7th Pay Commission : ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಇಲ್ಲಿದೆ!!!

ಫೆ.1ರಂದು ಮಂಡಿಸಲಿರುವ ಬಜೆಟ್ ನಲ್ಲಿ ಕೇಂದ್ರ ನೌಕರರಿಗೆ ಸರಕಾರದಿಂದ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಈ ಬಾರಿ ಕೇಂದ್ರ ನೌಕರರ ವೇತನ ಪರಿಷ್ಕರಣೆ ಮುಂದಿನ ವೇತನ ಆಯೋಗದ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಡೆಯಲಿದೆ.

ಬಜೆಟ್‌ನಲ್ಲಿ ಉದ್ಯೋಗಿಗಳಿಗೆ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದ್ದು, ಮೊದಲನೆಯ ಘೋಷಣೆಯಿಂದ ಉದ್ಯೋಗಿಗಳಿಗೆ ಪರಿಹಾರ ಸಿಗಬಹುದು ಎಂದು ಊಹಿಸಲಾಗಿದೆ. ಆದರೆ ಎರಡನೇ ಘೋಷಣೆ ಜೇಬಿನ ಮೇಲೆ ಕತ್ತರಿ ಬೀಳುವ ಸಾಧ್ಯತೆ ಕೂಡ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ 2023 ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗುವ ಸಂಭವ ಹೆಚ್ಚಿದ್ದು, ಈ ವರ್ಷದ ಆರಂಭದಿಂದಲೇ ನೌಕರರು ತುಟ್ಟಿಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಬಜೆಟ್ ನಂತರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರೀಕ್ಷೆ ಇದೆ. ಈ ಬಾರಿ ತುಟ್ಟಿಭತ್ಯೆ ಶೇ.41ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಹೆಚ್ಚಳ ಜನವರಿ 1ರಿಂದ ಜಾರಿಯಾಗಲಿದೆ. ಫೆ.1ರಂದು ಮಂಡಿಸಲಿರುವ ಬಜೆಟ್ ನಲ್ಲಿ ಕೇಂದ್ರ ನೌಕರರಿಗೆ ಸರಕಾರದಿಂದ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ಸಂಭವ ಹೆಚ್ಚಿದ್ದು, ಇದಕ್ಕೂ ಮುನ್ನ ತುಟ್ಟಿಭತ್ಯೆ ಅಂಕಿ ಅಂಶ ಜನವರಿ 31ರಂದು ಜಾರಿಯಾಗಲಿದೆ. ಇದರಿಂದ ಈ ಬಾರಿ ನೌಕರರ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದು ತಿಳಿಯಲಿದೆ.

ಬಜೆಟ್‌ನಲ್ಲಿ ಹೌಸ್ ಬಿಲ್ಡಿಂಗ್ ಭತ್ಯೆ ಕೂಡ ಘೋಷಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ, ಮನೆ ನಿರ್ಮಿಸಲು ಅಥವಾ ದುರಸ್ತಿ ಮಾಡಲು ಸರ್ಕಾರವು ಮುಂಗಡವಾಗಿ ನೀಡುತ್ತಿರುವ ಹಣದ ಮೇಲಿನ ಬಡ್ಡಿ ದರವು 7.1% ಆಗಿದೆ. ಪ್ರಸ್ತುತ ಉದ್ಯೋಗಿ ಹೌಸ್ ಬಿಲ್ಡಿಂಗ್ ಭತ್ಯೆಯನ್ನು 25 ಲಕ್ಷದವರೆಗೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಈ ಮೊತ್ತವನ್ನು 30 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದ್ದು, ಬಡ್ಡಿದರವನ್ನು ಕೂಡಾ 7.1% ರಿಂದ 7.5% ಕ್ಕೆ ಹೆಚ್ಚಳ ಮಾಡಬಹುದು.

ಇಲ್ಲಿಯವರೆಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರೂಪಿಸಲಾಗಿದ್ದು, 2014 ರಲ್ಲಿ, ಏಳನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ. ಇದರಲ್ಲಿ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಮೂಲ ವೇತನವನ್ನು ಹೆಚ್ಚಿಸಿ ನೌಕರರ ವೇತನವನ್ನು ಬದಲಾವಣೆ ತರಲಾಗಿದೆ. ಹೀಗಾಗಿ, ಉನ್ನತ ಮಟ್ಟದ ನೌಕರರಿಗೆ ಇದರ ಪ್ರಯೋಜನ ದೊರೆಯುತ್ತಿದ್ದು ಕೆಳಮಟ್ಟದ ನೌಕರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುಕೂಲವಾಗಿಲ್ಲ ಎನ್ನಲಾಗಿದೆ. ಹೀಗಿರುವಾಗ ಮಾಜಿ ವಿತ್ತ ದಿವಂಗತ ಅರುಣ್ ಜೇಟ್ಲಿ ನೀಡಿರುವ ಸೂತ್ರದತ್ತ ಸರ್ಕಾರ ನಿಗಾ ವಹಿಸಬಹುದು ಎಂಬುದು ಬಲ್ಲವರ ಎಣಿಕೆಯಾಗಿದೆ.

ಸರ್ಕಾರಿ ನೌಕರರ ವೇತನವನ್ನು 10 ವರ್ಷಕ್ಕೊಮ್ಮೆ ಹೆಚ್ಚಿಸುವ ಬದಲಿಗೆ ಪ್ರತಿ ವರ್ಷ ಹೆಚ್ಚಳ ಮಾಡಿದ್ದಲ್ಲಿ ಕೆಳಹಂತದಲ್ಲಿ ಕೆಲಸ ಮಾಡುವ ನೌಕರರು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಸರಿಸಮಾನವಾಗಿ ವೇತನ ಪಡೆಯುವ ಅವಕಾಶ ಲಭ್ಯವಾಗಲಿದೆ. ಹೊಸ ವೇತನ ಆಯೋಗ ರಚನೆಗೂ ಮುನ್ನ ಸರ್ಕಾರವು ನೌಕರರ ವೇತನವನ್ನು ಪರಿಷ್ಕರಿಸಲು ಹೊಸ ಸೂತ್ರವನ್ನು ಪರಿಚಯಿಸಿ, ಅದನ್ನು ಬಜೆಟ್‌ನಲ್ಲಿಯೂ ಸೇರಿಸಬಹುದು ಎಂಬುದು ಬಲ್ಲವರ ಅನಿಸಿಕೆಯಾಗಿದೆ.

Leave A Reply

Your email address will not be published.