ಮನೆಯಲ್ಲಿ ಈ ಕಳ್ಳತನ ಯತ್ನ ನಡೆದಿದೆ ಎಂದು ಮಾಹಿತಿ ದೊರೆತಿದೆ.